ಕರ್ನಾಟಕ

karnataka

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿಜಯ್ ಕುಲಕರ್ಣಿ, ಸೋಮು ನ್ಯಾಮಗೌಡ ಸಿಬಿಐ ವಿಚಾರಣೆ

By

Published : Nov 21, 2020, 11:43 AM IST

Updated : Nov 21, 2020, 12:59 PM IST

ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಮತ್ತು ಸೋಮು ನ್ಯಾಮಗೌಡ ಸಿಬಿಐ ವಿಚಾರಣೆಗೆ ಆಗಮಿಸಿದ್ದಾರೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ
ವಿಜಯ್ ಕುಲಕರ್ಣಿ, ಸೋಮು ನ್ಯಾಮಗೌಡ ಸಿಬಿಐ ವಿಚಾರಣೆ

ಧಾರವಾಡ: ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಸಿಬಿಐ ವಿಚಾರಣೆಗೆ ಆಗಮಿಸಿದ್ದಾರೆ.

ವಿಜಯ್ ಕುಲಕರ್ಣಿ, ಸೋಮು ನ್ಯಾಮಗೌಡ ಸಿಬಿಐ ವಿಚಾರಣೆ

ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ವಿಜಯ್ ಕುಲಕರ್ಣಿ ಅವರನ್ನು ವಿಚಾರಣೆಗೆ ಕರೆಸಿಕೊಂಡಿದ್ದು, ಮತ್ತಷ್ಟು ಕುತೂಹಲ ಮೂಡಿದೆ. ಈಗಾಗಲೇ ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ಐದು ಜನರ ತಂಡ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಸಹ ಹಲವರನ್ನು ಕರೆಸಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಂದು ಇನ್ನಷ್ಟು ಜನರನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಸೋಮು ನ್ಯಾಮಗೌಡಗೆ ಸಿಬಿಐ ಡ್ರಿಲ್:ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಸೋಮು ನ್ಯಾಮಗೌಡ ಸಹ ಸಿಬಿಐ ವಿಚಾರಣೆಗೆ ಆಗಮಿಸಿದ್ದಾರೆ. ಸೋಮು, ವಿನಯ ಕುಲಕರ್ಣಿ ಅವರ ಹಳೆಯ ಆಪ್ತ.

Last Updated :Nov 21, 2020, 12:59 PM IST

TAGGED:

ABOUT THE AUTHOR

...view details