ಕರ್ನಾಟಕ

karnataka

ಚಿಕ್ಕೋಡಿ: ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ

By

Published : Jul 26, 2021, 9:20 AM IST

ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ.

Chikkodi
ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿರುವ ವ್ಯಕ್ತಿಯನ್ನು ರಕ್ಷಿಸಿದ ಸ್ಥಳೀಯರು

ಚಿಕ್ಕೋಡಿ: ಕೃಷ್ಣಾ ನದಿ ದಿನದಿಂದ ದಿನಕ್ಕೆ ತನ್ನ ಒಡಲನ್ನು ಬಿಟ್ಟು ಹರಿಯುತ್ತಿರುವ ಪರಿಣಾಮ ನದಿ ತೀರದ ಗ್ರಾಮದ ಜನರು ಗಂಜಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಗಂಜಿ ಕೇಂದ್ರಕ್ಕೆ ಬರುವ ವೇಳೆ ಇಲ್ಲೊಬ್ಬ ವ್ಯಕ್ತಿಯು ಕೃಷ್ಣಾ ನದಿ ಮಧ್ಯದಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರು ಈತನನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿರುವ ವ್ಯಕ್ತಿಯನ್ನು ರಕ್ಷಿಸಿದ ಸ್ಥಳೀಯರು

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾಕಿತ್ತೂರ ಗ್ರಾಮದ ಇನುಸ್​ ಅಕ್ಬರ್​ ಅಲಾಸೆ ಎಂಬುವವರು ನದಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಸಂದರ್ಭದಲ್ಲಿ ಗಿಡದ ಸಹಾಯದಿಂದ ಬದುಕುಳಿದಿದ್ದಾರೆ.

ನಡೆದದ್ದೇನು?:

ಇನುಸ ಅವರು ತಮ್ಮ ರೇಷನ್ ಕಾರ್ಡ್​, ಆಧಾರ್​ ಕಾರ್ಡ್, ಮನೆಯ ಇತರ ಸಾಮಗ್ರಿ ಹಾಗೂ ಹಣ ತೆಗೆದುಕೊಂಡು ಕೈ ಚೀಲದಲ್ಲಿ ಹಗ್ಗ ಹಿಡಿದು ಕೃಷ್ಣಾ ನದಿ ದಾಟುವ ವೇಳೆ ಕೈಯಲ್ಲಿದ್ದ ಚೀಲ ನದಿಯಲ್ಲಿ ಕೊಚ್ಚಿ ಹೋಗಿದೆ. ಆಗ ಇನುಸ ಅಕ್ಬರ್​ ಈಜಿಕೊಂಡು ಕೈ ಚೀಲ ಹಿಡಿಯಲು ಮುಂದಾಗಿದ್ದಾರೆ. ಆದರೆ, ನೀರಿನ ಹರಿವಿನ ಪ್ರಮಾಣ ಜಾಸ್ತಿ ಇದ್ದ ಪರಿಣಾಮ ಕೈಚೀಲ ಸಿಕ್ಕಿಲ್ಲ. ಇವರು ಕೂಡ ಆಯಾಸಗೊಂಡಿದ್ದು, ಸ್ಥಳೀಯರು ರಕ್ಷಿಸಿದ್ದಾರೆ.

ಇದನ್ನೂ ಓದಿ:ಕೃಷ್ಣಾ ತೀರದಲ್ಲಿ ಪ್ರವಾಹ: ಅಥಣಿ ಭಾಗದ ಜನರ ಬದುಕು ಮೂರಾಬಟ್ಟೆ

ABOUT THE AUTHOR

...view details