ಕರ್ನಾಟಕ

karnataka

ಶಿವಪುರ ಕೆರೆಗೆ ಶಾಸಕ ಜಿ.ಸೋಮಶೇಖರ ರೆಡ್ಡಿ ಭೇಟಿ, ಪರಿಶೀಲನೆ

By

Published : Aug 3, 2019, 7:28 PM IST

ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ ರೆಡ್ಡಿ ಶಿವಪುರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರರೆಡ್ಡಿ ಶಿವಪುರ ಕೆರೆಗೆ ಭೇಟಿ

ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದ ಶಿವಪುರ ಕೆರೆಗೆ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತುಂಗಭದ್ರಾ ಜಲಾಶಯದಿಂದ ಎಲ್​ಎಲ್​ಸಿ ಕಾಲುವೆಗೆ ಆಗಸ್ಟ್ 1ರಿಂದ ನೀರು ಬಿಡಲಾಗಿದ್ದು, ಶಿವಪುರ ಕೆರೆಗೆ ನೀರು ತುಂಬಿಸುವ ಕಾರ್ಯದ ಸಲುವಾಗಿಯೇ ಹೊಸದಾಗಿ ಯಂತ್ರೋಪಕರಣ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಆ ಯಂತ್ರೋಪಕರಣಗಳಿಗೆ ವಿಶೇಷಪೂಜೆ ಸಲ್ಲಿಸಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಇಲಾಖೆಯ ಅಧಿಕಾರಿಗಳೊಂದಿಗೆ ಬಳ್ಳಾರಿ ನಗರದ ಹಲವೆಡೆ ನೀರಿನ ಸಮಸ್ಯೆ ಉಂಟಾಗಿರುವ ಕುರಿತು ಶಾಸಕರು ಚರ್ಚಿಸಿದ್ದಾರೆ.

ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರರೆಡ್ಡಿ ಶಿವಪುರ ಕೆರೆಗೆ ಭೇಟಿ

ಎಲ್​ಎಲ್​ಸಿ ಕಾಲುವೆಗೆ ಶೀಘ್ರವೇ ಹರಿದು ಬರುವ ನೀರಿನಿಂದ ಶಿವಪುರ ಕುಡಿಯುವ ನೀರಿನ ಕೆರೆಯ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗನೆ ತಾಲೂಕಿನ ನಾನಾ ಗ್ರಾಮಗಳು ಹಾಗೂ ಬಳ್ಳಾರಿ ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ವ್ಯತ್ಯಯವನ್ನು ಬಗೆಹರಿಸಬೇಕೆಂದು ತಾಕೀತು ಮಾಡಿದ್ದಾರೆ. ಇದೇ ವೇಳೆ ಅಂದಾಜು 60 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ಕೆರೆಯ ಕಾಮಗಾರಿಯನ್ನು ಸೋಮಶೇಖರ ರೆಡ್ಡಿ ಪರಿಶೀಲಿಸಿದ್ದು,ಆದಷ್ಟು ಬೇಗ ನಿರ್ಮಾಣದ ಕಾರ್ಯ ಮುಗಿಯಬೇಕೆಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Intro:ಮೋಕಾ: ಶಿವಪುರ ಕೆರೆಗೆ ಭೇಟಿ ನೀಡಿದ ಶಾಸಕ ರೆಡ್ಡಿ
ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದ ಶಿವಪುರ ಕೆರೆಗೆ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರರೆಡ್ಡಿ ಅವರಿಂದು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಎಲ್ ಎಲ್ ಸಿ ಕಾಲುವೆಗೆ
ಆಗಸ್ಟ್ 1ರಿಂದ ನೀರನ್ನು ಹರಿಬಿಡಲಾಗಿದ್ದು, ಶಿವಪುರ ಕೆರೆಗೆ
ನೀರು ತುಂಬಿಸುವಕಾರ್ಯದ ಸಲುವಾಗಿಯೇ ಹೊಸದಾಗಿ ಯಂತ್ರೋಪಕರಣ ಅಳವಡಿಸಲಾಗಿದೆ. ಈ ದಿನ ಶಾಸಕ ಜಿ.ಸೋಮಶೇಖರರೆಡ್ಡಿ ಅವರು, ಆ ಯಂತ್ರೋಪಕರಣಗಳಿಗೆ ವಿಶೇಷಪೂಜೆ ಸಲ್ಲಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಇಲಾಖೆಯ ಅಧಿಕಾರಿಗಳೊಂದಿಗೆ ಬಳ್ಳಾರಿ ನಗರದ ಅರ್ಧಭಾಗ ನೀರಿನ ಸಮಸ್ಯೆ ಎದುರಾಗಿರೋದರ ಕುರಿತ ಶಾಸಕ ರೆಡ್ಡಿಯವರು ಸುದೀರ್ಘವಾಗಿ ಚರ್ಚಿಸಿದ್ದಾರೆ.
ಎಲ್ ಎಲ್ ಸಿ ಕಾಲುವೆಗೆ ಶೀಘ್ರವೇ ಹರಿದು ಬರುವ ನೀರಿನಿಂದ ಶಿವಪುರ ಕುಡಿಯುವ ನೀರಿನ ಕೆರೆಯ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗನೆ ತಾಲೂಕಿನ ನಾನಾ ಗ್ರಾಮಗಳು ಹಾಗೂ ಬಳ್ಳಾರಿ ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ವ್ಯತ್ಯಯವನ್ನು ಬಗೆಹರಿಸಬೇಕೆಂದು ತಾಕೀತು ಮಾಡಿದ್ದಾರೆ.
Body:ಅಂದಾಜು 60 ಎಕರೆ ಪ್ರದೇಶದಲ್ಲಿ ಮತ್ತೊಂದು ಕೆರೆಯ ನಿರ್ಮಾಣವಾಗುತ್ತಿದ್ದು, ಆ ಕೆರೆಯ ನಿರ್ಮಾಣಕಾರ್ಯವನ್ನು ಶಾಸಕರು ಪರಿಶೀಲಿಸಿದರು. ಆದಷ್ಟು ಬೇಗನೆ ಕೆರೆ ನಿರ್ಮಾಣದ ಕಾರ್ಯಗಳು ಮುಗಿಯಬೇಕೆಂದು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಮುಖಂಡರಾದ ವೀರಶೇಖರರೆಡ್ಡಿ, ರಾಜು ಮುತಿಗಿ, ಇಬ್ರಾಹಿಂ ಬಾಬು, ಕೊಳಗಲ್ ಪ್ರಸಾದರೆಡ್ಡಿ ಸೇರಿದಂತೆ ಮಹಾನಗರ ಪಾಲಿಕೆ ಆಯುಕ್ತರು, ಕರ್ನಾಟಕ ನಗರ ನೀರು ಪೂರೈಕೆ ಇಲಾಖೆ ಅಧಿಕಾರಿ ಗಳು ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_2_MLA_SOMASHEKAR_REDY_VISIT_SHIVA_PURA_LAKE_7203310

KN_BLY_2a_MLA_SOMASHEKAR_REDY_VISIT_SHIVA_PURA_LAKE_7203310

KN_BLY_2b_MLA_SOMASHEKAR_REDY_VISIT_SHIVA_PURA_LAKE_7203310

ABOUT THE AUTHOR

...view details