ಕರ್ನಾಟಕ

karnataka

'ಆಸ್ಪತ್ರೆ ಸಿದ್ದರಾಮಯ್ಯ ಕೊಡುಗೆ, ರಾಷ್ಟ್ರಪತಿ ಆಗಮನದಿಂದ ಸಿಎಂ ಬೊಮ್ಮಾಯಿ ಬರುತ್ತಿದ್ದಾರಷ್ಟೇ'

By

Published : Oct 6, 2021, 3:49 PM IST

ರಾಷ್ಟ್ರಪತಿಗಳು ಉದ್ಘಾಟನೆ ಮಾಡುತ್ತಿರುವ ಆಸ್ಪತ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆಯಾಗಿದೆ. ರಾಷ್ಟ್ರಪತಿ ಬರುತ್ತಿರುವುದರಿಂದ ಸಿಎಂ ಬಸವರಾಜ ಬೊಮ್ಮಾಯಿ ಬರುತ್ತಿದ್ದಾರಷ್ಟೇ ಎಂದು ಶಾಸಕ ಪುಟ್ಟರಂಗಶೆಟ್ಟಿ ಲೇವಡಿ ಮಾಡಿದರು.

mla puttarangashetty
ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಚಾಮರಾಜನಗರ ಮೆಡಿಕಲ್ ಆಸ್ಪತ್ರೆ ಉದ್ಘಾಟನೆಗೆ ರಾಷ್ಟ್ರಪತಿ ಬರುತ್ತಿರುವುದರಿಂದ ಸಿಎಂ ಬಸವರಾಜ ಬೊಮ್ಮಾಯಿ ಬರುತ್ತಿದ್ದಾರಷ್ಟೇ ಎಂದು ಶಾಸಕ ಪುಟ್ಟರಂಗಶೆಟ್ಟಿ ಲೇವಡಿ ಮಾಡಿದರು.

'ಸಿದ್ದರಾಮಯ್ಯಗೆ ಸಿದ್ದರಾಮಯ್ಯನೇ ಸಾಟಿ'

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಂತೆ ಸಿಎಂ ಬೊಮ್ಮಾಯಿ ಚಾಮರಾಜನಗರಕ್ಕೆ ಬಂದು ಸಭೆಗಳನ್ನು ನಡೆಸಿ ವಿಶೇಷ ಅನುದಾನ ಕೊಡಲಿ. ರಾಷ್ಟ್ರಪತಿ ಬರುತ್ತಿದ್ದಾರೆಂದು ಶಿಷ್ಟಾಚಾರ ಪಾಲನೆಗಾಗಿ ಬರುತ್ತಿದ್ದಾರೆ. ಅವರು ಇಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುತ್ತಿಲ್ಲ. ಇಲ್ಲಿನ ಅಧಿಕಾರಿಗಳೊಟ್ಟಿಗೆ ಸಭೆ ನಡೆಸುತ್ತಿಲ್ಲ. ಯಾವತ್ತಿದ್ದರೂ ಸಿದ್ದರಾಮಯ್ಯ ಅವರಿಗೆ ಸಿದ್ದರಾಮಯ್ಯನೇ ಸಾಟಿ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಶಾಸಕ ಪುಟ್ಟರಂಗಶೆಟ್ಟಿ

ಇನ್ನು, ರಾಷ್ಟ್ರಪತಿಗಳು ಉದ್ಘಾಟನೆ ಮಾಡುತ್ತಿರುವ ಆಸ್ಪತ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆಯಾಗಿದೆ. ಅವರ ಅವಧಿಯಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ಆರಂಭಗೊಂಡು, ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಯಿತು. 189 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉದ್ಘಾಟನೆಯಾಗುತ್ತಿದೆ. ಆಸ್ಪತ್ರೆ ಪಕ್ಕದಲ್ಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೂ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ ರಾಷ್ಟ್ರಪತಿಗಳನ್ನು ಸ್ವಾಗತಿಸಿದ ಸಿಎಂ

ಮುಖ್ಯಮಂತ್ರಿಗಳಾದವರೂ ಜಿಲ್ಲಾ ಕೇಂದ್ರಕ್ಕೆ ಬಂದರೆ ಸಾಕಷ್ಟು ಅಭಿವೃದ್ಧಿ, ಅನುದಾನ ಸಿಗಲಿದೆ. ‌ಹಾಗಾಗಿ, ಇಲ್ಲಿ ಸಿಎಂ ಸಭೆ ಮಾಡಬೇಕಿತ್ತು. ಇನ್ನೂ ಉಸ್ತುವಾರಿಗಳಾದವರು ಹೋದ ಪುಟ್ಟ ಬಂದ ಪುಟ್ಟ ಎಂಬಂತಿರುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಲ್ಲೇ ನಿಲ್ಲುತ್ತಿದೆ. ಕುಡಿಯುವ ನೀರಿನ ಬವಣೆ ಇನ್ನು ಮುಗಿದಿಲ್ಲ ಎಂದು ಉಸ್ತುವಾರಿ ಸಚಿವರ ವಿರುದ್ಧವೂ ಕಿಡಿಕಾರಿದರು.

ABOUT THE AUTHOR

...view details