ಕರ್ನಾಟಕ

karnataka

ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಗೃಹ ಸಚಿವರ ಭೇಟಿ: ಆಯುಧ ಪೂಜೆಯಲ್ಲಿ ಭಾಗಿ

By

Published : Oct 4, 2022, 7:35 PM IST

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ತೀರ್ಥಹಳ್ಳಿಯ ವಿವಿಧ ಠಾಣೆಗಳಿಗೆ ಭೇಟಿ ನೀಡಿ ಆಯುಧ ಪೂಜೆಯಲ್ಲಿ ಭಾಗಿಯಾದರು.

araga-jnanendra-performed-ayudhapooja-at-thrithahalli
ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಗೃಹ ಸಚಿವರ ಭೇಟಿ: ಆಯುಧ ಪೂಜೆಯಲ್ಲಿ ಭಾಗಿ

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ತೀರ್ಥಹಳ್ಳಿಯ ವಿವಿಧ ಪೊಲೀಸ್ ಠಾಣೆಗೆ ಭೇಟಿ‌ ನೀಡಿ ಆಯುಧ ಪೂಜೆಯಲ್ಲಿ ಭಾಗಿಯಾದರು. ಇವರು ತೀರ್ಥಹಳ್ಳಿಯ ಡಿವೈಎಸ್ಪಿ ಕಚೇರಿ, ಪೊಲೀಸ್ ಠಾಣೆಗೆ ಭೇಟಿ ನೀಡಿ ಆಯುಧಪೂಜೆಯಲ್ಲಿ ಪಾಲ್ಗೊಂಡರು.

ಬಳಿಕ ಪೊಲೀಸ್ ಸಿಬ್ಬಂದಿಗಳಿಗೆ ಶುಭಾಶಯಗಳನ್ನು ತಿಳಿಸಿ ಬಳಿಕ ಮಾತನಾಡಿದ ಅವರು, ನಿಮ್ಮ ಕರ್ತವ್ಯಕ್ಕೆ ನಾವೆಂದೂ ಅಡ್ಡಿಯಾಗುವುದಿಲ್ಲ.‌ ನಿಮ್ಮ ಕೈಗೆ ಶಕ್ತಿ ನೀಡುವಂತಹ ಕೆಲಸ ಮಾಡುತ್ತೇನೆ. ಬ್ರಿಟೀಷರ ಕಾಲದ ಪೊಲೀಸ್ ಠಾಣೆ ಬೀಳುವ ಸ್ಥಿತಿಗೆ ತಲುಪಿದ್ದು, ಅದನ್ನು ಕೆಡವಿ ಮರು ನಿರ್ಮಾಣ ಹಣ‌ ಬಿಡುಗಡೆ ಮಾಡಿದ್ದೇನೆ. ನಿಮ್ಮ‌ ಕರ್ತವ್ಯ ಚೆನ್ನಾಗಿ ನಿರ್ವಹಿಸಿ ಎಂದು ಹೇಳಿದರು.

ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಗೃಹ ಸಚಿವರ ಭೇಟಿ: ಆಯುಧ ಪೂಜೆಯಲ್ಲಿ ಭಾಗಿ

ಜಿಲ್ಲಾದ್ಯಂತ ಆಯುಧ ಪೂಜೆ ಸಂಭ್ರಮ: ಶಿವಮೊಗ್ಗದಲ್ಲಿ‌ ಬೆಳಗ್ಗೆಯಿಂದ ಮಳೆ‌ ನಡುವೆಯೂ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಿದ್ದು, ಕಂಡುಬಂತು. ಜಿಲ್ಲೆಯ ಪೊಲೀಸ್ ಠಾಣೆ ಸೇರಿದಂತೆ, ಸರ್ಕಾರಿ ಕಚೇರಿಯಲ್ಲಿನ ವಾಹನಗಳಿಗೆ ಪೂಜೆ ಸಲ್ಲಿಸಿ, ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ :108 ಆರೋಗ್ಯ ಕವಚ ಸಿಬ್ಬಂದಿಗೆ ಇಲ್ಲದ ದಸರಾ ಹಬ್ಬದ ಸಂಭ್ರಮ : ಎರಡು ತಿಂಗಳಿಂದ ಸಂಬಳ ನೀಡದ ಜಿವಿಕೆ ಸಂಸ್ಥೆ

ABOUT THE AUTHOR

...view details