ಕರ್ನಾಟಕ

karnataka

ನಾಗರಹಾವನ್ನೇ ಇನ್ನೊಂದು ನಾಗರಹಾವು ನುಂಗಿದ ವಿಚಿತ್ರ ಘಟನೆ... ವಿಡಿಯೋವನ್ನೊಮ್ಮೆ ನೋಡಿ ಬಿಡಿ!!

By ETV Bharat Karnataka Team

Published : Nov 7, 2023, 6:00 PM IST

ಹಾವನ್ನೇ ನುಂಗಿದ ನಾಗರಹಾವು

ಗದಗ: ಸಾಮಾನ್ಯವಾಗಿ ಇಲಿ, ಕಪ್ಪೆ, ಹಕ್ಕಿಗಳ ಮೊಟ್ಟೆಗಳನ್ನು ತಿನ್ನುವ ವಿಷಪೂರಿತ ನಾಗರ ಹಾವು ಇಲ್ಲೊಂದು ತನ್ನದೇ ಜಾತಿಯ ನಾಗರ ಹಾವನ್ನು ನುಂಗಿರುವ ಘಟನೆ ನಡೆದಿದೆ. ಮೊಟ್ಟೆಗಾಗಿ ಕೋಳಿ ಗೂಡುಗಳಿಗೆ, ಇಲ್ಲವೇ ಕಪ್ಪೆ ಅಥವಾ ಇಲಿಯನ್ನು ಅಟ್ಟಾಡಿಸಿಕೊಂಡು ಬರುವ ನಾಗರಹಾವು ಇನ್ನೊಂದು ನಾಗರಹಾವನ್ನು ತಿನ್ನುತ್ತಿರುವ ದೃಶ್ಯ ಜನರನ್ನು ಅಚ್ಚರಿಗೊಳಿಸಿದೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಅನ್ನದಾನೀಶ್ವರ ಪ್ರೌಢಶಾಲೆ ಆವರಣದಲ್ಲಿ ನಾಗರಹಾವು ತನ್ನದೇ ತಳಿಯ ನಾಗರಹಾವನ್ನು ನಿಧಾನವಾಗಿ ನುಂಗುತ್ತಿರುವ ದೃಶ್ಯ ಕಂಡು ಬಂದಿದೆ.

ರೆಪ್ಟೀಲಿಯ ವರ್ಗಕ್ಕೆ ಸೇರಿದ ವಿಷಪೂರಿತ ಸರಿಸೃಪವೇ ಈ ನಾಗರಹಾವು. ಕಾಡುಗಳಲ್ಲಿ, ಬಯಲು ಸೀಮೆಗಳಲ್ಲಿ ಹೀಗೆ ಎಲ್ಲ ತೆರನಾದ ಪರಿಸರದಲ್ಲಿ ವಾಸಿಸುವ ಈ ನಾಗರ ಹಾವುಗಳು ಮುಸ್ಸಂಜೆ ಸಮಯದಲ್ಲಿ ಹೆಚ್ಚು ಚುರುಕಾಗಿ ಆಹಾರಾನ್ವೇಷಣೆಯಲ್ಲಿ ತೊಡಗುತ್ತವೆ. ಸಾಮಾನ್ಯವಾಗಿ ಇಲಿ, ಕಪ್ಪೆ, ಹಕ್ಕಿಗಳ ಮೊಟ್ಟೆ ಇವುಗಳ ಆಹಾರವಾಗಿರುತ್ತದೆ. ಆದರೆ ಇಲ್ಲಿ ವಿಚತ್ರವಾಗಿದೆ. ನಾಗರಹಾವುಗಳ ಬೇರೆ ಆಹಾರ ಸಿಗದೇ ಹಸಿವು ತಾಳಲಾರದೇ ಈ ರೀತಿ ಸರ್ಪಗಳು ಒಂದನ್ನೊಂದು ಕೊಂದು ತಿನ್ನುತ್ತವೆ ಎಂದು ಉರಗತಜ್ಞರು ಮಾಹಿತಿ ನೀಡುತ್ತಾರೆ. ಸದ್ಯ ಹಾವು ನುಂಗುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ನೋಡಿ:ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಬೃಹತ್​ ಚಿರತೆ...ಹರಸಾಹಸ ಪಟ್ಟು ರಕ್ಷಣೆ: ವಿಡಿಯೋ ನೊಡಿ

ABOUT THE AUTHOR

...view details