ಕರ್ನಾಟಕ

karnataka

ಬಿಕಾಂ ಫೇಲಾದ್ರೂ ಕವಿವಿಯೊಳಗೆ ಎಂಕಾಮ್‌ಗೆ ಪ್ರವೇಶಾತಿ.. ಗೋಲ್‌ಮಾಲ್‌ ಗೊತ್ತಾದ್ರೂ..

By

Published : Dec 27, 2020, 1:03 PM IST

ಈಕೆ ಫೇಲಾದ ವೇಳೆ, ಮೌಲ್ಯಮಾಪನ ವಿಭಾಗದ ಕೆಲವರನ್ನು ಭೇಟಿಯಾಗಿ ಅಲ್ಲಿಯೇ ಅಂಕಪಟ್ಟಿ ಗೋಲ್‌ಮಾಲ್ ಮಾಡಿದ್ದಾರೆ ಎಂಬ ಆರೋಪವಿದೆ. ಈಕೆಯ ಹಳೆಯ ಅಂಕಪಟ್ಟಿ ಬದಲಿಗೆ ಹೊಸ ಅಂಕಪಟ್ಟಿಯೊಂದು ಪ್ರಿಂಟ್ ಆಗಿದೆ..

karnataka university has been granted admission to failed student
ಪೇಲಾದವರಿಗೆ ಪ್ರವೇಶ ಆರೋಪ....ಕ್ರಮಕ್ಕೆ ಮುಂದಾಗದ ಕವಿವಿ

ಧಾರವಾಡ: ನಕಲಿ ಅಂಕಪಟ್ಟಿ ಸೃಷ್ಟಿಸಿ ವಿದ್ಯಾರ್ಥಿನಿಯೊಬ್ಬರು ಎಂಕಾಮ್‌ಗೆ ಪ್ರವೇಶಾತಿ ಪಡೆದಿರೋದು ತಿಳಿದರೂ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾದ ಜಿಎಫ್‌ಜಿಸಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಅಶ್ವಿಥ್ ಗುನಗಾ ಎಂಬ ವಿದ್ಯಾರ್ಥಿನಿ 2019ರಲ್ಲಿ ತನ್ನ 6ನೇ ಸೆಮಿಸ್ಟರ್​ನಲ್ಲಿ ಫೇಲಾಗಿದ್ದರೂ ಕವಿವಿಯಲ್ಲಿ ಎಂಕಾಂ ಪ್ರವೇಶ ಪಡೆದುಕೊಂಡಿದ್ದಾಳೆ ಎಂಬ ಆರೋಪವಿದೆ.

ಮೌಲ್ಯಮಾಪನ ಕುಲ ಸಚಿವರು ಈ ಬಗ್ಗೆ ಹೀಗಂತಾರೆ..

ವಿದ್ಯಾರ್ಥಿನಿ ಬ್ಯುಸಿನೆಸ್ ಲಾ ವಿಷಯದಲ್ಲಿ ನೂರು ಅಂಕಗಳಿಗೆ 20 ಅಂಕಗಳನ್ನಷ್ಟೇ ಪಡೆದಿದ್ದಾಳೆ. ಆದರೆ, ಆಕೆಗೆ ಕವಿವಿ ಎಂಕಾಂ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಿದೆ. ಈಕೆಯ ಅಂಕಪಟ್ಟಿ ಬದಲಾಗಿರುವುದೇ ಇದಕ್ಕೆ ಕಾರಣ.

ಈಕೆ ಫೇಲಾದ ವೇಳೆ, ಮೌಲ್ಯಮಾಪನ ವಿಭಾಗದ ಕೆಲವರನ್ನು ಭೇಟಿಯಾಗಿ ಅಲ್ಲಿಯೇ ಅಂಕಪಟ್ಟಿ ಗೋಲ್‌ಮಾಲ್ ಮಾಡಿದ್ದಾರೆ ಎಂಬ ಆರೋಪವಿದೆ. ಈಕೆಯ ಹಳೆಯ ಅಂಕಪಟ್ಟಿ ಬದಲಿಗೆ ಹೊಸ ಅಂಕಪಟ್ಟಿಯೊಂದು ಪ್ರಿಂಟ್ ಆಗಿದೆ. ಅದರಲ್ಲಿ 20 ಅಂಕಗಳ ಬದಲಿಗೆ 46 ಅಂಕಗಳು ಎಂದು‌ ನಮೂದಿಸಲಾಗಿದೆ.

ಈ ಸುದ್ದಿಯನ್ನೂ ಓದಿ:ಕರಗಾಂವ ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಪರ ಮತಪ್ರಚಾರ ಆರೋಪ!

ಈ ಬಗ್ಗೆ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ರವೀಂದ್ರನಾಥ ಕದಂ ಅವರನ್ನು ವಿಚಾರಿಸಿದಾಗ, ಈ ವಿಷಯ ಗಮನಕ್ಕೆ ಬಂದಿದೆ. ನಾವು ವಿಚಾರಣೆ ನಡೆಸುತ್ತಿದ್ದೇವೆ.

ವಿದ್ಯಾರ್ಥಿನಿ‌ ಹೊರಗಡೆ ಅಂಕಪಟ್ಟಿ ತಿದ್ದುಪಡಿ ಮಾಡಿಸಿಕೊಂಡು ಬಂದು ಎಂಕಾಂ ಪ್ರವೇಶ ಪಡೆದುಕೊಂಡಿದ್ದಾಳೆ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ, ಅದೆಷ್ಟರ ಮಟ್ಟಿಗೆ ನಿಜ ಅನ್ನೋದು ತನಿಖೆಯಿಂದಲಷ್ಟೇ ಹೊರ ಬರಬೇಕಿದೆ.

ABOUT THE AUTHOR

...view details