ಕರ್ನಾಟಕ

karnataka

ಬೆಳಗಾವಿ: ಸೇನಾಧಿಕಾರಿ ಬ್ಯಾಗ್​ನಲ್ಲಿ ಜೀವಂತ ಗುಂಡು ಪತ್ತೆ

By ETV Bharat Karnataka Team

Published : Jan 8, 2024, 11:40 AM IST

ಸೇನಾಧಿಕಾರಿಯ ಬ್ಯಾಗ್​ನಲ್ಲಿ ಜೀವಂತ ಗುಂಡು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾರಿಹಾಳ ಠಾಣೆ
ಮಾರಿಹಾಳ ಠಾಣೆ

ಬೆಳಗಾವಿ:ಬೆಳಗಾವಿಯಿಂದ ಹೈದರಾಬಾದ್​ಗೆ ಪ್ರಯಾಣಿಸಲು ಅಣಿಯಾಗಿದ್ದ ಸೇನಾಧಿಕಾರಿಯ ಬ್ಯಾಗ್‌ನಲ್ಲಿ ಜೀವಂತ ಗುಂಡು ದೊರೆತಿದೆ. ಸೇನಾಧಿಕಾರಿಯನ್ನು ಮಾರಿಹಾಳ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಭಾನುವಾರ ನಡೆದಿದೆ.

ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಬೆಳಗಾವಿಯ ಕಮಾಂಡೋ ಸೆಂಟರ್​ಗೆ ಬಂದಿದ್ದರು. ಇಲ್ಲಿಂದ ಮರಳಿ ಡೆಹ್ರಾಡೂನ್‌ ಹೋಗುವಾಗ ಬ್ಯಾಗ್​ನಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿವೆ. ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಅವರು ಮಾರಿಹಾಳ ಪೊಲೀಸರಿಗೆ ದೂರು ನೀಡಿದ್ದರು. ಬೆಳಗಾವಿ ಮರಾಠಾ ಲಘು ಪದಾತಿ ದಳದ ಹಿರಿಯ ಸೇನಾಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದು, ಅವರು ಅಧಿಕಾರಿಯ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ:ಮಣಿಪುರ: ಉಗ್ರರು-ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ

ABOUT THE AUTHOR

...view details