ಕರ್ನಾಟಕ

karnataka

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಪುತ್ತೂರಿನ ಹಲವೆಡೆ ಎನ್‌ಐಎ ದಾಳಿ, ದಾಖಲೆಗಳು ವಶಕ್ಕೆ

By

Published : Sep 7, 2022, 8:40 AM IST

ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು(ಎನ್‌ಐಎ) ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.

praveen-nettaru-murder-caset
Etv Bharatಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ

ಸುಳ್ಯ(ದಕ್ಷಿಣ ಕನ್ನಡ):ಜಲೈ 26 ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಮುಂದುವರೆಸಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಸುಳ್ಯ, ಪುತ್ತೂರು ಹಾಗೂ ಮೈಸೂರು, ಕೊಡಗು ಜಿಲ್ಲೆಗಳ ಸುಮಾರು 33 ಕಡೆಗಳಲ್ಲಿ ಮನೆಗಳು, ವಾಣಿಜ್ಯ ಕಟ್ಟಡಗಳಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಡಿಜಿಟಲ್ ಸಾಧನಗಳು, ಬಳಸಿದ ಮದ್ದುಗುಂಡುಗಳು, ಸುಧಾರಿತ ಶಸ್ತ್ರಾಸ್ತ್ರಗಳು, ನಗದು, ಕರಪತ್ರಗಳು ಮತ್ತು ಕೆಲವು ಸಾಹಿತ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಎನ್ಐಎ ಅಧಿಕಾರಿಗಳು ಪ್ರಸ್ತುತ ಬಂಧನದಲ್ಲಿರುವ ಹತ್ಯೆಯ ಆರೋಪಿಗಳು ಮತ್ತು ಸಹಕಾರ ನೀಡಿದವರನ್ನೂ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ ತನಿಖಾಧಿಕಾರಿಗಳು ಬೆಳ್ಳಂಬೆಳಗ್ಗೆ ಪುತ್ತೂರು, ಉಪ್ಪಿನಂಗಡಿ, ಕಬಕ ಮತ್ತು ಸುಳ್ಯದ 32 ಕಡೆಗಳಿಗೆ ದಾಳಿ ನಡೆಸಿದ್ದಾರೆ. ಕೊಲೆಗೆ ಸಹಕರಿಸಿದವರನ್ನು ಪುತ್ತೂರಿನ ದರ್ಬೆ ನಿರೀಕ್ಷಣಾ ಮಂದಿರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪ್ರವೇಶಿಸಲು ಮಾಧ್ಯಮದವರನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ :ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸುಳ್ಯ, ಪುತ್ತೂರಿನ 32 ಕಡೆಗಳಲ್ಲಿ ಎನ್​ಐಎ ದಾಳಿ

ABOUT THE AUTHOR

...view details