ಕರ್ನಾಟಕ

karnataka

ಮೈಸೂರು: ಬೋನಿಗೆ ಬಿದ್ದ ಚಿರತೆ, ಗ್ರಾಮಸ್ಥರ ನಿಟ್ಟುಸಿರು

By ETV Bharat Karnataka Team

Published : Dec 17, 2023, 10:32 PM IST

ಮೈಸೂರು : ಬೋನಿಗೆ ಬಿದ್ದ ಚಿರತೆ..ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಮೈಸೂರು: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಕೊನೆಗೂ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಈ ಚಿರತೆ ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಗ್ರಾಮಸ್ಥರು ಭಯಭೀತಗೊಂಡಿದ್ದರು. ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಲ್ಲಿ ಒತ್ತಾಯಿಸಿದ್ದರು. ತಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮದ ಹೊರವಲಯದಲ್ಲಿ ಸೆರೆಗೆ ಬೋನು ಇರಿಸಲಾಗಿತ್ತು. ಕೊನೆಗೂ ನಾಲ್ಕು ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕುರಿಮಂದೆ ಮೇಲೆ ಚಿರತೆ ದಾಳಿ :ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ಚಿರತೆಯೊಂದು ಕುರಿ ಮಂದೆ ಮೇಲೆ ದಾಳಿ ನಡೆಸಿ 30ಕ್ಕೂ ಹೆಚ್ಚು ಕುರಿ ಮತ್ತು ಮೇಕೆಯನ್ನು ಕೊಂದು ಹಾಕಿತ್ತು. ಮಲ್ಲೇಶ್ವರ ಗ್ರಾಮದ ಸುಶೀಲಮ್ಮ ಎಂಬವರ ತೋಟದಲ್ಲಿ ಕುರಿ ಮಂದೆಯನ್ನು ಕಟ್ಟಲಾಗಿತ್ತು. ಇವುಗಳ ಮೇಲೆರಗಿದ ಚಿರತೆ 31 ಕುರಿ ಮತ್ತು ಮೇಕೆಯನ್ನು ಬಲಿ ಪಡೆದಿತ್ತು.

ಇದನ್ನೂ ಓದಿ : ಮೈಸೂರು : ತೋಟದ ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ

ABOUT THE AUTHOR

...view details