ಕರ್ನಾಟಕ

karnataka

ಏಷ್ಯಾ ಖಂಡದಲ್ಲೇ ಅಪರೂಪವಾಗಿರುವ ಕೊಂಡುಕುರಿ ದಾವಣಗೆರೆಯಲ್ಲಿ ಪ್ರತ್ಯಕ್ಷ

By

Published : Oct 17, 2021, 12:11 PM IST

kondu lamb
kondu lamb

ಬಯಲು ಸೀಮೆಯ ಯಜಮಾನ ಎಂದೇ ಖ್ಯಾತಿ ಪಡೆದಿರುವ ಕೊಂಡುಕುರಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯನ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಕಾಣಿಸಿಕೊಂಡಿದೆ.

ದಾವಣಗೆರೆ: ಏಷ್ಯಾ ಖಂಡದಲ್ಲೇ ಅಪರೂಪದ ಜೀವ ಸಂಕುಲ ಎಂದು ಕರೆಯುವ ಕೊಂಡುಕುರಿ ಪ್ರಾಣಿ ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯನ ಅರಣ್ಯ ಪ್ರದೇಶದಲ್ಲಿ ಇಂದು ಪ್ರತ್ಯಕ್ಷವಾಗಿದೆ.

ಬಯಲು ಸೀಮೆಯ ಯಜಮಾನ ಎಂದೇ "ಕೊಂಡುಕುರಿ" ಖ್ಯಾತಿ ಪಡೆದುಕೊಂಡಿದೆ. ಇದು ಏಷ್ಯಾ ಖಂಡದಲ್ಲೇ ಅಪರೂಪದ ಜೀವ ಸಂಕುಲವಾಗಿದ್ದು, ಕಾಣ ಸಿಗುವುದೇ ವಿರಳ. ಜಿಂಕೆಯನ್ನು ಹೋಲುವ ಕೊಂಡುಕುರಿ ನಾಚಿಕೆ ಸ್ವಭಾವವುಳ್ಳದ್ದಾಗಿದ್ದು, ಇಡೀ ಏಷ್ಯಾ ಖಂಡದಲ್ಲೇ ಇಲ್ಲದ ಈ ಪ್ರಾಣಿ ಸಂತತಿ ಜಗಳೂರು ತಾಲೂಕಿನಲ್ಲಿರುವುದು ಹೆಮ್ಮೆಯ ವಿಚಾರ.

ರಂಗಯ್ಯನ ಅರಣ್ಯ ಪ್ರದೇಶದಲ್ಲಿ ಕೊಂಡುಕುರಿ ಪ್ರತ್ಯಕ್ಷ

ಇಂದು ಮುಂಜಾನೆ ರಂಗಯ್ಯನ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕೊಂಡುಕುರಿ ಪ್ರಾಣಿಯನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಸೆರೆ ಹಿಡಿದಿದ್ದಾರೆ. ಈಗಾಗಲೇ ರಂಗಯ್ಯನ ಅರಣ್ಯಪ್ರದೇಶವನ್ನು ಸರ್ಕಾರ ಮೀಸಲಿಟ್ಟು, ಕೊಂಡುಕುರಿಗಳ ರಕ್ಷಣೆಗೆ ಮುಂದಾಗಿದೆ.

ರಂಗಯ್ಯನ ಅರಣ್ಯ ಪ್ರದೇಶದಲ್ಲಿ ಕೊಂಡುಕುರಿ ಪ್ರತ್ಯಕ್ಷ

ABOUT THE AUTHOR

...view details