ಕರ್ನಾಟಕ

karnataka

ಅಕಾಲಿಕ ಮಳೆ: ಬೆಳೆ ನೀರು ಪಾಲು ರೈತ ಕಂಗಾಲು

By

Published : Dec 16, 2022, 9:48 AM IST

ಮಾಂಡೌಸ್ ಚಂಡಮಾರುತದಿಂದಾಗಿ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಬೆಳೆದ ಬೆಳೆ ಇನ್ನೇನು ಕೈಸೇರಬೇಕು ಎನ್ನುವಷ್ಟರಲ್ಲಿ ಮಣ್ಣು ಪಾಲಾಗಿದೆ.

kodagu-cyclone-effect Rice crop damage
ಬೆಳೆ ನೀರುಪಾಲು ರೈತ ಕಂಗಾಲು

ಬೆಳೆ ನೀರುಪಾಲು ರೈತ ಕಂಗಾಲು

ಕೊಡಗು: ಜಿಲ್ಲೆಯ ಸೋಮವಾರಪೇಟೆ ಹಾಗೂ‌ ಶನಿವಾರಸಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಮಾಂಡೌಸ್ ಚಂಡಮಾರುತದ ಎಫೆಕ್ಟ್ ತಟ್ಟಿದೆ. ಕಳೆದೆರಡು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕೊಡಗಿನ ಬಹುತೇಕ ಎಲ್ಲ ಬೆಳೆಗಳಿಗೆ ಹಾನಿಯಾಗಿದೆ. ಚಂಡಮಾರುತದ ಪರಿಣಾಮ ಸುರಿದ ಭಾರಿ ಮಳೆಯ ಹೊಡೆತಕ್ಕೆ ಭತ್ತದ ಬೆಳೆ ಸಂಪೂರ್ಣವಾಗಿ ನೆಲಕ್ಕಚ್ಚಿದೆ.

ಈಗಾಗಲೇ ಕೊಡಗು ಜಿಲ್ಲೆಯ ಬಹುತೇಕ ಭಾಗಗಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದೆ‌. ಇನ್ನೂ ಕೆಲವು ರೈತರು ಭತ್ತದ ಬೆಳೆಯನ್ನ ಕಟಾವು ಮಾಡಿದ್ದಾರೆ‌. ಕೊಡಗು ಜಿಲ್ಲೆಯ ಗೌಡಳ್ಳಿ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಭಾಗದಲ್ಲಿ ಸುಮಾರು 4 ಇಂಚು ಮಳೆಯಾಗಿದ್ದು, ಕೊಯ್ಲು ಮಾಡಿದ ಭತ್ತವೆಲ್ಲ ನೀರು ಪಾಲಾಗಿದೆ. ಸುರಿದ ಮಳೆಗೆ ಗದ್ದೆಯಲ್ಲಿ ಸುಮಾರು 2 ಅಡಿಗಳಷ್ಟು ನೀರು ನಿಂತಿದ್ದು, ಭತ್ತದ ಬೆಳೆ ಸಂಪೂರ್ಣವಾಗಿ ಮಣ್ಣುಪಾಲಾಗಿದೆ‌. ಇನ್ನೂ ಕೆಲವು ಕಡೆಗಳಲ್ಲಿ ನೀರಿನ ಸೆಳೆತಕ್ಕೆ ಭತ್ತದ ಪೈರೆಲ್ಲ ಕೊಚ್ಚಿಹೊಗಿದೆ.

ಭತ್ತದ ಬೆಳೆಯನ್ನೇ ನಂಬಿದ ರೈತ ಮಳೆಯಿಂದ ಕಂಗಲಾಗಿ‌ ಹೋಗಿದ್ದಾನೆ. ಇನ್ನು ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಯನ್ನ ಬೆಳೆಯೋ ರೈತರ ಸಂಖ್ಯೆ ಕೂಡ ಕಡಿಮೆ ಇದರ ನಡುವೆ ಈ ರೀತಿಯ ಅಕಾಲಿಕ ಮಳೆ ಕೂಡ ರೈತರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿರುವುದು ವಿಪರ್ಯಾಸ. ಇದು ಕೇವಲ ಭತ್ತದ ಬೆಳೆ ಮಾತ್ರವಲ್ಲ ಹೊಡೆತ ನೀಡಿಲ್ಲ ಬದಲಾಗಿ ಕೊಡಗಿನ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು ಬೆಳೆಗೂ ಭಾರಿ‌ ಹೊಡೆತ ನೀಡಿದೆ.

ಇದನ್ನೂ ಓದಿ:ಮಾಂಡೌಸ್ ಚಂಡಮಾರುತದ ಮಳೆಗೆ ಕಾಫಿ ಬೆಳೆಗಾರರು ಕಂಗಾಲು

ABOUT THE AUTHOR

...view details