ಕರ್ನಾಟಕ

karnataka

ಒತ್ತಡದ ಬಗ್ಗೆ ಬೇಡ ನಿರ್ಲಕ್ಷ್ಯ; ಬಲು ಗಂಭೀರ ಪರಿಣಾಮ ಎದುರಿಸಬೇಕಾದೀತು ಜೋಕೆ! - Stress may not only affect mentally

By IANS

Published : Apr 24, 2024, 10:40 AM IST

http://10.10.50.85:6060/reg-lowres/24-April-2024/stress_2404newsroom_1713931582_220.jpg
http://10.10.50.85:6060/reg-lowres/24-April-2024/stress_2404newsroom_1713931582_220.jpg

ಇಂದಿನ ವೇಗದ ಜಗತ್ತಿನಲ್ಲಿ ಜನರು ಅನಿರೀಕ್ಷಿತ ಮಟ್ಟದ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಸವಾಲುಗಳ ಏರಿಕೆಗೂ ಕಾರಣವಾಗುತ್ತಿದೆ.

ನವದೆಹಲಿ: ಒತ್ತಡ ಎಂಬುದು ಕೇವಲ ಮಾನಸಿಕ ಆರೋಗ್ಯವನ್ನು ಮಾತ್ರವಲ್ಲ, ದೈಹಿಕ ಆರೋಗ್ಯದ ಮೇಲೆ ಕೂಡ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಏಪ್ರಿಲ್​ ತಿಂಗಳು ಒತ್ತಡ ಅರಿವಿನ ಮಾಸವಾಗಿದ್ದು, ಈ ನಿಟ್ಟಿನಲ್ಲಿ ಒತ್ತಡದ ಸಮಸ್ಯೆ ಹಾಗೂ ಅದರ ಪರಿಣಾಮಗಳ ಕುರಿತು ಅರಿವು ಮೂಡಿಸುವ ಯತ್ನ, ತಿಂಗಳು ಪೂರ್ತಿ ಸಾಗಲಿದೆ.

ಇಂದಿನ ಓಡುತ್ತಿರುವ ಜಗತ್ತಿನಲ್ಲಿ ಜನರು ಅನಿರೀಕ್ಷಿತ ಮಟ್ಟದ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಸವಾಲುಗಳ ಏರಿಕೆಗೆ ಕಾರಣವಾಗುತ್ತಿದೆ. ಒತ್ತಡವು ಮಾನಸಿಕ ಯೋಗಕ್ಷೆಮದ ಮೇಲೆ ಪರಿಣಾಮ ಬೀರುವ ಜೊತೆಗೆ ದೇಹದ ಮೇಲೆ ಕೂಡ ಆಳವಾದ ಪರಿಣಾಮ ಬೀರಿ, ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ ಎಂದು ಗುರುಗ್ರಾಮದ ಆರ್ಟಿಮಿಸ್​ ಆಸ್ಪತ್ರೆಯ ನ್ಯೂರೋ ಇಂಟರ್ವೆನ್ಷನ್ ನಿರ್ದೇಶಕ ವಿಪುಲ್​ ಗುಪ್ತಾ ತಿಳಿಸಿದ್ದಾರೆ.

ಒತ್ತಡವು ನಿದ್ರೆಗೆ ಅಡ್ಡಿಪಡಿಸುವುದರಿಂದ, ನಿದ್ರಿಸಲು ತೊಂದರೆ ಉಂಟಾಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವ ವಾಯುಗಳಂತಹ ಹೃದಯ ರಕ್ತನಾಳದ ಕಾಯಿಲೆಗಳು ಹೆಚ್ಚಾಗುವಂತೆ ಮಾಡುತ್ತದೆ. ದೀರ್ಘಕಾಲದ ಒತ್ತಡವು ದೈಹಿಕ ಪ್ರತಿಕ್ರಿಯೆಗಳ ಕ್ಯಾಸ್ಕೇಡ್ ಅನ್ನು ಪ್ರಚೋದಿಸುತ್ತದೆ. ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್​ನಂತಹ ಒತ್ತಡದ ಹಾರ್ಮೋನುಗಳ ಹೆಚ್ಚಾದಾಗ ಇದು ಸಾಮಾನ್ಯ ದೈಹಿಕ ಕಾರ್ಯಗಳನ್ನು ಅಡ್ಡಿಪಡಿಸಬಹುದು.

