ಕರ್ನಾಟಕ

karnataka

ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಮಾಂಸ ಮಾಡಲು ಅನುಮತಿ ನೀಡಿ: ಸಿರಾಜ್

By

Published : Dec 3, 2022, 3:20 PM IST

Baba Budan Giri Committee President Siraj

ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಮಾಂಸ ಮಾಡಲು ಅನುಮತಿ ನೀಡಿ ಎಂದು ಟಿಪ್ಪು ಸುಲ್ತಾನ್ ಹಾಗೂ ಬಾಬಾಬುಡನ್ ಗಿರಿ ಸಮಿತಿಯಿಂದ ಡಿಸಿಗೆ ಮನವಿ ನೀಡಲಾಗಿದೆ ಎಂದು ಬಾಬಾ ಬುಡನ್ ಗಿರಿ ಸಮಿತಿ ಅಧ್ಯಕ್ಷ ಸಿರಾಜ್ ತಿಳಿಸಿದರು.

ಚಿಕ್ಕಮಗಳೂರು:ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಿಂದ 200 ಮೀಟರ್ ದೂರದಲ್ಲಿ 2004 ರಲ್ಲಿ ದತ್ತಪೀಠದಲ್ಲಿ ಮಾಂಸದ ಅಂಗಡಿಯೇ ಇತ್ತು, ದತ್ತಪೀಠದಲ್ಲಿ ಮಾಂಸ ಮಾಡಲು ಅನುಮತಿ ನೀಡಿ ಎಂದು ಟಿಪ್ಪು ಸುಲ್ತಾನ್ ಹಾಗೂ ಬಾಬಾಬುಡನ್ ಗಿರಿ ಸಮಿತಿಯಿಂದ ಡಿಸಿಗೆ ಮನವಿ ನೀಡಲಾಗಿದೆ ಎಂದು ಬಾಬಾ ಬುಡನ್ ಗಿರಿ ಸಮಿತಿ ಅಧ್ಯಕ್ಷ ಸಿರಾಜ್ ತಿಳಿಸಿದ್ದಾರೆ.

ಹರಕೆ ತೀರಿಸಲು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಪೊಲೀಸರು, ತಹಶೀಲ್ದಾರ್, ಕೆಲ ಸಂಘಟನೆಗಳು ಮಾಂಸ ಮಾಡಬೇಡಿ ಅಂತಾರೆ. ದತ್ತಪೀಠದಲ್ಲಿ ಮಾಂಸಹಾರ ತಯಾರಿಸಲು ನಿಷೇಧ ಇರಲಿಲ್ಲ. ಕೋರ್ಟ್ ಆದೇಶವಿಲ್ಲದೇ ಜಿಲ್ಲಾಡಳಿತ ಮಾಂಸಹಾರಕ್ಕೆ ನಿಷೇಧ ಹೇರಿದ್ದು ತಪ್ಪು ಎಂದರು.

ದತ್ತಪೀಠದ 200 ಮೀ.‌ದೂರದಲ್ಲಿ 2004 ರಲ್ಲಿ ಡಿಸಿ ರಾಜೇಂದ್ರ ಕುಮಾರ್ ಕಟಾರಿಯಾ ಅವಕಾಶ ನೀಡಿದ್ದರು. ಮಾಂಸದ ಅಂಗಡಿಗೆ ತಹಶೀಲ್ದಾರ್ ಕಚೇರಿಗೆ ಹಣ ಕಟ್ಟಿರುವ ರಶೀದಿಯೂ ನಮ್ಮ ಬಳಿ ಇದೆ ಎಂದು ಹೇಳಿದರು.

ಕೋರ್ಟ್ ಆದೇಶವಿಲ್ಲದೇ ನಿಷೇಧ ಹೇರಿದ್ದು ಕಾನೂನು ಉಲ್ಲಂಘನೆ ಯಾದಂತೆ. ದತ್ತಪೀಠದಲ್ಲಿ ಮಾಂಸಹಾರ ತಯಾರಿಕೆಗೆ ಕೋರ್ಟ್ ನಿಷೇಧವಿದ್ದರೆ ಬಹಿರಂಗಪಡಿಸಲಿ ಎಂದು ಬಾಬಾ ಬುಡನ್ ಗಿರಿ ಸಮಿತಿ ಅಧ್ಯಕ್ಷ ಸಿರಾಜ್ ಆಗ್ರಹಿಸಿದರು.

ಇದನ್ನೂ ಓದಿ:ಚಿಕ್ಕಮಗಳೂರು: ಡ್ರೋನ್ ಮೂಲಕ ಕಾಡಾನೆಗಳ ಹುಡುಕಾಟ!

ABOUT THE AUTHOR

...view details