ಕರ್ನಾಟಕ

karnataka

ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವೆ ಮಾತಿನ ಸಮರ..

By

Published : Jan 18, 2020, 6:33 PM IST

ಮಾಗಡಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾವ ಮಾಹಿತಿಯೂ ಕೊಡಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಾಲಗಂಗಾಧರನಾಥ ಸ್ವಾಮrಯವರ ಹುಟ್ಟೂರಾದ ಬಾನಂದೂರು, ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಈ ಎರಡೂ ಗ್ರಾಮಗಳಿಗೆ ಭೇಟಿ ಕೊಟ್ಟಾಗ ಕ್ಷೇತ್ರದ ಶಾಸಕರಿಗೇ ಜಿಲ್ಲಾಧಿಕಾರಿ ಮಾಹಿತಿ ಕೊಡುತ್ತಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Disha Meeting Conduct  In Ramanagar
ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವೆ ಮಾತಿನ ಸಮರ..!

ರಾಮನಗರ:ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಮಾಗಡಿ ಶಾಸಕ ಎ. ಮಂಜುನಾಥ್​ ಹಾಗೂ ರಾಮನಗರ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ನಡುವೆ ಮಾತಿನ ಜಟಾಪಟಿ ನಡೆದು ಇಬ್ಬರು ಜಗಳಕ್ಕೆ ಬಿದ್ದ ಘಟನೆ‌ ನಡೆಯಿತು.

ಸಂಸದ ಡಿ ಕೆ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಮಾಡಿದ ಶಾಸಕ ಎ. ಮಂಜುನಾಥ್​, ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಮೇಲೆ ಗರಂ ಆಗಿದ್ದರು.

ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವೆ ಮಾತಿನ ಸಮರ..

ಮಾಗಡಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾವ ಮಾಹಿತಿಯೂ ಕೊಡಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಾಲಗಂಗಾಧರನಾಥ ಸ್ವಾಮrಯವರ ಹುಟ್ಟೂರಾದ ಬಾನಂದೂರು, ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಈ ಎರಡೂ ಗ್ರಾಮಗಳಿಗೆ ಭೇಟಿ ಕೊಟ್ಟಾಗ ಕ್ಷೇತ್ರದ ಶಾಸಕರಿಗೇ ಜಿಲ್ಲಾಧಿಕಾರಿ ಮಾಹಿತಿ ಕೊಡುತ್ತಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶಿವಕುಮಾರಸ್ವಾಮೀಜಿಯವರ ಎರಡೂ ಗ್ರಾಮಗಳ ಅಭಿವೃದ್ಧಿಗೆ ತಲಾ ₹25 ಕೋಟಿ ಹಣವನ್ನು ಬಜೆಟ್​ನಲ್ಲಿ ಘೋಷಣೆ ಮಾಡಿದ್ದರು. ಹೊಸ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವು ಕಾಯ್ತಾ ಇದ್ದೇವೆ, ಈ ಬಗ್ಗೆ ಸಭೆ ಕರೆಯುತ್ತಾರೆ. ಆದರೆ, ಇನ್ನೂ ನಮ್ಮನ್ನ ಕರೆದಿಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಬೇಕು, ನಂತರ ಮಾತನಾಡ್ತೇವೆ ಸರ್ಕಾರ ತಾರತಮ್ಯ ನೀತಿ‌ ಬಿಡಬೇಕು ಎಂದು ಸಂಸದ ಡಿ ಕೆ ಸುರೇಶ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಪ್ರಮುಖವಾಗಿ ನೀರಾವರಿ ಯೋಜನೆಗಳು ಮತ್ತು ಕುಡಿಯುವ ನೀರು‌ ಸರಬರಾಜು ಯೋಜನೆಗೆ ಸರ್ಕಾರ‌ ತಡೆಯೊಡ್ಡಿರೋದು ಸರಿಯಲ್ಲ, ಕೂಡಲೇ‌ ಕಾಮಗಾರಿಗಳು ಚಾಲನೆಯಾಗಲಿ ಎಂದರು.

