ಕರ್ನಾಟಕ

karnataka

ಸಿಹಿ ನೀರಿನ ಘಟಿಯಾನ ಜಾತಿಯ ದ್ವಿವರ್ಣ ಏಡಿ ಪತ್ತೆ

By

Published : Aug 18, 2022, 6:03 PM IST

Ghatiana dvivarna  species of crabs found
ಪಶ್ಚಿಮಘಟ್ಟದಲ್ಲಿ ಘಟಿಯಾನ ದ್ವಿವರ್ಣ ಏಡಿ ಪತ್ತೆ

ಹೊಸ ಜಾತಿಯ ಸಿಹಿ ನೀರಿನ ಏಡಿಯೊಂದು ಭಾರತದ ಮಧ್ಯ ಪಶ್ವಿಮ ಘಟ್ಟದಲ್ಲಿ, ಅಂದರೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಪತ್ತೆಯಾಗಿದೆ.

ಕಾರವಾರ:ಸಿಹಿ ನೀರಿನಲ್ಲಿ ಕಂಡು ಬರುವ ಹೊಸ ಜಾತಿಯ ಘಟಿಯಾನ ಪ್ರಭೇದದ ದ್ವಿವರ್ಣದ ಏಡಿ ಯಲ್ಲಾಪುರದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ, ನಿಸರ್ಗ ತಜ್ಞರಾದ ಗೋಪಾಲಕೃಷ್ಣ ಹೆಗಡೆ, ಸಮೀರಕುಮಾರ ಪಾಟಿ ಮತ್ತು ತೇಜಸ್ ಥಾಕರೆ ತಂಡದವರು ಈ ಘಟಿಯಾನ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಪತ್ತೆಹಚ್ಚಿ ಸಂಶೋಧನೆ ನಡೆಸಿದ್ದಾರೆ.

ಸಿಹಿ ನೀರಿನ ಏಡಿ:ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಜಗತ್ತಿನಲ್ಲಿ ಈವರೆಗೆ 4 ಸಾವಿರ ಜಾತಿಯ ಏಡಿಗಳು ಇವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಭಾರತದಲ್ಲಿಯೇ 125 ವಿವಿಧ ಜಾತಿಯ ಏಡಿಗಳನ್ನು ಗುರುತಿಸಲಾಗಿದೆ. ಘಟಿಯಾನ ಪ್ರಭೇದದಲ್ಲಿ ಇಲ್ಲಿಯವರೆಗೆ 13 ವಿವಿಧ ಜಾತಿಯ ಸಿಹಿ ನೀರಿನ ಏಡಿಗಳನ್ನು ಗುರುತಿಸಲಾಗಿದ್ದು, ಇದೀಗ ಪತ್ತೆ ಮಾಡಿರುವ ಘಟಿಯಾನ ದ್ವಿವರ್ಣ 14ನೇ ಸಿಹಿನೀರಿನ ಏಡಿಯಾಗಿದೆ.

ಪಶ್ಚಿಮಘಟ್ಟದಲ್ಲಿ ಘಟಿಯಾನ ದ್ವಿವರ್ಣ ಏಡಿ ಪತ್ತೆ

75ನೇ ಜಾತಿಯ ಏಡಿ ಪತ್ತೆ:ವಿಶ್ವದಲ್ಲಿಯೇ ಜೀವವೈಧ್ಯದ ತಾಣವಾಗಿ ಖ್ಯಾತಿ ಹೊಂದಿರುವ ಭಾರತದ ಪಶ್ಚಿಮ ಘಟ್ಟಗಳಲ್ಲಿ ಒಟ್ಟು 74 ವಿವಿಧ ಜಾತಿಯ ಏಡಿಗಳನ್ನು ಗುರುತಿಸಲಾಗಿದೆ. ಆದರೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ 75ನೇ ಏಡಿ ಪತ್ತೆಹಚ್ಚಿರುವುದು ಇದೀಗ ಮತ್ತಷ್ಟು ವಿಶೇಷತೆಗೆ ಕಾರಣವಾಗಿದೆ.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಕೇಂದ್ರ ಭೂ ವಿಜ್ಞಾನಿಗಳ ತಂಡ: ಗುಡ್ಡ ಕುಸಿತ ಪ್ರದೇಶಗಳ ಅಧ್ಯಯನ

ಘಟಿಯಾನ ಪ್ರಭೇದದ ಏಡಿಗಳು ವಿಶೇಷವಾದ ವರ್ಣಗಳಿಂದ ಕೂಡಿದ್ದು, ಆಕರ್ಷಣೀಯವಾಗಿರುತ್ತವೆ. ಸದ್ಯ ಪತ್ತೆಯಾಗಿರುವ ಏಡಿಯ ದೇಹದ ಬಣ್ಣ ಬಿಳಿ ಮತ್ತು ಕಾಲುಗಳು ಚಾಕಲೆಟ್‌ ಕಲರ್​​ನಿಂದ ಕೂಡಿರುವುದರಿಂದ ದ್ವಿವರ್ಣ ಎಂದು ನಾಮಕರಣ ಮಾಡಲಾಗಿದೆ. ಪಶ್ಚಿಮ ಘಟ್ಟದ ಎತ್ತರ ಪ್ರದೇಶದಲ್ಲಿರುವ ಬಂಡೆಗಳಲ್ಲಿನ ಅಡಿಯಲ್ಲಿರುವ ರಂಧ್ರಗಳಲ್ಲಿ ಈ ಏಡಿಗಳು ಹೆಚ್ಚಾಗಿ ವಾಸ ಮಾಡುತ್ತವೆ. ಇವು ಸಣ್ಣಪುಟ್ಟ ಹುಳುಗಳು ಮತ್ತು ಪಾಚಿಗಳನ್ನು ತಿಂದು ಬದುಕುತ್ತವೆ ಎಂದು ಸಂಶೋಧನಾ ತಂಡದವರು ತಿಳಿಸಿದ್ದಾರೆ.

ABOUT THE AUTHOR

...view details