ಕರ್ನಾಟಕ

karnataka

ರಾಯಚೂರಿಗೆ ಭಾರತ್​ ಜೋಡೋ ಯಾತ್ರೆ: ಕಾಂಗ್ರೆಸ್ ಮುಖಂಡರಿಂದ ಅದ್ದೂರಿ ಸ್ವಾಗತ

By

Published : Oct 21, 2022, 11:29 AM IST

Bharat Jodo Yatra: ರಾಹುಲ್‌ ಗಾಂಧಿ ನಡೆಸುತ್ತಿರುವ 'ಭಾರತ್​ ಜೋಡೋ ಯಾತ್ರೆ' ಇಂದು ರಾಯಚೂರು ಜಿಲ್ಲೆ ಪ್ರವೇಶ ಮಾಡಿದೆ.

Bharat Jodo Yatra to enter Raichur
ರಾಯಚೂರಿಗೆ ಭಾರತ್ ಜೋಡೋ ಯಾತ್ರೆ

ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನಡೆಸುತ್ತಿರುವ 'ಭಾರತ್​ ಜೋಡೋ ಯಾತ್ರೆ' ಇಂದು ರಾಯಚೂರು ಜಿಲ್ಲೆ ಪ್ರವೇಶ ಮಾಡಿದೆ. ಆಂಧ್ರ ಪ್ರದೇಶದಿಂದ ರಾಯಚೂರು ತಾಲೂಕಿನ ತುಂಗಭದ್ರಾ ಸೇತುವೆ ಮೂಲಕ ಜಿಲ್ಲೆಗೆ ಆಗಮಿಸಿದ್ದು, ಜಿಲ್ಲಾ ಕಾ‌ಂಗ್ರೆಸ್ ಮುಖಂಡರು ಅದ್ದೂರಿಯಾಗಿ ಸ್ವಾಗತ ಕೋರಿದರು.

ರಾಯಚೂರಿಗೆ ಭಾರತ್ ಜೋಡೋ ಯಾತ್ರೆ

ಜಿಲ್ಲೆಯ ಗಿಲ್ಲೆಸೂಗೂರುವರೆಗೆ ಪಾದಯಾತ್ರೆ ನಡೆಸಿ ಬಳಿಕ ಸ್ವಲ್ಪ ‌ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಯಾತ್ರೆ ಆರಂಭಿಸಿ ಯರಗೇರಾವರೆಗೆ ತಲುಪಲಿದೆ. ಯರಗೇರಾ ಗ್ರಾಮದಲ್ಲಿ ಕಾರ್ನರ್ ಮೀಟಿಂಗ್ ನಡೆಯಲಿದ್ದು, ಸಾರ್ವಜನಿಕರನ್ನು ಉದ್ದೇಶಿಸಿ ರಾಹುಲ್​​ ಗಾಂಧಿ ಮಾತನಾಡಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಯರಗೇರಾ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.

ರಾಹುಲ್‌ ಗಾಂಧಿ ಅವರಿಗೆ ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು, ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಸಾಥ್​ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋ‌ಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ಮಂತ್ರಾಲಯ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ರಾಹುಲ್ ಗಾಂಧಿ

ABOUT THE AUTHOR

...view details