ಕರ್ನಾಟಕ

karnataka

ಸಿಲಿಂಡರ್ ತುಂಬಿದ್ದ ಟ್ರಕ್​ನಲ್ಲಿ ಭಾರಿ ಸ್ಫೋಟ; ಕ್ಷಣಾರ್ಧದಲ್ಲಿ ಟ್ರಕ್​ ಭಸ್ಮ

By ETV Bharat Karnataka Team

Published : Jan 19, 2024, 3:53 PM IST

Explosion in a vehicle filled with 50 cylinders in Gonda, people jumped 100 feet in the air VIDEO

ಉತ್ತರ ಪ್ರದೇಶ (ಗೊಂಡಾ):ಸಿಲಿಂಡರ್​​​ಗಳನ್ನು ಸಾಗಿಸುತ್ತಿದ್ದ ಟ್ರಕ್​​ವೊಂದು ​​ಪಲ್ಟಿಯಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆ ಉತ್ತರ ಪ್ರದೇಶದ ಗೊಂಡಾ ಲಖನೌ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. 50 ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್​​ ಇದಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. 

ಬೆಂಕಿ ಸಿಲಿಂಡರ್​ಗೆ ತಾಗಿದ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ವೇಳೆ ಸಿಲಿಂಡರ್‌ಗಳು ಗಾಳಿಯಲ್ಲಿ 100 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದಿವೆ. ಈ ಭಯನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿವೆ. ವಾಹನದಲ್ಲಿ 50 ಸಿಲಿಂಡರ್‌ಗಳಿದ್ದವು ಎಂದು ಹೇಳಾಗುತ್ತಿದ್ದು ಎಲ್ಲವೂ ಸ್ಫೋಟಗೊಂಡಿವೆ. ಸ್ಫೋಟದ ತೀವೃತೆಯ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಚಾಲಕ ಮತ್ತು ಕ್ಲೀನರ್ ವಾಹನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. 

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕರ್ನಲ್ ಗಂಜ್ ಪೊಲೀಸರು, ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ವಾಹನಗಳ ಸಂಚಾರವನ್ನು ಬಂದ್ ಮಾಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ಬಳಿಕ ಬಂದ್​ ಅನ್ನು ತೆರವುಗೊಳಿಸಿದರು. ಆದರೆ, ಅವರ ಆಗಮನಕ್ಕೂ ಮುನ್ನ ಸಿಲಿಂಡರ್‌ಗಳು ಒಂದರ ಹಿಂದೆ ಒಂದರಂತೆ ಸ್ಫೋಟಗೊಂಡು ರಸ್ತೆ ತುಂಬೆಲ್ಲ ಬಿದ್ದಿದ್ದವು. ಸಿಲಿಂಡರ್​ ತುಂಬಿಕೊಂಡಿದ್ದ ಟ್ರಕ್​ ಪಲ್ಟಿಯಾದ ಪರಿಣಾಮ ಈ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ:ಗ್ಯಾಸ್​ ಸಿಲಿಂಡರ್​ ಸ್ಫೋಟ.. ಆಂಧ್ರದಲ್ಲಿ 15 ಗುಡಿಸಲುಗಳು ಭಸ್ಮ; ಹೈದರಾಬಾದ್​​​​​​ನಲ್ಲಿ ಕುಟುಂಬವೊಂದನ್ನು ರಕ್ಷಿಸಿದ ಕಾನ್ಸ್​​ಟೇಬಲ್​

ABOUT THE AUTHOR

...view details