ಕರ್ನಾಟಕ

karnataka

ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಬಂಗಾರಪೇಟೆ ತಹಶೀಲ್ದಾರ್

By

Published : Oct 12, 2022, 11:56 AM IST

ಅಪಘಾತಕ್ಕೀಡಾದ ವ್ಯಕ್ತಿಯೋರ್ವನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ಏರ್ಪಾಡು ಮಾಡುವ ಮೂಲಕ ಬಂಗಾರಪೇಟೆ ತಹಶೀಲ್ದಾರರು ಮಾನವೀಯತೆ ಮೆರೆದಿದ್ದಾರೆ.

ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಬಂಗಾರಪೇಟೆ ತಹಶೀಲ್ದಾರ್
Bangarapet Tehsildar showed humanity by taking the injured person to hospital

ಬಂಗಾರಪೇಟೆ (ಕೋಲಾರ ಜಿಲ್ಲೆ): ಅಪಘಾತವೊಂದರಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಬಂಗಾರಪೇಟೆ ತಹಶೀಲ್ದಾರರು ಮಾನವೀಯತೆ ಮರೆದಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಕಾಲಿಗೆ ಭಾರಿ ಗಾಯವಾಗಿ ರಕ್ತ ಸೋರುತ್ತಿತ್ತು. ಕಾಲಿನ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದು ಕಾಲಿಗೆ ಗಾಯವಾಗಿ ರಕ್ತದ ಮಡುವಿನಲ್ಲಿ ಆತ ನೋವಿನಿಂದ ನರಳಾಡುತ್ತಿದ್ದ. ಸ್ಥಳದಲ್ಲಿದ್ದವರು ಆಂಬ್ಯುಲೆನ್ಸ್​ಗೆ ಕರೆ ಮಾಡಿ ಅರ್ಧ ಗಂಟೆ ಕಳೆದರೂ ಆಂಬ್ಯುಲೆನ್ಸ್​​ ಬಾರದೆ ವ್ಯಕ್ತಿ ನೋವು ತಡೆಯಲಾಗದೆ ಒದ್ದಾಡುತ್ತಿದ್ದ.

ಈ ಸಮಯದಲ್ಲಿ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ತಹಶೀಲ್ದಾರ್ ದಯಾನಂದ್ ತಕ್ಷಣ ಕಾರು ನಿಲ್ಲಿಸಿ ಸ್ಥಳಕ್ಕೆ ಧಾವಿಸಿ ಬಂದರು. ಅಪಘಾತಕ್ಕೀಡಾದ ವ್ಯಕ್ತಿಯನ್ನು ತಕ್ಷಣವೇ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಸಾಗಿಸಿದರು. ಸರ್ಕಾರಿ ವಾಹನದಲ್ಲಿ ಗಾಯಾಳುವನ್ನು ಸಾಗಿಸಿ ಮಾನವೀಯತೆ ಮೆರೆದ ತಹಶೀಲ್ದಾರ್ ದಯಾನಂದ್ ಕಾರ್ಯಕ್ಕೆ ಜನತೆ ಶ್ಲಾಘನೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಮಸ್ಯೆ ಅರಿಯಲು ಕಚೇರಿ ಗೇಟ್​ ಬಳಿ ಕುಳಿತು ಕಾರ್ಯ ನಿರ್ವಹಿಸಿದ ತಹಶೀಲ್ದಾರ್​

ABOUT THE AUTHOR

...view details