ಅಷ್ಟೇ ಅಲ್ಲದೇ ಇರಿಟೇಬಲ್​​ ಬೊವೆಲ್​ ಸಿಂಡ್ರೋಮ್​ (ಐಬಿಎಸ್​)ನಂತಹ ಜೀರ್ಣಕಾರಿ ಸಮಸ್ಯೆಗೆ ಕಾರಣವಾಗಬಹುದು. ಇದು ಕರುಳಿನ ಚಲನೆಯನ್ನು ಅಡ್ಡಿಪಡಿಸಿ, ಉರಿಯೂತವನ್ನು ಉಲ್ಬಣಗೊಳಿಸುತ್ತದೆ. ದೀರ್ಘಕಾಲದ ಒತ್ತಡವು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದಿದ್ದಾರೆ.

2023ರ ಡಿಸೆಂಬರ್​​ನಲ್ಲಿ ಐಸಿಐಸಿಐ ಲೊಂಬಾರ್ಡ್​​ ಜನರಲ್​ ಇನ್ಸೂರೆನ್ಸ್​ ನಡೆಸಿದ್ದ ಅಧ್ಯಯನದಲ್ಲಿ ಭಾರತದಲ್ಲಿ ಮೂರರಲ್ಲಿ ಒಬ್ಬ ವ್ಯಕ್ತಿ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಅಂಶ ಬಯಲಾಗಿತ್ತು. ಶೇ 77ರಷ್ಟು ಭಾರತೀಯರು ಒತ್ತಡದ ಕನಿಷ್ಠ ಒಂದು ಲಕ್ಷಣವನ್ನಾದರೂ ನಿಯಮಿತವಾಗಿ ಹೊಂದಿರುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಸಮಾಧಾನದ ಅಭ್ಯಾಸ, ಆರೋಗ್ಯಯುತ ಜೀವನಶೈಲಿ, ನಿಯಮಿತ ವ್ಯಾಯಾಮ, ಸಾಮಾಜಿಕ ಸಂಪರ್ಕ ಇತ್ಯಾದಿಗಳು ಒತ್ತಡವನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ನಿರ್ಣಾಯಕಾರಿಯಾಗಿದೆ. ಈ ಕುರಿತು ಮಾತನಾಡಿರುವ ಮಾನಶಾಸ್ತ್ರಜ್ಞೆ ಮನಸಿನ ಸಾವಧಾನತೆ, ಧ್ಯಾನ ಮತ್ತು ಆಳವಾದ ಉಸಿರಾಟದ ಮೂಲಕ ಈ ಸಮಸ್ಯೆ ಎದುರಿಸಬಹುದು ಎಂದಿದ್ದಾರೆ.

ಒತ್ತಡವನ್ನು ಗುರುತಿಸಿ, ವೃತ್ತಿಪರರಿಂದ ಸಹಾಯ ಪಡೆಯುವುದು ಅವಶ್ಯವಾಗಿದೆ. ಈ ರೋಗಲಕ್ಷಣಗಳನ್ನು ಮುಂದುವರಿದರೆ ಅದು ದೈನಂದಿನ ಕಾರ್ಯಚಟುವಟಿಕೆ ಅಡ್ಡಿಯಾಗುತ್ತದೆ ಅಥವಾ ಇದು ಯಾವುದೇ ದೈಹಿಕ ಕಾಯಿಲೆಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾನಸಿಕೆ ಆರೋಗ್ಯ ವೃತ್ತಿಪರರ ಸಲಹೆ ಅಗತ್ಯವಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಹದಿಹರೆಯದವರಲ್ಲಿ ಕಾಡುವ ಖಿನ್ನತೆ; ಇದರ ಲಕ್ಷಣ ಪತ್ತೆ ಹೇಗೆ?

ABOUT THE AUTHOR

...view details