ಕರ್ನಾಟಕ

karnataka

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ನೂತನ ಧರ್ಮದರ್ಶಿ ನೇಮಕ

By

Published : Apr 27, 2021, 7:30 AM IST

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟ್ರಸ್ಟಿಗಳ ನೇಮಕವಾಗಿ ಆರು ತಿಂಗಳು ಕಳೆದರೂ ಧರ್ಮದರ್ಶಿ ನೇಮಕವಾಗಿರದೆ ವಿವಾದ ಉಂಟಾಗಿತ್ತು.

Kollur Mookambika Temple appointed new trustee
ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ನೂತನ ಧರ್ಮದರ್ಶಿ ನೇಮಕ

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಚಂದ್ರಶೇಖರ್ ಶೆಟ್ಟಿ ಅವರು ಧರ್ಮದರ್ಶಿ ಆಗಿ ನೇಮಕಗೊಂಡಿದ್ದಾರೆ. ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ನೂತನ ಧರ್ಮದರ್ಶಿ ನೇಮಕ: ಅಥುಲ್ ಶೆಟ್ಟಿ ಬೆಂಬಲಿಗರ ಅಸಮಾಧಾನ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟ್ರಸ್ಟಿಗಳ ನೇಮಕವಾಗಿ ಆರು ತಿಂಗಳು ಕಳೆದರೂ ಧರ್ಮದರ್ಶಿ ನೇಮಕವಾಗಿರದೆ ವಿವಾದ ಉಂಟಾಗಿತ್ತು. ಈ ಮಧ್ಯೆ ಟ್ರಸ್ಟಿಗಳಾದ ಗಣೇಶ್ ಕಿಣಿ ಬೆಳ್ವೆ ಹಾಗೂ ಚಂದ್ರಶೇಖರ್ ಶೆಟ್ಟಿ ಅವರು ರಾಜೀನಾಮೆ ನೀಡಿದ್ದರು. ಇಬ್ಬರ ರಾಜೀನಾಮೆ ಅಂಗೀಕಾರ ಆಗಿರಲಿಲ್ಲ. ಇಬ್ಬರನ್ನೂ ಮನವೊಲಿಸಿ ರಾಜೀನಾಮೆ ಹಿಂಪಡೆಯಲಾಗಿತ್ತು.

ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚಂದ್ರಶೇಖರ್ ಶೆಟ್ಟಿ ಅವರನ್ನು ಧರ್ಮದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಆದ್ರೆ ಶೆಟ್ಟಿ ಅವರ ನೇಮಕ ಟ್ರಸ್ಟಿ ಅಥುಲ್ ಕುಮಾರ್ ಶೆಟ್ಟಿ ಅವರ ಆಕ್ರೋಶಕ್ಕೆ ಕಾರಣವಾಗಿ, ನೇಮಕ ಸಂಧರ್ಭದಲ್ಲಿ ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ಕೊನೆಗೆ ಅಥುಲ್ ಶೆಟ್ಟಿ ಅವರು ಬೆಂಬಲಿಗರೊಂದಿಗೆ ಹೊರ ನಡೆದರು.

ಇದನ್ನೂ ಓದಿ: ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್​: ಇಂದಿನಿಂದ ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ'

ABOUT THE AUTHOR

...view details