ಕರ್ನಾಟಕ

karnataka

ಲಿಂಗಾಯತರಲ್ಲಿ ಬಡವರು, ಶ್ರೀಮಂತರು ಇದ್ದಾರೆ, ಶೇ.16 ರಷ್ಟು ಮೀಸಲು ನೀಡಿ: ಮುರುಘಾ ಶ್ರೀ

By

Published : Nov 27, 2020, 1:05 PM IST

ವೀರಶೈವ ಲಿಂಗಾಯತರಲ್ಲಿ ಬಡವರು ಇದ್ದಾರೆ, ಶ್ರೀಮಂತರೂ ಇದ್ದಾರೆ. ಸಮುದಾಯದಲ್ಲಿರುವ ನಾವು ಬಡವರ ಬಗ್ಗೆ ಅಲೋಚನೆ ಮಾಡ್ಬೇಕಾಗಿದೆ. ಹಾಗಾಗಿ ಶೇ.16ರಷ್ಟು ಮೀಸಲಾತಿ ಬೇಕಾಗಿದೆ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ:ವೀರಶೈವ ಹಾಗೂ ಲಿಂಗಾಯತ ಸಮುದಾಯದಲ್ಲಿ 80ಕ್ಕೂ ಹೆಚ್ಚು ಉಪಜಾತಿಗಳಿದ್ದು, ಆ ಜಾತಿಗಳು ತುಳಿತಕ್ಕೆ ಒಳಗಾಗಿದ್ದರಿಂದ ಒಳ ಮೀಸಲಾತಿ ಅವಶ್ಯಕವಾಗಿದೆ ಎಂದು ಹೇಳುವ ಮೂಲಕ ಶಿವಮೂರ್ತಿ ಮುರುಘಾ ಶರಣರು ಮೀಸಲಾತಿ ಬಗ್ಗೆ ಧ್ವನಿ ಎತ್ತಿದ್ದಾರೆ‌‌.

ಮೀಸಲಾತಿ ಬಗ್ಗೆ ಧ್ವನಿ ಎತ್ತಿದ ಮುರುಘಾ ಶ್ರೀ

ಮುರುಘಾ ಮಠದಲ್ಲಿ ಪ್ರತಿಕ್ರಿಯಿಸಿದ ಅವರು ಲಿಂಗಾಯತ ಸಮುದಾಯವನ್ನ ಒಬಿಸಿಗೆ ಸೇರಿಸಬೇಕು, ವೀರಶೈವ ಲಿಂಗಾಯತರಲ್ಲಿ ಬಡವರು ಇದ್ದಾರೆ, ಶ್ರೀಮಂತರು ಇದ್ದಾರೆ. ಸಮುದಾಯದಲ್ಲಿರುವ ನಾವು ಬಡವರ ಬಗ್ಗೆ ಅಲೋಚನೆ ಮಾಡ್ಬೇಕಾಗಿದೆ ಎಂದರು.

ಇಲ್ಲಿರುವ ಬಣಜಿಗರು, ಪಂಚಮಸಾಲಿಗರು, ಕುಂಚಿಟಿಗರು, ಒಣಂಬರು, ಸಾಧು ಸಜ್ಜನರು, ಗಾಣಿಗರು, ಹಡಪೆಗರು, ಮಡಿವಾಳರಿದ್ದಾರೆ. ಇವರು ತುಳಿತಕ್ಕೆ ಒಳಗಾಗಿರುವ ಉಪಜಾತಿಗಳಾಗಿವೆ. ಅಂತಹ ಉಪಜಾತಿಗಳ ಬಗ್ಗೆ ಸರ್ಕಾರ ಗಮನಹರಿಸಿ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಒತ್ತಾಯ ಮಾಡುತ್ತೇವೆ. ಆದ್ದರಿಂದ ಶೇ.16ರಷ್ಟು ಮೀಸಲಾತಿ ಬೇಕಾಗಿದೆ ಎಂದರು.

ABOUT THE AUTHOR

...view details