ಕರ್ನಾಟಕ

karnataka

ನಾಯಿ ದಾಳಿಯಿಂದ ಗಾಯಗೊಂಡ ಜಿಂಕೆ, ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

By

Published : May 2, 2021, 8:13 PM IST

ಭೀಕರವಾಗಿ ಕಚ್ಚಿ ಗಾಯಗೊಳಿಸಿದ್ದ ನಂತರ ಅರಣ್ಯಾಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಜಿಂಕೆಯನ್ನು ಬದುಕುಳಿಸಿದ್ದಾರೆ. ಇನ್ನು, ಜಿಂಕೆಯನ್ನು ಕಾಪಾಡಿದ ಸ್ಥಳೀಯರನ್ನ ಅರಣ್ಯ ಅಧಿಕಾರಿಗಳು ಶ್ಲಾಘಿಸಿದ್ದಾರೆ..

locals-protect-by-injured-deer-from-dog-attacks
ನಾಯಿ ದಾಳಿಯಿಂದ ಗಾಯಗೊಂಡ ಜಿಂಕೆ

ಚಿಕ್ಕಬಳ್ಳಾಪುರ : ಬೀದಿನಾಯಿಗಳ ದಾಳಿಗೆ ತುತ್ತಾದ ಜಿಂಕೆಯನ್ನು ಗ್ರಾಮಸ್ಥರು ಕಾಪಾಡಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ 7ನೇ ವಾರ್ಡ್‌ನಲ್ಲಿ ನಡೆದಿದೆ.

ನಾಯಿ ದಾಳಿಯಿಂದ ಗಾಯಗೊಂಡ ಜಿಂಕೆ..

ಓದಿ: ಬಿಎಸ್​ವೈಗೆ ಡಬಲ್ ರಿಲೀಫ್ ನೀಡಿದ ಉಪ ಚುನಾವಣಾ ಫಲಿತಾಂಶ: ಸಿಎಂ ಕುರ್ಚಿ ಸುಭದ್ರ

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದವು. ನಿವಾಸಿಗಳು ಜಿಂಕೆಯನ್ನು ನಾಯಿಗಳ ದಾಳಿಯಿಂದ ತಪ್ಪಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಭೀಕರವಾಗಿ ಕಚ್ಚಿ ಗಾಯಗೊಳಿಸಿದ್ದ ನಂತರ ಅರಣ್ಯಾಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಜಿಂಕೆಯನ್ನು ಬದುಕುಳಿಸಿದ್ದಾರೆ. ಇನ್ನು, ಜಿಂಕೆಯನ್ನು ಕಾಪಾಡಿದ ಸ್ಥಳೀಯರನ್ನ ಅರಣ್ಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ABOUT THE AUTHOR

...view details