ಕರ್ನಾಟಕ

karnataka

ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆಯಲ್ಲಿದ್ದ ಹಣ ಆಭರಣ ಕಳ್ಳತನ.. ಮಹಿಳೆ ಬಂಧನ

By

Published : Sep 30, 2022, 7:17 PM IST

ಚನ್ನಗಿರಿ ಪೊಲೀಸ್​ ಠಾಣೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗುಳ್ಳೆಹಳ್ಳಿ ಗ್ರಾಮದ ಉಮಾದೇವಿ ಎಂಬುವವರನ್ನು ಹಣ ಹಾಗೂ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪದ ಮೇರೆಗೆ ಬಂಧಿಸಲಾಗಿದೆ.

ದಾವಣಗೆರೆ: ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆಯಲ್ಲಿದ್ದ ಹಣ, ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಚನ್ನಗಿರಿ ಮೂಲದ ಮಹಿಳೆಯನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಕೆಲಸಕ್ಕೆ ಸೇರಿಕೊಂಡ ಮಹಿಳೆ ಮನೆಯಲ್ಲಿದ್ದ ಹಣ, ಆಭರಣಗಳೊಂದಿಗೆ ಪರಾರಿಯಾಗಿದ್ದ ಘಟನೆ ಬೆಂಗಳೂರಲ್ಲಿ ನಡೆದಿತ್ತು. ಈ ಸಂಬಂಧ ಚನ್ನಗಿರಿ ತಾಲೂಕು ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆಯಿಂದ 5 ಲಕ್ಷ ರೂ. ನಗದು ಸೇರಿದಂತೆ 15 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗುಳ್ಳೆಹಳ್ಳಿ ಗ್ರಾಮದ ಉಮಾದೇವಿ (43)ವರ್ಷದ ಬಂಧಿತ ಮಹಿಳೆ. ಅಪರ್ಣ ಎಂಬುವರ ಮನೆಯಲ್ಲಿ ಅವರ ತಂದೆ ಗಂಗಣ್ಣ ಎಂಬುವರನ್ನು ನೋಡಿಕೊಳ್ಳಲು ಕೇರ್ ಟೇಕರ್ ಕೆಲಸಕ್ಕೆ ಉಮಾದೇವಿ ನೇಮಕ ಮಾಡಿಕೊಂಡಿದ್ದರು. ಸೆ. 21ರಂದು ಉಮಾದೇವಿ ಮನೆಯಲ್ಲಿದ್ದ ನಗದು, ಚಿನ್ನದ ಒಡವೆಗಳನ್ನು ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಳು.

ಈ ಬಗ್ಗೆ ಅಪರ್ಣ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿತೆ ಬಗ್ಗೆ ಮಾಹಿತಿ ಕಲೆ ಹಾಕಿ, ಪತ್ತೆಹಚ್ಚಿ ಬಂಧಿಸಿ 5 ಲಕ್ಷ ರೂ. ನಗದು, 230 ಗ್ರಾಂ ಚಿನ್ನದ ಒಡವೆಗಳು, 750 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗೆ ವಶಪಡಿಸಿಕೊಂಡ ಆಭರಣಗಳ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಓದಿ:10 ಕುಖ್ಯಾತ ಸರಗಳ್ಳರ ಬಂಧನ: 1 ಕೆಜಿ ತೂಕದ 25 ಚಿನ್ನದ ಸರಗಳು ವಶ

ABOUT THE AUTHOR

...view details