ಕರ್ನಾಟಕ

karnataka

ಮೈಸೂರಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಆಕಸ್ಮಿಕ ಬೆಂಕಿ

By

Published : Jan 3, 2021, 6:48 PM IST

Updated : Jan 3, 2021, 7:13 PM IST

ಮೈಸೂರು ನಗರದಲ್ಲಿನ ಬ್ಯಾಂಕ್ ಆಫ್​ ಬರೋಡ ಶಾಖೆಯಲ್ಲಿ ಶಾರ್ಟ್‌ ಸರ್ಕ್ಯೂಟ್ ಸಂಭವಿಸಿ ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಗಾಹುತಿಯಾಗಿದೆ.

Bank of Baroda
ಬ್ಯಾಂಕ್ ಆಫ್ ಬರೋಡಾ

ಮೈಸೂರು:ಇಲ್ಲಿನ ಬ್ಯಾಂಕ್ ಆಫ್​ ಬರೋಡ ಶಾಖೆಯಲ್ಲಿ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದೆ. ನಗರದ ಗಾಂಧಿ ಸ್ಕೈರ್‌ನಲ್ಲಿ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ‌ ಅನಾಹುತ ತಪ್ಪಿಸಿದ್ದಾರೆ.

ಮೈಸೂರಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಆಕಸ್ಮಿಕ ಬೆಂಕಿ

ಓದಿ:ಹೆಣ್ಣಾನೆ ಸಾವು ಪ್ರಕರಣ: ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದ ಅರಣ್ಯಾಧಿಕಾರಿಗಳು

ಬ್ಯಾಂಕ್​ನ ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹೋಗಿವೆ. ಭಾನುವಾರವಾದ್ದರಿಂದ ಬ್ಯಾಂಕ್‌ಗೆ ರಜೆ ಇತ್ತು.

ಸ್ಥಳಕ್ಕೆ ಲಷ್ಕರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated :Jan 3, 2021, 7:13 PM IST

ABOUT THE AUTHOR

...view details