ಕರ್ನಾಟಕ

karnataka

ಸಿಎಂ ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ಲಿಂಗೇಶ್ವರನಿಗೆ ಪೂಜೆ

By

Published : Aug 3, 2020, 8:51 PM IST

ದಾವಣಗೆರೆ: ಸಿಎಂ ಬಿ.‌ಎಸ್.ಯಡಿಯೂರಪ್ಪ ಕೊರೊನಾದಿಂದ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ರಾಷ್ಟ್ರೀಯ ಬಸವ ಸೇನಾ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರು ನಗರದ ಲಿಂಗೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಮುಖ್ಯಮಂತ್ರಿಗೆ ಕೊರೊನಾ ದೃಢವಾಗಿದ್ದು ಅವರು ಬೇಗ ಗುಣಮುಖರಾಗಿ ಸಾರ್ವಜನಿಕ ಜೀವನಕ್ಕೆ ಬೇಗ ಮರಳಿ ಸಮಾಜ ಸೇವೆ ಮುಂದುವರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡಿದರು. ಕೊರೊನಾ‌ ಎಂಬ ಹೆಮ್ಮಾರಿ ಇಡೀ ವಿಶ್ವವನ್ನೇ ಕಾಡುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ದೇಶ ಬಿಟ್ಟು ತೊಲಗಲಿ. ಪೀಡಿತರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಬೇಡಿಕೊಂಡರು.

ABOUT THE AUTHOR

...view details