ಕರ್ನಾಟಕ

karnataka

ಹುಬ್ಬಳ್ಳಿ: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ

By

Published : Jan 1, 2023, 1:17 PM IST

Updated : Feb 3, 2023, 8:38 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಜನರು 2022 ರ ಕ್ಯಾಲೆಂಡರ್‌ ವರ್ಷಕ್ಕೆ ಖುಷಿಯ ವಿದಾಯ ಹೇಳಿ ನೂರೆಂಟು ಕನಸು, ನಿರೀಕ್ಷೆಗಳೊಂದಿಗೆ 2023ರ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಶನಿವಾರ ಸಂಜೆಯಿಂದಲೇ ನಗರದ ಪ್ರಮುಖ ಮನರಂಜನಾ ತಾಣಗಳು ಸಂಗೀತ, ನೃತ್ಯದ ಅಲೆಯಲ್ಲಿ ಮುಳುಗಿದ್ದವು. ಬಣ್ಣದ ಬೆಳಕಿನ ಹೊಳಪಿನಲ್ಲಿ ಕೇಕೆ ಹಾಕುತ್ತಾ ಗಂಟೆ, ನಿಮಿಷ, ಸೆಕೆಂಡುಗಳ ಕ್ಷಣ ಕ್ಷಣದ ಕುತೂಹಲದಲ್ಲಿ ಅವರೆಲ್ಲಾ ಕಳೆದು ಹೋಗಿದ್ದರು. ಅಬ್ಬರದ ಸಂಗೀತಕ್ಕೆ ಯುವಕರು, ಯುವತಿಯರು, ಮಹಿಳೆಯರು, ಪುರುಷರು ಕುಣಿದು ಸಂಭ್ರಮಿಸಿದರು.
Last Updated : Feb 3, 2023, 8:38 PM IST

ABOUT THE AUTHOR

...view details