ETV Bharat / snippets

ಬೆಳಗಾವಿ: ಕುಡಿದ ನಶೆಯಲ್ಲಿ ಹೆಂಡತಿಯನ್ನೇ ಕೊಂದ ಗಂಡ

author img

By ETV Bharat Karnataka Team

Published : May 23, 2024, 1:55 PM IST

ಹೆಂಡತಿ ಕೊಲೆ
ಹೆಂಡತಿ ಕೊಲೆ (ETV Bharat)

ಬೆಳಗಾವಿ: ಕುಡಿದ ಮತ್ತಿನಲ್ಲಿ ಹೆಂಡತಿಯನ್ನೇ ಗಂಡ ಕೊಲೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ ನಡೆದಿದೆ. ಫಕ್ಕೀರವ್ವ ಕಾಕಿ(35) ಕೊಲೆಯಾದ ಮಹಿಳೆ. ಯಲ್ಲಪ್ಪ ಕಾಕಿ ಪತ್ನಿಯನ್ನು ಕೊಂದ ಪತಿ.

ಪೊಲೀಸ್​ ಮೂಲಗಳ ಪ್ರಕಾರ, ಹೆಂಡತಿ ಜೊತೆಗೆ ಜಗಳ ತೆಗೆದು ಯಲ್ಲಪ್ಪ ಇಬ್ಬರು ಮಕ್ಕಳ ಎದುರಲ್ಲೇ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ. ನೇಸರಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ₹2 ಕೋಟಿ ಹಣ ತವರು ಮನೆಗೆ ಕಳುಹಿಸಿದ ಹೆಂಡತಿ ಕೊಲೆ ಮಾಡಿದ ಗಂಡ - Husband Killed Wife

ಸ್ಥಳಕ್ಕೆ ನೇಸರಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಇವರ ನಾಲ್ಕು ಮಕ್ಕಳು ಅನಾಥವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.