ETV Bharat / health

ಈ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಶುಗರ್ ​- ಬಿಪಿಯಿಂದ ಬಳಲುತ್ತಿದ್ದಾರೆ; ಈ ವರ್ಗದಲ್ಲೇ ಶೇ 50 ರಷ್ಟು ಸಾವು; ಹುಷಾರ್​ ಆಗಿರಿ! - Deaths Increase Health Issues

author img

By ETV Bharat Karnataka Team

Published : May 18, 2024, 5:09 PM IST

Blood Pressure, Diabetes Patients ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡದ ಜೀವನದಿಂದಾಗಿ ಮಧುಮೇಹವು ಚಿಕ್ಕವರು ಅಥವಾ ಹಿರಿಯರು ಎಂಬ ಭೇದವನ್ನು ತೋರದೇ ಪ್ರತಿಯೊಬ್ಬರಲ್ಲೂ ಬಹಳ ವೇಗವಾಗಿ ಹರಡುತ್ತಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಹಳಷ್ಟು ಜನ ಬಳಲುತ್ತಿದ್ದಾರೆ. 2000 ಮತ್ತು 2001ರ ನಡುವೆ ಅಂತಹ ತೊಡಕುಗಳಿಂದಾಗಿ ಸಾವಿನ ಸಂಖ್ಯೆ 50 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

blood-pressure-and-diabetes-patients-years-lost-to-poor-health-due-to-blood-pressure
ಈ ವಯಸ್ಸಿನವರು ಹೆಚ್ಚಿನ ಶುಗರ್​- ಬಿಪಿಯಿಂದ ಬಳಲುತ್ತಿದ್ದಾರೆ; ಈ ವರ್ಗದಲ್ಲೇ ಶೇ 50 ರಷ್ಟು ಸಾವು (Blood Pressure And Diabetes(Source : Getty Images))

ಹೈದರಾಬಾದ್: ಬದಲಾಗುತ್ತಿರುವ ಜೀವನ ಶೈಲಿಯು ಜನರಲ್ಲಿ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಹೆಚ್ಚಾಗುವಂತೆ ಮಾಡಿದೆ. ಇತ್ತೀಚಿನ ವರದಿಯಲ್ಲಿ ದಿ ಲ್ಯಾನ್ಸೆಟ್ ಜರ್ನಲ್ 2000-2001ರ ನಡುವೆ ಇಂತಹ ಸಮಸ್ಯೆಗಳಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 50 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

15-49 ವರ್ಷ ವಯಸ್ಸಿನ ಜನರು ವಿಶೇಷವಾಗಿ ಹೆಚ್ಚಿನ BMI ಮತ್ತು ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಗೆ ಒಳಗಾಗುತ್ತಾರೆ, ಇವೆರಡೂ ಮಧುಮೇಹದ ಅಪಾಯವನ್ನು ಹೆಚ್ಚುವಂತೆ ಮಾಡಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ವರದಿ ಪ್ರಕಾರ, ಅಧಿಕ ರಕ್ತದೊತ್ತಡ ಮತ್ತು ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ ಕೂಡಾ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಕಾರಣಗಳಿಂದ ಅಕಾಲಿಕ ಮರಣಗಳು ಹೆಚ್ಚಾಗುತ್ತಿವೆ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.

ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಯುವಜನರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ ಎಂದು ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಮೈಕೆಲ್ ಬ್ರೌರ್ ಹೇಳಿದ್ದಾರೆ. ಜೀವನಶೈಲಿಯಲ್ಲಿನ ಬದಲಾವಣೆಗಳು ಯುವಜನರಲ್ಲಿ ಅಕಾಲಿಕವಾಗಿ ವಯಸ್ಸಾದಂತೆ ಕಾಣಲು ಕಾರಣವಾಗುತ್ತವೆ ಎಂದು ಬ್ರೌರ್ ಅಭಿಪ್ರಾಯಪಟ್ಟಿದ್ದಾರೆ. IHME ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (GBD) ಸಹ ಇದೇ ರೀತಿಯ ಅಧ್ಯಯನ ಫಲಿತಾಂಶಗಳನ್ನು ಬಹಿರಂಗಪಡಿಸಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಗಂಭೀರ ಸಮಸ್ಯೆಯಾಗುವ ಸಾಧ್ಯತೆ ಇದೆ.

