ಕರ್ನಾಟಕ

karnataka

ಮೈಸೂರು: ನಂಜನಗೂಡಿನಲ್ಲಿ ಚಿರತೆ ಪ್ರತ್ಯಕ್ಷ.. ಇನ್ನೊಂದೆಡೆ ಕರು ಮೇಲೆ ದಾಳಿ

By ETV Bharat Karnataka Team

Published : Oct 17, 2023, 11:44 AM IST

Updated : Oct 17, 2023, 12:06 PM IST

ಮೈಸೂರು ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ನಂಜನಗೂಡು ತಾಲೂಕಿನಲ್ಲಿ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

cheetha-found-in-nanjanagudu-mysore
ಮೈಸೂರು : ನಂಜನಗೂಡಿನಲ್ಲಿ ಚಿರತೆ ಪ್ರತ್ಯಕ್ಷ..ಇನ್ನೊಂದೆಡೆ ಕರು ಮೇಲೆ ದಾಳಿ

ನಂಜನಗೂಡಿನಲ್ಲಿ ಚಿರತೆ ಪ್ರತ್ಯಕ್ಷ

ಮೈಸೂರು: ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಲ್ಲಿನ ನಂಜನಗೂಡು ತಾಲೂಕಿನ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ರಸ್ತೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ಮನು ಎಂಬವರು ಚಿರತೆ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

ಮನು ಅವರು ನಂಜನಗೂಡು ತಾಲೂಕಿನ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಚಿರತೆಯನ್ನು ಕಂಡಿದ್ದಾರೆ. ಬಳಿಕ ಮೊಬೈಲಿನಲ್ಲಿ ಚಿರತೆಯನ್ನು ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ತಿಳಿದ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಗ್ರಾಮದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು,ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಜೊತೆಗೆ ರೈತರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕರು ತಿಂದು ಹಾಕಿದ ಚಿರತೆ : ಜಮೀನಿನಲ್ಲಿ ಮೇಯುತ್ತಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ತಿಂದು ಹಾಕಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಹಳೆ ಕುಕ್ಕೂರು ಗ್ರಾಮದಲ್ಲಿ ನಡೆದಿದೆ. ಸಿಕಂದರ್ ಪಾಷಾ ಎಂಬವರಿಗೆ ಸೇರಿದ ಕರುವನ್ನು ಚಿರತೆ ತಿಂದು ಹಾಕಿದೆ. ಚಿರತೆ ದಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕಗೊಂಡಿದ್ದಾರೆ. ಕುಕ್ಕೂರು ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ದನ ಕರುಗಳ ಮೇಲೆ ಚಿರತೆಗಳು ದಾಳಿ ಸಾಮಾನ್ಯ ಎಂಬಂತಾಗಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ಹಾವು ಕಚ್ಚಿ ರೈತ ಮಹಿಳೆ ಸಾವು : ಹಾವು ಕಚ್ಚಿ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕು ಗೊದ್ದನಪುರ ಗ್ರಾಮದಲ್ಲಿ ನಡೆದಿದೆ. ಜಯಲಕ್ಷ್ಮಿ (42) ಮೃತ ರೈತ ಮಹಿಳೆ.

ಜಯಲಕ್ಷ್ಮಿ ಅವರು ತಮ್ಮ ಜಮೀನಿನಲ್ಲಿ ಬೆಳೆದ ಅವರೇಕಾಯಿ ಕೊಯ್ಯುವಾಗ ಹಾವು ಕಚ್ಚಿದೆ. ಈ ವೇಳೆ ಜಯಲಕ್ಷ್ಮಿ ಅವರು, ನನಗೆ ಹಾವು ಕಚ್ಚಿದೆ ಎಂದು ಜೋರಾಗಿ‌ ಕೂಗಿಕೊಂಡಿದ್ದಾರೆ. ತಕ್ಷಣ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬಸ್ಥರು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಲಕ್ಷ್ಮಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ : ಕೆಟ್ಟು ನಿಂತಿದ್ದ ಲಾರಿಗೆ ವಾಹನಗಳು ಡಿಕ್ಕಿ.. ಎರಡು ಗಂಟೆ ಸಂಚಾರ ವ್ಯತ್ಯಯ

Last Updated :Oct 17, 2023, 12:06 PM IST

ABOUT THE AUTHOR

...view details