ಕರ್ನಾಟಕ

karnataka

ಮಾಗಡಿಯಲ್ಲಿ ಕೆರೆಗೆ ಹಾರಿದ ತಾಯಿ-ಮಗಳು-ಮೊಮ್ಮಗಳು.. ತಾಯಿ ಸಾವು, ಇಬ್ಬರ ರಕ್ಷಣೆ

By

Published : Jun 6, 2022, 12:53 PM IST

ಮಾಗಡಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಮಾಗಡಿ ಸರ್ಕಾರಿ ಆಸ್ಪತ್ರೆಗೆ ಶವ ಸಾಗಿಸಲಾಗಿದ್ದು, ಉಳಿದಂತೆ ಇಬ್ಬರು ಮಹಿಳೆಯರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ..

ಮಾಗಡಿಯಲ್ಲಿ ಕೆರೆಗೆ ಹಾರಿದ ತಾಯಿ-ಮಗಳು-ಮೊಮ್ಮಗಳು
ಮಾಗಡಿಯಲ್ಲಿ ಕೆರೆಗೆ ಹಾರಿದ ತಾಯಿ-ಮಗಳು-ಮೊಮ್ಮಗಳು

ರಾಮನಗರ :ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ, ಮಗಳ, ಮೊಮ್ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿಯ ಗೌರಮ್ಮನ ಕೆರೆಗೆ ಹಾರಿದ್ದ ಮೂವರಲ್ಲಿ ಓರ್ವ ತಾಯಿ ಸಾವನ್ನಪ್ಪಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮಾಗಡಿಯ ನೇಯಿಗೆ ಬೀದಿ ನಿವಾಸಿ 50 ವರ್ಷದ ಶಾಂತಾ ಬಾಯಿ ಮೃತ ಮಹಿಳೆ. ಉಷಾಬಾಯಿ ಹಾಗೂ ನಿರ್ಮಲಾ ಬಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂತಾಬಾಯಿ, ಮಗಳು, ಮೊಮ್ಮಗಳು ಸೇರಿ ಮೂವರು ತಡರಾತ್ರಿ ಕೆರೆಗೆ ಹಾರಿದ್ದರು.

ಮಾಗಡಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಮಾಗಡಿ ಸರ್ಕಾರಿ ಆಸ್ಪತ್ರೆಗೆ ಶವ ಸಾಗಿಸಲಾಗಿದ್ದು, ಉಳಿದಂತೆ ಇಬ್ಬರು ಮಹಿಳೆಯರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

(ಇದನ್ನೂ ಓದಿ: ದೋಣಿ ಮಗುಚಿ ಓರ್ವ ನಾಪತ್ತೆ, ಇಬ್ಬರ ರಕ್ಷಣೆ : ದುರಂತಕ್ಕೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಕಾರಣ!?)

ABOUT THE AUTHOR

...view details