ಕರ್ನಾಟಕ

karnataka

'ಉರಿಗೌಡ,ನಂಜೇಗೌಡ ವಿಚಾರ ಅಪ್ರಸ್ತುತ, ನನಗೆ ಸಾಮಾನ್ಯ ನಾಗರೀಕನ ಸಮಸ್ಯೆಯೇ ಮುಖ್ಯ'

By

Published : Mar 20, 2023, 2:12 PM IST

ಉರಿಗೌಡ,ನಂಜೇಗೌಡ ವಿಚಾರ ಅಪ್ರಸ್ತುತ, ನನಗೆ ಸಾಮಾನ್ಯ ನಾಗರೀಕನ ಸಮಸ್ಯೆಯೇ ಮುಖ್ಯ : ಸಚಿವ ನಾರಾಯಣಸ್ವಾಮಿ

ತುಮಕೂರು : ಇತಿಹಾಸವನ್ನು ಅರಿತವರಲ್ಲಿ ಸಾಹಿತಿ ಜವರೇಗೌಡ ಕೂಡ ಒಬ್ಬರು. ಅವರ ಪುಸ್ತಕವನ್ನು ಮಾಜಿ ಪ್ರಧಾನಿ ದೇವೇಗೌಡರೇ ಬಿಡುಗಡೆ ಮಾಡಿದ್ದಾರೆ ಎಂದು ಉರಿಗೌಡ ಹಾಗೂ ನಂಜೇಗೌಡ ಕುರಿತ ಚರ್ಚೆಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಶಿರಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸಕಾರ ಜವರೇಗೌಡರ ವಿಚಾರಧಾರೆಗಳನ್ನು ಗೌರವಿಸುವುದು ಮುಖ್ಯ. ಆ ನಿಟ್ಟಿನಲ್ಲಿ ನಮ್ಮ‌ ಪಕ್ಷ ಮುಂದುವರೆಯುತ್ತಿದೆ. ಉರಿಗೌಡ ಮತ್ತು ನಂಜೇಗೌಡ ಕುರಿತ ಚರ್ಚೆ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ನಾನು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವವನು. ಯಾವ ಸಮಸ್ಯೆಗಳಿಗೆ ಜನರು ಪರಿಹಾರ ನಿರೀಕ್ಷೆ ಮಾಡುತ್ತಿದ್ದಾರೆ, ಅದರ ಬಗ್ಗೆ ನಾನು ಚರ್ಚೆ ಮಾಡುತ್ತೇನೆ ಎಂದರು.

ಉರಿಗೌಡ, ನಂಜೇಗೌಡ ವಿಚಾರ ನನಗೆ ಅಪ್ರಸ್ತುತ. ನನಗೆ ಸಾಮಾನ್ಯ ನಾಗರೀಕನ ಸಮಸ್ಯೆಯೇ ಮುಖ್ಯ. ಈ ವಿಚಾರ ರಾಜ್ಯದ ಸಮಸ್ಯೆಗಳನ್ನು ಪರಿಹಾರ ಮಾಡಲ್ಲ. ಇದು ರಾಜ್ಯದ ಶೋಷಿತ ವರ್ಗಕ್ಕೆ ಪರಿಹಾರ ಅಲ್ಲ. ನಾನು ಶೋಷಿತ ವರ್ಗದ ಪರವಾಗಿ ಮಾತನಾಡಲು ಬಂದಿದ್ದೇನೆ. ಯಾವುದೋ ವೈಯಕ್ತಿಕ ವಿಚಾರ ಮಾತನಾಡಲ್ಲ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ :ಧಾರವಾಡ ಗ್ರಾಮೀಣ ಕ್ಷೇತ್ರ: ಬಿಜೆಪಿಯಿಂದ ಈ ಬಾರಿ ಯಾರಿಗೆ ಟಿಕೆಟ್?

ABOUT THE AUTHOR

...view details