ಕರ್ನಾಟಕ

karnataka

ಗುರುಮಠಕಲ್: ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಇಲಾಖೆ ದಾಳಿ

By

Published : Oct 29, 2020, 3:54 PM IST

ಗುರುಮಠಕಲ್​ನಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಸೇಂದಿಯನ್ನು ನಾಶ ಪಡಿಸಿದ್ದಾರೆ. ಆರೋಪಿ ತಾಯಪ್ಪನಿಗಾಗಿ ತೀವ್ರ ಶೋಧಕಾರ್ಯ ನಡೆಸಿದ್ದಾರೆ.

Gurumitkal
ಗುರುಮಠಕಲ್

ಗುರುಮಠಕಲ್:ಕಳ್ಳಭಟ್ಟಿ ಅಡ್ಡೆ ಮೇಲೆ ಯಾದಗಿರಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1,030 ಲೀ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.

ತಾಯಪ್ಪ ಶಿವಾನಂದ ಕಲಾಲ ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿ. ಈತ ದಾಳಿ ವೇಳೆ ಪರಾರಿಯಾಗಿದ್ದಾನೆ. ಗುರುಮಠಕಲ್ ಪಟ್ಟಣದ ಕುರಬಗೇರಾದಲ್ಲಿ ಬಹಳಷ್ಟು ದಿನಗಳಿಂದಲೂ ಅಕ್ರಮ ಕಳ್ಳಭಟ್ಟಿ ತಯಾರಿ ಮತ್ತು ಮಾರಟ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು, ಯಾದಗಿರಿ ಅಬಕಾರಿ ಉಪ ಅಧೀಕ್ಷಕರ ಸೂಚನೆ ಮೇರೆಗೆ, ಉಪ ವಿಭಾಗ ಶಹಾಪೂರ ಅಧಿಕಾರಿ ಬಸವರಾಜ ಜಾಮಗೊಂಡ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಇಲಾಖೆ ದಾಳಿ

ಅಕ್ರಮ ಕಳ್ಳಭಟ್ಟಿ ವಶಕ್ಕೆ ಪಡೆದಿರುವ ಅಧಿಕಾರಿಗಳು, ಆರೋಪಿ ತಾಯಪ್ಪನಿಗಾಗಿ ತೀವ್ರ ಶೋಧಕಾರ್ಯ ನಡೆಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಳ್ಳಭಟ್ಟಿ ಮಾರಾಟ ದಂಧೆ ನಡೆಯುತ್ತಿದ್ದರೂ ಗುರುಮಠಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಇಷ್ಟು ದಿನ ಜಾಣ ನಿದ್ದೆಗೆ ಜಾರಿದ್ದರೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ABOUT THE AUTHOR

...view details