ಕರ್ನಾಟಕ

karnataka

ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದರೆ ನನಗೆ ಲಾಭ: ವರ್ತೂರು ಪ್ರಕಾಶ್

By

Published : Jan 1, 2023, 6:28 PM IST

ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬರುತ್ತಿಲ್ಲ- ಅವರು ಬಂದ್ರೆನೇ ನನಗೆ ಲಾಭ- ವರ್ತೂರು ಪ್ರಕಾಶ್

Varthur Prakash on Siddaramaiah visit to kolara
ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಬಂದರೆ ನನಗೆ ಲಾಭ:ವರ್ತೂರು ಪ್ರಕಾಶ್

ಮಾಜಿ ಸಚಿವ ವರ್ತೂರು ಪ್ರಕಾಶ್

ಕೋಲಾರ: ಮುಂದಿನ ಚುನಾವಣೆಯಲ್ಲಿ ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಬಂದರೆ ನನಗೆ ಲಾಭ, ಆದರೆ ಅವರು ಬರುತಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರಬೇಕು ಅನ್ನೋದು ನನಗೂ ಇಷ್ಟ ಎಂದು ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದರು.

ಹೊಸ ವರ್ಷ ಹಿನ್ನೆಲೆ ಕೋಲಾರ ನಗರದ ಶಕ್ತಿ ದೇವತೆ ಕೋಲಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬರೋದು ನನಗೆ ಅನುಕೂಲ. ಈಗಾಗಲೇ ಅವರು ನಮ್ಮ ಕ್ಷೇತ್ರಕ್ಕೆ ಬರುವ ಬಗ್ಗೆ ಹೇಳಿದ್ದರು. ಆದರೆ ಮೂರ್ನಾಲ್ಕು ಬಾರಿ ದಿನಾಂಕ ಬದಲಾವಣೆಯಾಯಿತು. ಅವರು ಇಲ್ಲಿ ಬಂದು ಚುನಾವಣೆಗೆ ನಿಲ್ಲುವ ಬಗ್ಗೆ ಎಲ್ಲೂ ಹೇಳಿಲ್ಲ, ಅವರೇನಾದರೂ ನ ನಿಗದಿತ ದಿನಾಂಕದ ಬಗ್ಗೆ ಹೇಳಿದರೆ, ನಂತರವಷ್ಟೇ ನಾನು ಏನಾದರೂ ಪ್ರತಿಕ್ರಿಯೆ ನೀಡುವೆ ಎಂದರು.

ಇನ್ನು, ಕೋಲಾರ ಕ್ಷೇತ್ರದಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಶಕ್ತಿ ಕಾಂಗ್ರೆಸ್​ಗೆ ಇಲ್ಲ. ಅವರಿಂದ ಅಂತಹ ಕೆಲಸ ಮಾಡಲು ಸಾಧ್ಯವೇ ಇಲ್ಲ. ಅವರು ಬರುವುದರಿಂದ ನನಗೆ ಲಾಭ, ಆದರೆ ಅವರು ಬರುತ್ತಿಲ್ಲ ಇಲ್ಲ, ಇಂದು ಕೋಲಾರ ತಾಲ್ಲೂಕಿನ ಕುರಗಲ್ ಹಾಗೂ ವಕ್ಕಲೇರಿಯಲ್ಲಿ ಸಾವಿರಾರು ಜನರನ್ನ ಸೇರಿಸಲಾಗಿದೆ ಬಿಜೆಪಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದರು.

ಈ ಹಿಂದೆ ಸಿದ್ದರಾಮಯ್ಯ ಸ್ಪರ್ಧೆ ಕುರಿತು ವರ್ತೂರು ಪ್ರಕಾಶ್ ಪ್ರತಿಕ್ರಿಯೆ:ಈ ಹಿಂದೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ್ದ ವರ್ತೂರು ಪ್ರಕಾಶ್, ನಾನೂ ಒಬ್ಬ ಕುರುಬ, ನನ್ನ ವಿರುದ್ಧ ಸಿದ್ದರಾಮಯ್ಯ ಚುನಾವಣೆಯಲ್ಲಿ ನಿಂತುಕೊಂಡರೆ ರಾಜ್ಯದ ಜನರೇ ಖಂಡಿಸುತ್ತಾರೆ ಎಂದಿದ್ದರು.

ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಿದ್ದರಾಮಯ್ಯ ಪ್ರವಾಸ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿಗೂ ಬಂದಿದ್ದಾರೆ. ಆದರೆ, ಕೋಲಾರ ಜಿಲ್ಲೆಯ ಕೆಲ ಶಾಸಕರು ಸೋಲುವ ಭೀತಿಯಿಂದ ಕೋಲಾರಕ್ಕೆ ಬರುವಂತೆ ಅವರಿಗೆ ಮನವಿ ಮಾಡುತ್ತಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಅಪ್ಪಿತಪ್ಪಿಯೂ ಕೋಲಾರದಲ್ಲಿ ನಿಲ್ಲುವುದಾಗಿ ಹೇಳಿಲ್ಲ. ಕೋಲಾರಕ್ಕೆ ಬಂದರೆ ಇವರೆಲ್ಲಾ ಅನ್ಯಾಯ ಮಾಡುತ್ತಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಈ ರಾಜ್ಯದಲ್ಲಿ ದೊಡ್ಡ ನಾಯಕರು ಯಾವುದೇ ಕಾರಣಕ್ಕೂ ಕೋಲಾರಕ್ಕೆ ಬರಲ್ಲ ಎಂದಿದ್ದರು.

ಇನ್ನು ನಾನು ಅದೇ ಜಾತಿಯವನಾಗಿದ್ದು, ಒಂದು ವೇಳೆ ಅವರು ಇಲ್ಲಿ ಸ್ಪರ್ಧೆಗೆ ಬಂದರೆ ರಾಜ್ಯದ ಜನತೆ ಬೇರೆ ರೀತಿ ಮಾತನಾಡುತ್ತಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ನಾರಾಯಣಸ್ವಾಮಿ ಸೇರಿದಂತೆ ಘಟಬಂಧನ್ ನಾಯಕರು ಸಿದ್ದರಾಮಯ್ಯ ಅವರನ್ನ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಗೋಗರೆಯುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದರೆ ಅವರಿಗೆ ಏನಾಗುತ್ತದೆ ಎಂಬುದು ಗೊತ್ತಿದೆ. ಹೀಗಾಗಿ ರಾತ್ರಿ ಹಗಲು ಕಷ್ಟಪಡುತ್ತಿದ್ದಾರೆ ಎಂದು ಟೀಕಿಸಿದ್ದರು.

ಈ ಹಿಂದೆ ಕೋಲಾರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ :ಸಿದ್ದರಾಮಯ್ಯ ಮುಂದಿನ‌ ವಿಧಾನಸಭಾ‌‌ ಚುನಾವಣೆಯ ಕ್ಷೇತ್ರದ ಆಯ್ಕೆ ಕುರಿತು ಸಾಕಷ್ಟು‌ ಚರ್ಚೆಗಳು ನಡೆಯುತ್ತಿವೆ. ಕೋಲಾರ ಸೇರಿದಂತೆ ಬಾದಾಮಿ, ವರುಣ, ಚಾಮರಾಜಪೇಟೆಯಲ್ಲಿ‌ ಸ್ಪರ್ಧೆ ಮಾಡುವಂತೆ ಅವರಿಗೆ ಆಹ್ವಾನ‌ ನೀಡಲಾಗುತ್ತಿದೆ. ಇದರ ನಡುವೆ ಕೋಲಾರದಲ್ಲಿ‌ ಸ್ಪರ್ಧೆ ಮಾಡಲೇಬೇಕೆಂಬ ಒತ್ತಾಯ,‌ ಮನವಿಗಳು ಬಂದ‌‌ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸ್ವತಃ ಕೋಲಾರ ಜನರ ನಾಡಿಮಿಡಿತ ಅರಿಯಲು ಈ ಹಿಂದೆ ಕೋಲಾರ ಪ್ರವಾಸ ಕೈಗೊಂಡಿದ್ದರು.

ಕೋಲಾರಕ್ಕೆ ಬರುವಂತೆ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಹಾಗೂ ಶಾಸಕರಿಂದ ಒತ್ತಾಯ ಬಂದಿದ್ದು. ಇಂದು ಕೋಲಾರದ‌‌‌ ಜನತೆಯಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಎಲ್ಲರಿಗೂ ನಾನು ಧನ್ಯವಾದವನ್ನು ತಿಳಿಸುವೆ. ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಹೆಚ್ಚಿನ ಒತ್ತಡ ಮತ್ತು ಒತ್ತಾಯ ಇದೆ. ನಾನೂ ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದು, ವರುಣಾ, ಬಾದಾಮಿಯಿಂದಲೂ ಸ್ಪರ್ಧೆಗೆ ಮನವಿಯಿದೆ. ನಾನು ನಾಮಿನೇಷನ್ ಹಾಕಬೇಕು ಅಂದಾಗ ಮತ್ತೆ ಕೋಲಾರಕ್ಕೆ ಬರ್ತೀನಿ ಎಂದು ಸಿದ್ದರಾಮಯ್ಯ ಹೇಳಿದ್ದರು.

ಇದನ್ನೂ ಓದಿ:ತಾವು ಮಾಡಿದ ಕೆಲಸಕ್ಕೆ ಬಿಜೆಪಿ ಮುಖಂಡನಿಗೆ ಕೃತಜ್ಞತೆ.. ವ್ಯಕ್ತಿಗೆ ಥಳಿಸಿದ ಜೆಡಿಎಸ್ ಪುರಸಭೆ ಸದಸ್ಯ

ABOUT THE AUTHOR

...view details