ಕರ್ನಾಟಕ

karnataka

'ಫೋನ್ ಟ್ಯಾಪ್ ಮಾಡಲು ಪೆಗಾಸಸ್​ಗೆ ಕೇಂದ್ರವೇ ಅನುಮತಿ ನೀಡಿರಬೇಕು': ಮಾಜಿ ಡಿಸಿಎಂ ಪರಮೇಶ್ವರ್

By

Published : Jul 21, 2021, 10:33 PM IST

ಅನೇಕ ಸರ್ಕಾರಗಳು ಫೋನ್ ಟ್ಯಾಪಿಂಗ್​ನಿಂದ ಬಿದ್ದು ಹೋಗಿವೆ. ನಮ್ಮ ರಾಜ್ಯದಲ್ಲಿಯೂ ಉದಾಹರಣೆ ಇದೆ. ಅನೇಕ ಸಚಿವರು ಅಧಿಕಾರವನ್ನ ಕಳೆದುಕೊಂಡಿರುವ ಉದಾಹರಣೆ ದೇಶದಲ್ಲಿದೆ. 17 ಮಂದಿ ಶಾಸಕರು ಕಾಂಗ್ರೆಸ್-ಜೆಡಿಎಸ್​​ನಿಂದ ಹೋದವರು ಸುಮ್ಮನೆ ಹೋಗಿದ್ದಾರೆ ಅಂತಾ ಅನ್ನಿಸ್ತಿಲ್ಲ. ಹಣ ಪಡೆದುಕೊಂಡು ಹೋಗಿರಬಹುದು..

Former DCM Dr. G. Parameshwar
ಮಾಜಿ ಡಿಸಿಎಂ ಪರಮೇಶ್ವರ್

ತುಮಕೂರು :ಪೆಗಾಸಸ್ ಕಂಪನಿ ನೇರವಾಗಿ ಬಂದು ಫೋನ್ ಟ್ಯಾಪ್ ಮಾಡಲು ಸಾಧ್ಯವಿಲ್ಲ. ಟ್ಯಾಪ್ ಮಾಡಬೇಕಾದರೆ ಪ್ರಸ್ತುತ ಸರ್ಕಾರದ ಅನುಮತಿ ಬೇಕಿದ್ದು, ಕೇಂದ್ರ ಸರ್ಕಾರ ಅನುಮತಿ ಕೊಟ್ಟಿರಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಆರೋಪಿಸಿದ್ದಾರೆ.

ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಗೃಹ ಖಾತೆ ಕಾರ್ಯದರ್ಶಿಯವರು ಅನುಮತಿ ನೀಡುತ್ತಾರೆ. ಇಂದು ಹೊರ ದೇಶದ ಪೆಗಾಸಸ್ ಬಂದು ಟ್ಯಾಪ್‌ ಮಾಡ್ತಾರೆ ಅಂದರೆ ಸರ್ಕಾರವೇ ಅನುಮತಿ ನೀಡಿರುತ್ತದೆ ಎಂದರು.

ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಪರಮೇಶ್ವರ್ ಕಿಡಿ..

ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಕೇಂದ್ರ ಸರ್ಕಾರ ನಮ್ಮ ರಕ್ಷಣೆ ಮಾಡುತ್ತಿದೆಯೋ, ಇಲ್ಲವೋ ಎಂಬ ಅನುಮಾನ ಮೂಡಿದೆ. ಅಂದಿನ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಪ್ತ ಕಾರ್ಯದರ್ಶಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ಹಾಗೂ ನನ್ನ ಫೋನ್ ಟ್ಯಾಪಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಇದು ಕಾನೂನಿಗೆ ವಿರೋಧ ಎಂದರು.

ಅನೇಕ ಸರ್ಕಾರಗಳು ಫೋನ್ ಟ್ಯಾಪಿಂಗ್​ನಿಂದ ಬಿದ್ದು ಹೋಗಿವೆ. ನಮ್ಮ ರಾಜ್ಯದಲ್ಲಿಯೂ ಉದಾಹರಣೆ ಇದೆ. ಅನೇಕ ಸಚಿವರು ಅಧಿಕಾರವನ್ನ ಕಳೆದುಕೊಂಡಿರುವ ಉದಾಹರಣೆ ದೇಶದಲ್ಲಿದೆ. 17 ಮಂದಿ ಶಾಸಕರು ಕಾಂಗ್ರೆಸ್-ಜೆಡಿಎಸ್​​ನಿಂದ ಹೋದವರು ಸುಮ್ಮನೆ ಹೋಗಿದ್ದಾರೆ ಅಂತಾ ಅನ್ನಿಸ್ತಿಲ್ಲ. ಹಣ ಪಡೆದುಕೊಂಡು ಹೋಗಿರಬಹುದು ಎಂದರು.

ಆ ಸಂದರ್ಭದಲ್ಲಿ ಫೋನ್ ಟ್ಯಾಪಿಂಗ್ ನಡೆದಿದೆ. ಜುಲೈ ತಿಂಗಳಲ್ಲಿ ಟೆಲಿಫೋನ್ ಟ್ಯಾಪ್ ನಡೆದಿರಬಹುದು. ಆಗಿನ ಫೋನ್ ಸಂಭಾಷಣೆ ಬಳಸಿಕೊಂಡು ಸರ್ಕಾರ ಕೆಡವಿರಬಹುದು ಎಂದು ಪರಮೇಶ್ವರ್​​ ನೇರ ಆರೋಪ ಮಾಡಿದರು.

ಇದನ್ನೂ ಓದಿ:'Enough is enough' ಪೆಗಾಸಸ್​ ಅಪರಾಧ ಮಾಡಿದ್ರೆ ತನಿಖೆಗೊಳಪಡಲು ಸಿದ್ಧ ಎಂದ ಕಂಪನಿ!

ABOUT THE AUTHOR

...view details