ಕರ್ನಾಟಕ

karnataka

ಪೊಲೀಸ್ ಶ್ವಾನ ಸಾವು: ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

By

Published : Jul 24, 2021, 6:13 PM IST

ಕಳೆದ ಐದು ತಿಂಗಳ ಹಿಂದೆ ಸುಧಾಳಿಗೆ ಎದೆ ಭಾಗದಲ್ಲಿ ಕ್ಯಾನ್ಸರ್ ಟ್ಯೂಮರ್ ಆಗಿದ್ದು, ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಆರೋಗ್ಯದಲ್ಲಿ ಸ್ಥಿರತೆ ಇತ್ತು. ಆದರೆ ಕಳೆದ ಒಂದು ವಾರದಲ್ಲಿ ಅದರ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ, ಇಂದು ಬೆಳಗ್ಗೆ 10.20 ಗಂಟೆ ಸುಮಾರಿಗೆ ಕೊನೆ ಉಸಿರೆಳೆದಿದೆ.

ಪೊಲೀಸ್ ಶ್ವಾನ ಸುಧಾ ಸಾವು
ಪೊಲೀಸ್ ಶ್ವಾನ ಸುಧಾ ಸಾವು

ಮಂಗಳೂರು: ನಗರ ಪೊಲೀಸ್ ಶ್ವಾನದಳದ ಸ್ನೀಫರ್ ಡಾಗ್ ಸುಧಾ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದು, ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಸಕಲ ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಿತು.

ಪೊಲೀಸ್ ಶ್ವಾನ ಸಾವು ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

2011ರಲ್ಲಿ ಹುಟ್ಟಿದ ಶ್ವಾನ ಸುಧಾ, 2012ರಲ್ಲಿ ಇಲಾಖೆಗೆ ಸೇರ್ಪಡೆಗೊಂಡಿತ್ತು. ಡಾಬರ್​ಮನ್ ಪಿಂಚ್​​​​ ಜಾತಿಗೆ ಸೇರಿದ ಈ ನಾಯಿಗೆ 10 ವರ್ಷ 3 ತಿಂಗಳು ವಯಸ್ಸಾಗಿತ್ತು. ಕಳೆದ ಐದು ತಿಂಗಳ ಹಿಂದೆ ಸುಧಾಳಿಗೆ ಎದೆ ಭಾಗದಲ್ಲಿ ಕ್ಯಾನ್ಸರ್ ಟ್ಯೂಮರ್ ಆಗಿದ್ದು, ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಆರೋಗ್ಯದಲ್ಲಿ ಸ್ಥಿರತೆ ಇತ್ತು. ಆದರೆ, ಕಳೆದ ಒಂದು ವಾರದಲ್ಲಿ ಅದರ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ 10.20 ಗಂಟೆ ಸುಮಾರಿಗೆ ಕೊನೆಯಿಸಿರೆಳೆದಿದೆ.

ಪೊಲೀಸ್ ಶ್ವಾನ ಸುಧಾ

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಪೊಲೀಸ್ ಶ್ವಾನದಳದ ಸ್ನೀಫರ್ ಡಾಗ್ ಸುಧಾ ಮೃತಪಟ್ಟಿರುವುದು ಬಹಳ ಬೇಸರದ ಸಂಗತಿ. ಇನ್ನೂ ಎರಡು ವರ್ಷಗಳ ಕಾಲ ಅದರ ಸೇವಾವಧಿ ಇತ್ತು. ವಾರದಿಂದ ಆರೋಗ್ಯ ಹದಗೆಟ್ಟ ಪರಿಣಾಮ ಎರಡು ದಿನಗಳಿಂದ ಆಹಾರ ತ್ಯಜಿಸಿತ್ತು. ಸುಮಾರು 10 ವರ್ಷಗಳ ಕಾಲ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದೆ.

ಪೊಲೀಸ್ ಶ್ವಾನ ಸುಧಾ

ಮಂಗಳೂರು ನಗರ ಸೇರಿದಂತೆ, ದ.ಕ.ಜಿಲ್ಲೆಯ ಸುಮಾರ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಈ ನಾಯಿ ಸಹಕರಿಸಿತ್ತು. ಎರಡು ಕೊಲೆ ಪ್ರಕರಣಗಳಲ್ಲೂ, ಮೃತದೇಹದ ಪತ್ತೆ ಕಾರ್ಯದಲ್ಲಿ, ಗಂಭೀರ ಪ್ರಕರಣಗಳ ಸಂದರ್ಭದಲ್ಲಿಯೂ ಸಹಕಾರಿಯಾಗಿತ್ತು. ಡಾಗ್ ಸ್ಕ್ವಾಡ್ ನಲ್ಲಿ ಅತ್ಯಂತ ಚುರುಕಾದ ನಾಯಿ ಇದಾಗಿತ್ತು. ಆದಷ್ಟು ಶೀಘ್ರದಲ್ಲೇ ಇದಕ್ಕೆ ಪರ್ಯಾಯವಾಗಿ ಮತ್ತೊಂದು ನಾಯಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ಇನ್ನೆರಡು ನಾಯಿಗಳನ್ನು ತರಬೇತಿ ನೀಡಿ ಇಲಾಖೆಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಹೇಳಿದರು.

10 ವರ್ಷಗಳ ಕಾಲ ನಾಯಿಯ ಆರೈಕೆ, ತರಬೇತಿ ಮಾಡಿರುವ ಪೊಲೀಸ್ ಸಂದೀಪ್ ಮಾತನಾಡಿ, ಮೂರು ತಿಂಗಳ ಮರಿ ಇರುವಾಗ ಸುಧಾಳನ್ನು ಇಲಾಖೆಗೆ ಸೇರಿಸಲಾಗಿತ್ತು. ಆ ಬಳಿಕ ನಾನೇ ಇದರ ಆರೈಕೆ ಮಾಡಿದ್ದೆ. ನನಗೆ ಬಹಳಷ್ಟು ಹೊಂದಿಕೊಂಡಿತ್ತು. ನನ್ನ ಆಜ್ಞೆಯಿಲ್ಲದೇ ಅತ್ತಿತ್ತ ಹೋಗುತ್ತಿರಲಿಲ್ಲ. ಬಹಳಷ್ಟು ಪ್ರಕರಣಗಳಲ್ಲಿ ಅಪರಾಧಿಗಳ ಪತ್ತೆ ಹಚ್ಚಲು ಪೊಲೀಸರಿಗೆ ಸಹಕಾರ ನೀಡಿದೆ ಎಂದು ಗದ್ಗದಿತರಾದರು‌. ಸಂದೀಪ್ ಅವರ ಬೈಕ್ ನಲ್ಲಿಯೂ ನಾಯಿ ಸುಧಾ ಹೆಸರು ಹಾಕಿಕೊಂಡಿದ್ದಾರಂತೆ.

ಇದನ್ನೂ ಓದಿ : ಅಂದು ಬೆಳಗಾವಿಯಿಂದಲೇ ಆರಂಭವಾಗಿದ್ದ ಬಿಎಸ್‍ವೈ ಪ್ರವಾಸ.. ಇಂದು ಬೆಳಗಾವಿಯಿಂದಲೇ ಕೊನೆಯಾಗುತ್ತಾ...?

ABOUT THE AUTHOR

...view details