ಕರ್ನಾಟಕ

karnataka

ಭಾರತದಾದ್ಯಂತ ಸ್ವಾತಂತ್ರ್ಯ ದಿನಾಚಾರಣೆ.. ಸಂಭ್ರಮಕ್ಕೂ ಮುನ್ನ ತ್ರಿರಂಗಗಳಲ್ಲಿ ಕಂಗೊಳಿಸಿದ ಐತಿಹಾಸಿಕ, ಸರ್ಕಾರಿ ಕಟ್ಟಡಗಳು

By

Published : Aug 15, 2023, 10:38 AM IST

ಭಾರತದಾದ್ಯಂತ ಸ್ವಾತಂತ್ರ್ಯ ದಿನಾಚಾರಣೆ

ನವದೆಹಲಿ: 76 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ದೇಶಾದ್ಯಂತ ಹಲವಾರು ಸ್ಮಾರಕಗಳು ಮತ್ತು ಪ್ರಮುಖ ಕಟ್ಟಡಗಳು ರಾಷ್ಟ್ರಧ್ವಜದ ಬಣ್ಣಗಳಲ್ಲಿ ಕಂಗೊಳಿಸಿದವು. ಬೆಂಗಳೂರಿನ ವಿಧಾನಸೌಧ, ಜಮ್ಮು-ಕಾಶ್ಮೀರದ ಶ್ರೀ ನಗರ, ಹೈದರಾಬಾದ್​  ಸೇರಿದಂತೆ ಅನೇಕ ಮಹಾನಗರಗಳು ತ್ರಿವರ್ಣ ಧ್ವಜದಿಂದ ಅಲಂಕಾರಗೊಂಡಿದ್ದವು.

ಹೌದು, ದೇಶದ ಪ್ರಮುಖ ನಗರಗಳಲ್ಲಿನ ಐತಿಹಾಸಿಕ ಸ್ಮಾರಕಗಳು ಮತ್ತು ಸರ್ಕಾರಿ ಕಟ್ಟಡಗಳು ತ್ರಿವರ್ಣ ಧ್ವಜದ ದೀಪಾಲಂಕಾರಗಳಲ್ಲಿ ಬೆಳಗಿದವು. ಭಾರತದಾದ್ಯಂತ ಇಂದು 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ದಿನಾಚರಣೆಯ ಪೂರ್ವಭಾವಿಯಾಗಿ ಸ್ಥಳೀಯ ಆಡಳಿತವು ನಗರವನ್ನು ಮದುವಣಗಿತ್ತಿಯಂತೆ ಅಲಂಕಾರಗೊಳಿಸಿತ್ತು.

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶಬಾನಾ ಅಜ್ಮಿ ಇತ್ತೀಚೆಗೆ ಮೆಲ್ಬೋರ್ನ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಆಸ್ಟ್ರೇಲಿಯಾದ ನೆಲದಲ್ಲಿ ದೇಶಭಕ್ತಿ ಮೆರೆದರು. ಈ ಸಂದರ್ಭವು ಮೆಲ್ಬೋರ್ನ್ 2023 ರ ಪ್ರತಿಷ್ಠಿತ ಭಾರತೀಯ ಚಲನಚಿತ್ರೋತ್ಸವವಾಗಿತ್ತು, ಅಲ್ಲಿ ಅಪ್ರತಿಮ ನಟಿ ಧ್ವಜಾರೋಹಣ ಸಮಾರಂಭವನ್ನು ಆಯೋಜಿಸಿದ್ದರು. 

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ 10 ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಮೂಲಕ ಐತಿಹಾಸಿಕ ಸ್ಮಾರಕ ರೆಡ್‌ ಫೋರ್ಟ್‌ನಲ್ಲಿ 10 ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್​ ನಾಯಕ ಮನಮೋಹನ ಸಿಂಗ್​ ಅವರ ದಾಖಲೆಯನ್ನು ಪ್ರಧಾನಿ ಮೋದಿ ಸರಿಗಟ್ಟಿದ್ದಾರೆ. 

 ಯಾರು ಎಷ್ಟು ಬಾರಿ ತಿರಂಗಾ ಆರೋಹಣ ಮಾಡಿದರು ಗೊತ್ತಾ? 

ಅತಿ ಹೆಚ್ಚು ಬಾರಿ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಮಂತ್ರಿ ಎಂದ್ರೆ ಅದು ಪಂಡಿತ್​ ಜವಹರಲಾಲ್ ನೆಹರು ಅವರು. ದೇಶದ ಮೊದಲ ಪ್ರಧಾನಿ ಮಂತ್ರಿ ಆಗಿರುವ ಅವರು17 ಬಾರಿ ಕೆಂಪುಕೋಟೆಯಲ್ಲಿ ಧ್ವಜರೋಹಣ ಮಾಡಿ ಇತಿಹಾಸ ಬರೆದಿದ್ದಾರೆ. ಇನ್ನು ಅವರ ಪುತ್ರಿ ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ 16 ಬಾರಿ ತ್ರಿವರ್ಣ ಧ್ವಜವನ್ನು ಕೆಂಪುಕೋಟೆ ಮೇಲೆ ಹಾರಿಸಿದರೆ,  ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮನಮೋಹನ್​ ಸಿಂಗ್​ ತಲಾ 10 ಬಾರಿ ಹಾಗೂ ಮಾಜಿ ಪ್ರಧಾನಿ ಅಟಲ್​ ಬಿಹಾರಿವಾಜಪೇಯಿ ಆರು ಬಾರಿಮತ್ತು ರಾಜೀವ್​ ಗಾಂಧಿ, ನರಸಿಂಹರಾಯರು ಐದು ಬಾರಿ ತಿರಂಗಾವನ್ನ ಹಾರಿಸಿದ ಕೀರ್ತಿ ಪಡೆದಿದ್ದಾರೆ.   ಅದು ಬಿಟ್ಟರೆ, ಲಾಲ್​ ಬಹದ್ದೂರು ಶಾಸ್ತ್ರಿ ಮತ್ತು ಮೊರಾರ್ಜಿ ದೇಸಾಯಿ ತಲಾ ಎರಡು ಬಾರಿ ರಾಷ್ಟ್ರಧ್ಬಜವನ್ನ ಕೇಂಪು ಕೋಟೆ ಮೇಲೆ ಏರಿಸಿ ಭಾಷಣ ಮಾಡಿದ್ದಾರೆ.  ಚಂದ್ರಶೇಖರ್​, ದೇವೇಗೌಡ, ಐ ಕೆ ಗುಜ್ರಾಲ್ ತಲಾ ಒಂದು ಬಾರಿ ಧ್ವಜಾರೋಹಣ ಮಾಡಿದ್ದಾರೆ.

ಓದಿ:Independence Day 2023: ತ್ರಿವರ್ಣ ರಂಗಿನಿಂದ ರಾರಾಜಿಸುತ್ತಿದೆ ಭಾರತ... ಕೆಂಪುಕೋಟೆಯಲ್ಲಿ ಬಿಗಿ ಬಂದೋಬಸ್ತ್​ 

ABOUT THE AUTHOR

...view details