ಕರ್ನಾಟಕ

karnataka

ಯೋಗೇಶ್​ ಗೌಡ ಕೊಲೆ ಕೇಸ್‌ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

By

Published : Dec 9, 2020, 5:55 PM IST

ಸಿಬಿಐ ವಾದಕ್ಕೆ ಉತ್ತರ ನೀಡುವಂತೆ ವಿನಯ್ ಕುಲರ್ಣಿ ಪರ ವಕೀಲರಿಗೆ ಸೂಚನೆ ನೀಡಿ, ಕೋರ್ಟ್ ಹಾಲ್​ಗೆ ವಾದ-ಪ್ರತಿವಾದ ಸ್ಥಳಾಂತರಿಸಿದರು. ಬಳಿಕ ಕೋರ್ಟ್ ಹಾಲ್‌ಗೆ‌ ಆಗಮಿಸಿದ ನ್ಯಾಯಾಧೀಶರು, ವಕೀಲರ ವಾದ- ಪ್ರತಿವಾದ‌ ಆಲಿಸಿ ತೀರ್ಪು ಕಾಯ್ದಿರಿಸಿದ್ದಾರೆ..

Yogesh Gowda murder case update
ಯೋಗೇಶ್​ ಗೌಡ ಕೊಲೆ ಪ್ರಕರಣ

ಧಾರವಾಡ : ಜಿಲ್ಲಾ ಪಂಚಾಯತ್​ ‌ಸದಸ್ಯ ಯೋಗೇಶ್​ ಗೌಡ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ‌ ಸಚಿವ ವಿನಯ್​ ಕುಲಕರ್ಣಿ ಜಾಮೀನು‌ ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ತೀರ್ಪು ಕಾಯ್ದಿರಿಸಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಡಿ.14ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ. ಸಿಬಿಐ ಪರ ವಕೀಲರು ದೆಹಲಿಯಿಂದ ವಿಡಿಯೋ‌ ಕಾನ್ಫರೆನ್ಸ್ ಮೂಲಕ ಜಾಮೀನು ನೀಡದಂತೆ ವಾದ ಮಂಡನೆ‌ ಮಾಡಿದರು. ‌ಪ್ರಕರಣದ ಪ್ರಮುಖ ಆರೋಪಿ ವಿನಯ್ ಕುಲಕರ್ಣಿ ಪ್ರಭಾವಿ ವ್ಯಕ್ತಿ. ಹೀಗಾಗಿ ಜಾಮೀನು ನೀಡದಂತೆ ಮನವಿ‌ ಮಾಡಿದರು.

ಇದನ್ನೂ ಓದಿ : ಯೋಗೀಶ್ ಗೌಡ ಹತ್ಯೆ ಪ್ರಕರಣ: ಇಂದು ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ

ವಿಡಿಯೋ ‌ಕಾನ್ಪರೆನ್ಸ್​ನಲ್ಲಿ ವಾದ ಆಲಿಸಿದ ನ್ಯಾಯಾದೀಶರು, ಸಿಬಿಐ ವಾದಕ್ಕೆ ಉತ್ತರ ನೀಡುವಂತೆ ವಿನಯ್ ಕುಲರ್ಣಿ ಪರ ವಕೀಲರಿಗೆ ಸೂಚನೆ ನೀಡಿ, ಕೋರ್ಟ್ ಹಾಲ್​ಗೆ ವಾದ-ಪ್ರತಿವಾದವನ್ನು ಸ್ಥಳಾಂತರ ಮಾಡಿದರು. ಬಳಿಕ ಕೋರ್ಟ್ ಹಾಲ್‌ಗೆ‌ ಆಗಮಿಸಿದ ನ್ಯಾಯಾಧೀಶರು, ವಕೀಲರ ವಾದ- ಪ್ರತಿವಾದ‌ ಆಲಿಸಿ ತೀರ್ಪು ಕಾಯ್ದಿರಿಸಿದ್ದಾರೆ.

ABOUT THE AUTHOR

...view details