Intro:Body:ರಾಮನಗರ : ಮಾಗಡಿ ಶಾಸಕ ಎ.ಮಂಜು ಹಾಗೂ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ನಡುವೆ ಮಾತಿನ ಜಟಾಪಟಿ
ನಡೆದು ದಿಶಾ ಸಭೆಯಲ್ಲಿಯೇ ಇಬ್ಬರು ಜಗಳಕ್ಕೆ ಬಿದ್ದ ಘಟನೆ‌ ನಡೆಯಿತು.
ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ಸಂಸದ ಡಿ.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು ಜಿಲ್ಲೆಯಲ್ಲಿ ಜನಪ್ರತಿನಿಧಿಗಳನ್ನ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುವ ಗಂಬೀರ ಆರೋಪ ಮಾಡಿದ ಶಾಸಕ ಎ.ಮಂಜು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮೇಲೆ ಗರಂ ಆಗಿದ್ದರು.ಮಾಗಡಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾವ ಮಾಹಿತಿಯೂ ಕೊಡಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು ಬಾನಂದೂರು, ಶಿವಕುಮಾರಸ್ವಾಮೀಜಿಯವರ ಹುಟ್ಟೂರು ವೀರಾಪುರ ಈ ಎರಡೂ ಗ್ರಾಮಗಳಿಗೆ ಭೇಟಿ ಕೊಟ್ಟಾಗ ಕ್ಷೇತ್ರದ ಶಾಸಕರಿಗೇ ಜಿಲ್ಲಾಧಿಕಾರಿ ಮಾಹಿತಿ ಕೊಡುತ್ತಿಲ್ಲಾ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಶಾಸಕ ನಮ್ಮ ಕ್ಷೇತ್ರಕ್ಕೆ ಬಂದಾಗ ಮಾಹಿತಿ ಕೊಡಿ, ನಿಮ್ಮ ಜೊತೆಯಲ್ಲಿ ಬೇರ್ಯಾರೋ ಬರ್ತಾರೆ ಅವರ್ಯಾರು ಎಂದು ಪ್ರಶ್ನಿಸಿದರು.
ರಾಮನಗರ : ಸಮ್ಮಿಶ್ರ ಸರ್ಕಾರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶಿವಕುಮಾರಸ್ವಾಮೀಜಿಯವರ ಎರಡೂ ಗ್ರಾಮಗಳ ಅಭಿವೃದ್ಧಿಗೆ ತಲಾ 25 ಕೋಟಿ ಹಣವನ್ನ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು, ಹೊಸಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವು ಕಾಯ್ತಾ ಇದ್ದೇವೆ, ಈ ಬಗ್ಗೆ ಸಭೆ ಕರೆಯುತ್ತಾರೆ ಅಂತಾ ಆದರೆ ಇನ್ನು ನಮ್ಮನ್ನ ಕರೆದಿಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಬೇಕು, ನಂತರ ಮಾತನಾಡ್ತೇವೆ ಸರ್ಕಾರ ತಾರತ್ಮ್ಯ ನೀತಿ‌ಬಿಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಡದಿಯಲ್ಲಿ ಬಾಲಗಂಗಾಧರ ನಾಥ ಸ್ವಾಮೀಜಿ‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜಿಲ್ಲೆಯ ಬಾನಂದೂರು ಮತ್ತು ವೀರಾಪುರ ಅಭಿವೃದ್ದಿಗೆ ಹಣ ಮೀಸಲಿಟ್ಟಿದ್ದು ಘೋಷಣೆ ಮಾಡಲಾಗಿತ್ತು ಆದರೆ ಸರ್ಕಾರ ಅದನ್ನ ಮರೆತಂತೆ ಜಾಣಮರೆವು ಪ್ರದರ್ಶಿಸುತ್ತಿದೆ ನಾವು ಜಾಸ್ತಿ ಮಾತನಾಡಿದರೆ ಬೇರೆ ರೀತಿ ಚರ್ಚೆಯಾಗುತ್ತೆ
ನಾವು ಅಭಿವೃದ್ಧಿ ಮಾಡ್ತಿದ್ದೇವೆಂದು ಹೇಳಿಕೆ ಕೊಟ್ಟಿದ್ದನ್ನ ನೋಡಿದ್ದೆ
ಆದರೆ ಅದು ಕಾಣ್ತಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಗೆ ಟಾಂಗ್ ನೀಡಿದರು. ಜಿಲ್ಲೆಯಲ್ಲಿ ಅಭಿವೃದ್ಧಿಯ ವಿಚಾರವೇ ಇಲ್ಲ
ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಆಗಿದ್ದ ಎಲ್ಲಾ ಯೋಜನೆಗಳನ್ನ ತಡೆಹಿಡಿಯಲಾಗಿದೆ, ರಾಮನಗರ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ರಾಜಕೀಯ ಕಾರಣಗಳಿಗಾಗಿ ಈ ರೀತಿ ಮಾಡ್ತಿದ್ದಾರೆ ಇದೆಲ್ಲದರ ಬಗ್ಗೆ ಅಧಿವೇಶನ ಬರಲಿ ನಮ್ಮ ಶಾಸಕರು ಮಾತನಾಡ್ತಾರೆ ಎಂದರು.
ಪರಮಪೂಜ್ಯರ ಸ್ವಗ್ರಾ‌ಮ ಅಭಿವೃದ್ಧಿ ಗೆ ಕೂಡಲೇ ಸರ್ಕಾರ ಮುಂದಾಗಬೇಕೆ‌ಂದು ಆಗ್ರಹಿಸಿದರು.
ಜಿಲ್ಲೆಯ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ ಪ್ರಮುಖವಾಗಿ ನೀರಾವರಿ ಯೋಜನೆಗಳು ಮತ್ತು ಕುಡಿಯುವ ನೀರು‌ ಸರಭರಾಜು ಯೋಜನೆಗೆ ಸರ್ಕಾರ‌ ತಡೆಯೊಡ್ಡಿರೋದು ಸರಿಯಲ್ಲ, ಕೂಡಲೇ‌ ಕಾಮಗಾರಿಗಳು ಚಾಲನೆಯಾಗಲಿ ಎಂದ ಅವರು ಈವರೆಗೆ ಅಭಿವೃದ್ದಿಗೆ ಗಮನಹರಿಸಿಲ್ಲ ಇನ್ನೂ ಬಹಳ‌ವರ್ಷ ಇಚಷಚರುತ್ತಲ್ಲಾ ನೋಡೋಣ ಆಗಲಾದರೂ ಮಾಡ್ತಾರ ಅಂತಾ ಎಂದು ಲೇವಡಿ ಮಾಡಿದ ಅವರು ಮುಂದಿನ ದಿನಗಳಲ್ಲಿ ಸದನದಲ್ಲಿ ಎಲ್ಲ ಪ್ರಶ್ನೆಗಳೂ ನಮ್ಮ‌ಶಾಸಕ‌ ಮಿತ್ರರು‌ ಕೇಳಲಿದ್ದಾರೆ ಎಂದರು. ನಾವು ಸಂವಿದಾನದತ್ತವಾಗಿ ಆಯ್ಕೆಯಾದವರು ನೀವು ಹೊಸಹೊಸ‌ ಕಾನೂನು ಮಾಡಬೇಡಿ ಎಂದು ಶಾಸಕ ಎ.ಮಂಜು ಪ್ರಶ್ನೆಗೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಬ್ಬಿಬ್ಬಾದರು. ಇದೇ ವೇಳೆ ಇಬ್ಬರಿಗೂ ಮಾತಿನ‌ ಚಕಮಕಿ ನಡೆಯಿತು.Conclusion:

ABOUT THE AUTHOR

...view details