ಕರ್ನಾಟಕ

karnataka

PhonePe ಮೂಲಕ ಲಂಚ ಪಡೆದ ಪ್ರಕರಣ: ಗುಬ್ಬಿ ಠಾಣೆ ಸಬ್​​​​​ಇನ್ಸ್​ಪೆಕ್ಟರ್ ಸಸ್ಪೆಂಡ್‌

By

Published : Sep 10, 2021, 5:27 PM IST

gubbi-sub-inspector-suspended

ತುಮಕೂರು ಹೆದ್ದಾರಿಯಲ್ಲಿ ಅಪಘಾತವಾಗಿ ಮೃತಪಟ್ಟಿದ್ದ ವ್ಯಕ್ತಿಯ ಶವ ಸಾಗಿಸಲು ನಿರಾಕರಿಸಿದ್ದಾನೆ ಎಂದು ಮ್ಯಾಕ್ಸಿ ಕ್ಯಾಬ್ ಚಾಲಕನ ವಿರುದ್ಧ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಸುಳ್ಳು ಕೇಸ್ ದಾಖಲಿಸಿದ್ದರು. ಇದರ ಜೊತೆಗೆ ತನ್ನ ಜೀಪ್ ಡ್ರೈವರ್ ಖಾತೆಗೆ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ತುಮಕೂರು:ವಾಹನ ಚಾಲಕನೊಬ್ಬನಿಂದ ಫೋನ್ ಪೇ ಆ್ಯಪ್‌ ಮೂಲಕ ಲಂಚ ಪಡೆದಿದ್ದ ಆರೋಪದ ಹಿನ್ನೆಲೆಯಲ್ಲಿ ಗುಬ್ಬಿ ಪೊಲೀಸ್ ಠಾಣೆಯ ಸಬ್‌ಇನ್ಸ್​​ಪೆಕ್ಟರ್​​ ಜ್ಞಾನಮೂರ್ತಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಆದೇಶಿಸಿದ್ದಾರೆ.

ಘಟನೆಯ ವಿವರ:

ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಶವ ಸಾಗಿಸಲು ನಿರಾಕರಿಸಿದ್ದ ಎಂದು ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಸುಳ್ಳು ಕೇಸ್ ದಾಖಲಿಸಿದ ಸಬ್‌ ಇನ್ಸ್‌ಪೆಕ್ಟರ್‌ ಹಣ ನೀಡಿದರೆ ಮಾತ್ರ ವಾಹನ ಬಿಡುವುದಾಗಿ ತಿಳಿಸಿದ್ದರಂತೆ. ಬಳಿಕ ತನ್ನ ಜೀಪ್ ಡ್ರೈವರ್ ಫೋನ್‌ ನಂಬರ್​​​​ಗೆ ಫೋನ್ ಪೇ ಮೂಲಕ 7 ಸಾವಿರ ರೂಪಾಯಿ ಲಂಚ ಪಡೆದ ಗಂಭೀರ ಆರೋಪ ಕೇಳಿಬಂದಿತ್ತು. ಆದರೆ ಮಾರನೇ ದಿನ ಬೆಳಗ್ಗೆ ಈ ಹಣವನ್ನು ವಾಪಸ್ ನೀಡಲಾಗಿದೆ ಎಂದು ವಾಹನ ಚಾಲಕ ತಿಳಿಸಿದ್ದ.

ಈ ಪ್ರಕರಣ ಸಂಬಂಧ ಇದೀಗ ಸಬ್ ಇನ್ಸ್​​ಪೆಕ್ಟರ್​​ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಫೋನ್ ಪೇ ಮೂಲಕ ಲಂಚ ಪಡೆದರಾ ಗುಬ್ಬಿ ಸಬ್ಇನ್ಸ್​​ಪೆಕ್ಟರ್..?​: ಮ್ಯಾಕ್ಸಿಕ್ಯಾಬ್ ಚಾಲಕನ ಗಂಭೀರ ಆರೋಪ

ABOUT THE AUTHOR

...view details