ಸಂಶೋಧಕರು 1990 ರಿಂದ 2021 ರವರೆಗೆ 204 ದೇಶಗಳಲ್ಲಿ ರೋಗಗಳ ಬಗ್ಗೆ ಸಮಗ್ರ ಅಧ್ಯಯನಗಳನ್ನು ಕೈಗೊಂಡಿದ್ದರು. ಜನಸಂಖ್ಯೆ, ಮರಣ, ಅಂಗವೈಕಲ್ಯ ಮತ್ತು ಆಸ್ಪತ್ರೆ ವೆಚ್ಚಗಳಂತಹ ವಿವಿಧ ಸೂಚಕಗಳ ಮೂಲಕ ರೋಗದ ಹೊರೆಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಧೂಮಪಾನ, ಕಡಿಮೆ ತೂಕದ ಜನನ ಮತ್ತು ವಾಯು ಮಾಲಿನ್ಯವು 2021 ರಲ್ಲಿ ರೋಗಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ. ತಾಯಿ ಮತ್ತು ಮಗುವಿನ ಆರೋಗ್ಯ, ಅಸುರಕ್ಷಿತ ನೀರು, ನೈರ್ಮಲ್ಯ ಮತ್ತು ಕೈ ತೊಳೆಯದ ಕೊರತೆಯಂತಹ ಅಪಾಯಕಾರಿ ಅಂಶಗಳಿಂದಾಗಿ ರೋಗದ ಹೊರೆ ಕಡಿಮೆಯಾಗಿದೆ ಎಂದು ಅದು ಬಹಿರಂಗಪಡಿಸಿದೆ.

ಹೆಚ್ಚುತ್ತಿರುವ ಜೀವಿತಾವಧಿ: 2022 - 2050ರ ನಡುವೆ ಜಾಗತಿಕ ಅಧ್ಯಯನದ ಪ್ರಕಾರ, ಜಾಗತಿಕ ಜೀವಿತಾವಧಿಯು ಪುರುಷರಿಗೆ ಸುಮಾರು ಐದು ವರ್ಷಗಳು ಮತ್ತು ಮಹಿಳೆಯರಲ್ಲಿ ನಾಲ್ಕು ವರ್ಷಗಳಷ್ಟು ಹೆಚ್ಚಾಗಿದೆ. ಇದುವರೆಗೆ ಜೀವಿತಾವಧಿ ಕಡಿಮೆ ಇದ್ದ ದೇಶಗಳಲ್ಲಿ ಈಗ ಜೀವಿತಾವಧಿ ಹೆಚ್ಚುತ್ತಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ. ಹೃದಯ ರಕ್ತನಾಳದ ಕಾಯಿಲೆಗಳು, ಕೋವಿಡ್ -19, ಸೋಂಕುಗಳು, ತಾಯಿ ಮತ್ತು ನವಜಾತ ಮತ್ತು ಪೌಷ್ಟಿಕಾಂಶದ ಕಾಯಿಲೆಗಳಿಗೆ ಹೆಚ್ಚಿದ ಪ್ರತಿರೋಧದಿಂದಾಗಿ ಜೀವಿತಾವಧಿಯು ಹೆಚ್ಚುತ್ತಿದೆ ಎಂದು ಅಧ್ಯಯನವು ತೀರ್ಮಾನಿಸಿದೆ. ಸಾರ್ವಜನಿಕ ಆರೋಗ್ಯ ಕ್ರಮಗಳಿಂದಾಗಿ ವಿಶ್ವಾದ್ಯಂತ ಜೀವಿತಾವಧಿ ಹೆಚ್ಚುತ್ತಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಇದನ್ನು ಓದಿ: ಪ್ರಜ್ವಲ್ ವಿರುದ್ಧ ಕ್ರಮದ ಬಗ್ಗೆ ಯಾವ ತಕರಾರೂ ಇಲ್ಲ: ಪೆನ್​ ಡ್ರೈವ್​ ಕೇಸ್​ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ - Deve gowda reaction on Prajwal Case

ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರು ಅಲರ್ಟ್​; ಮಹಿಳೆಯರ ರಕ್ಷಣೆಗೆ ಕಾರ್ಯಾಚರಣೆಗಿಳಿಯಲಿದೆ ಚೆನ್ನಮ್ಮ ಪಡೆ - Chennamma Squad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.