ಫೋನ್ ಪೇ ಮೂಲಕ ಲಂಚ ಪಡೆದರಾ ಗುಬ್ಬಿ ಸಬ್ಇನ್ಸ್​​ಪೆಕ್ಟರ್..?​: ಮ್ಯಾಕ್ಸಿಕ್ಯಾಬ್ ಚಾಲಕನ ಗಂಭೀರ ಆರೋಪ

author img

By

Published : Sep 4, 2021, 1:34 PM IST

Updated : Sep 4, 2021, 1:54 PM IST

maxicab-driver-alleges-as-gubby-sub-inspector-bribed-by-phone-pay

ಮೃತದೇಹ ಸಾಗಿಸಲು ನಿರಾಕರಿಸಿದ ವಾಹನ ಮಾಲೀಕನಿಗೆ ಬೆದರಿಕೆ ಒಡ್ಡಿ ಆನ್​​ಲೈನ್​ನಲ್ಲಿ ಲಂಚ ಪಡೆದಿರುವ ಆರೋಪ ಪೊಲೀಸರ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದರು.

ತುಮಕೂರು: ಮೃತದೇಹ ಸಾಗಿಸಲು ನಿರಾಕರಿಸಿದ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಅನಾವಶ್ಯಕ ಪ್ರಕರಣ ದಾಖಲಿಸಿ, ಪಿಎಸ್ಐ ಅವನ ಬಳಿಯೇ ತನ್ನ ಜೀಪ್ ಡ್ರೈವರ್ ಖಾತೆಗೆ ಫೋನ್ ಪೇ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪ ಜಿಲ್ಲೆಯ ಗುಬ್ಬಿ ಪೊಲೀಸರ ವಿರುದ್ಧ ಕೇಳಿ ಬಂದಿದೆ

ಗುಬ್ಬಿಯ ಎಂ.ಹೆಚ್.ಪಟ್ಟಣ ಬಳಿ ಗುರುವಾರ ಬೆಳಗ್ಗೆ 10 ಗಂಟೆ ವೇಳೆ ನಡೆದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದ, ಬಳಿಕ ಸ್ಥಳಕ್ಕೆ ತೆರಳಿದ್ದ ಗುಬ್ಬಿ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಪ್ರಕರಣ ದಾಖಲಿಸಿಕೊಂಡಿದ್ದರು.

ಫೋನ್ ಪೇ ಮೂಲಕ ಲಂಚ ಪಡೆದ ಗುಬ್ಬಿ ಸಬ್ಇನ್ಸ್​​ಪೆಕ್ಟರ್

ಬಳಿಕ ಮೃತದೇಹ ಸಾಗಿಸಲು ಮುಂದಾದ ಪಿಎಸ್​​​ಐ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಗೆ ಹೋಗುತ್ತಿದ್ದ ತರಕಾರಿ ಸಾಗಿಸುವ ಮ್ಯಾಕ್ಸಿ ಕ್ಯಾಬ್​ ಚಾಲಕ ಶಕೀಲ್ ನನ್ನು ತಡೆದು ಶವ ಸಾಗಿಸುವಂತೆ ಹೇಳಿದ್ದರು ಎನ್ನಲಾಗಿದೆ.

ಇದಕ್ಕೆ ಒಪ್ಪದ ಶಕೀಲ್ ಗಾಯಾಳು ಗಂಭೀರ ಸ್ಥಿತಿಯಲ್ಲಿದ್ದಿದ್ದರೆ ಅವರನ್ನ ಬೇಕಾದರೆ ಆಸ್ಪತ್ರೆಗೆ ಸಾಹಿಸುತ್ತಿದ್ದೆ. ಆದರೆ, ಶವವನ್ನು ನಾನು ಸಾಗಿಸೋಕೆ ಆಗುವುದಿಲ್ಲ ಎಂದು ತಿರಸ್ಕರಿಸಿದ್ದಾನೆ.

ಕೂಡಲೇ ಪಿಎಸ್​​​ಐ ಮ್ಯಾಕ್ಸಿ ಕ್ಯಾಬ್ ಅನ್ನ ವಶಕ್ಕೆ ಪಡೆದು ಇಲ್ಲಸಲ್ಲದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ, ವಾಹನ ಬಿಡಬೇಕು ಅಂದ್ರೆ 100 ರೂ. ರಶೀದಿ ಪಡೆದು 7,000 ಸಾವಿರ ರೂಗಳನ್ನ ನನ್ನ ಡ್ರೈವರ್ ಖಾತೆಗೆ ಜಮಾ ಮಾಡುವಂತೆ ಹೇಳಿದ್ದರು ಎಂದು ಆರೋಪಿಸಲಾಗಿದೆ.

ಘಟನೆ ಖಂಡಿಸಿದ ಕ್ಯಾಬ್ ಚಾಲಕರು ಗುಬ್ಬಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ

ಬೇರೆ ದಾರಿ ಇಲ್ಲದೇ ಶಕೀಲ್ ತನ್ನ ಅಕೌಂಟ್​​​ನಿಂದ ಜೀಪ್ ಡ್ರೈವರ್ ಖಾತೆಗೆ ಹಣ ಸಂದಾಯ ಮಾಡಿದ್ದಾರಂತೆ. ಹಣ ಸಂದಾಯ ಆದರೂ ಕ್ಯಾಬ್ ರಿಲೀಸ್ ಮಾಡದೇ ಸತಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ಖಂಡಿಸಿದ ಕ್ಯಾಬ್ ಚಾಲಕರು ಗುಬ್ಬಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿ ಪಿಎಸ್ಐ ಜ್ಞಾನಮೂರ್ತಿ ನಡೆಗೆ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಈ ವೇಳೆಗಾಗಲೇ ಜೀಪ್​ ಡ್ರೈವರ್​ ಖಾತೆಯಿಂದ ಹಣ ಮರಳಿಸಿದ್ದಾರೆ ಎನ್ನಲಾಗಿದೆ.

ಓದಿ: ಕಡಬ ಬಳಿ ಪೊಲೀಸ್​ ಜೀಪ್​-ಬೊಲೆರೋ ನಡುವೆ ಡಿಕ್ಕಿ...

Last Updated :Sep 4, 2021, 1:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.