ಕರ್ನಾಟಕ

karnataka

ಡ್ರಗ್ಸ್​​​​​ ಜಾಲ: ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿಸಿಬಿ ಸಿದ್ಧತೆ

By

Published : Nov 6, 2020, 1:22 PM IST

ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
sandalwood drug case:  CCB preparation for indictment submission
ಡ್ರಗ್ಸ್​​​​​ ಜಾಲ: ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿಸಿಬಿ ಸಿದ್ಧತೆ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಈ ತಿಂಗಳ ಕೊನೆ ಹಂತದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಿದ್ದು, ಹಲವು ಸಾಕ್ಷಿಗಳನ್ನು ಕಲೆಹಾಕಿದೆ.

ಡ್ರಗ್ಸ್​ ಸುಳಿಯಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಮಣಿಯರು ಜೈಲಾಧಿಕಾರಿಗಳ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ. ಇತ್ತ ಕೋವಿಡ್​ ಹಿನ್ನೆಲೆ, ಪೋಷಕರ ಭೇಟಿಗೂ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಇಬ್ಬರಿಗೂ ಹೈಕೋರ್ಟ್ ಜಾಮೀನು ನಿರಾಕರಣೆ ಮಾಡಿರುವ ಹಿನ್ನೆಲೆ ವಕೀಲರು ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದರ ಮೇಲೆ ಅವರ ಮುಂದಿನ ಭವಿಷ್ಯ ನಿಂತಿದೆ.

ಇತ್ತ ಸಿಸಿಬಿ ಅಧಿಕಾರಿಗಳು ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಪ್ರಮುಖವಾಗಿ A1 ಆರೋಪಿಯಾಗಿರುವ ರಾಗಿಣಿ ಎಕ್ಸ್ ಬಾಯ್ ಫ್ರೆಂಡ್ ಶಿವಪ್ರಕಾಶ್ ಅಲಿಯಾಸ್​​​ ಚಿಪ್ಪಿ ಹಾಗೂ A5 ಆರೋಪಿ ಆದಿತ್ಯಾ ಆಳ್ವಾ ಹೆಸರನ್ನು ನಮೂದಿಸಲಿದ್ದಾರೆ. ಈ ಇಬ್ಬರು ತಲೆ ಮರೆಸಿಕೊಂಡಿರುವುದೇ ನಟಿ ರಾಗಿಣಿ‌ ಹಾಗೂ ಸಂಜಾನಾಗೆ ದೊಡ್ಡ ತೊಂದರೆಯಾಗಿದೆ. ತನಿಖೆಯ ದೃಷ್ಟಿಯಿಂದ ಇವರಿಬ್ಬರ ವಿಚಾರಣೆ ಬಹಳ ಅಗತ್ಯವಾಗಿದೆ. ಅಲ್ಲದೇ, ಡ್ರಗ್ಸ್​​ ಪೆಡ್ಲಿಂಗ್ ವಿಚಾರದಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

ಕೇಸ್ ಡೈರಿಯಲ್ಲಿ ಸಾಕ್ಷಿದಾರರ ಹೇಳಿಕೆ ಉಲ್ಲೇಖ:

ಸಿಸಿಬಿ ಪೊಲೀಸರು ಸದ್ಯ ಪ್ರಾಥಮಿಕವಾಗಿ ದೋಷಾರೋಪ ಪಟ್ಟಿ ಸಲ್ಲಿಕೆಗೆ ಪೇಪರ್ ವರ್ಕ್ ಮಾಡುತ್ತಿದ್ದು, ಕೇಸ್ ಡೈರಿಯಲ್ಲಿ ಸಾಕ್ಷಿದಾರರ ಹೇಳಿಕೆಯ ಉಲ್ಲೇಖ ಪ್ರಮುಖವಾಗಿದೆ. ನಟಿಯರು ಡ್ರಗ್ಸ್ ಸೇವಿಸಿದ್ದಕ್ಕೆ ಕೆಲವರು ಸಾಕ್ಷಿ ನುಡಿದಿದ್ದಾರೆ, ಸಾಕ್ಷಿಗಳನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲದೇ ಡ್ರಗ್ಸ್​​ ಮಾರಾಟ ಮಾಡಿರುವ ಬಗ್ಗೆ ಕೂಡಾ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.

ಈ ಇಬ್ಬರು ನಟಿಯರು, ಪೆಡ್ಲರ್​ಗಳು ಆಯೋಜನೆ ಮಾಡುವ ಪಾರ್ಟಿಗಳಿಗೆ ಹೋಗಿ, ಅಲ್ಲಿ ಬರುವವರಿಗೆ ಡ್ರಗ್ಸ್​​ ಪೂರೈಕೆ ಮಾಡುತ್ತಿದ್ದರು. ಈ ವರ್ಷದ ರಾಗಿಣಿ ಬರ್ತ್ ಡೇ ಪಾರ್ಟಿ ದಿನವೇ ರವಿಶಂಕರ್ ಜೊತೆಗೆ ಕೊಕೇನ್ ಸೇವಿಸಿರುವುದರ ಜೊತೆಗೆ ಗ್ರಾಂ. ಗೆ 5000 ರೂ. ನಂತೆ ವ್ಯಕ್ತಿಯೊಬ್ಬರಿಗೆ ಮಾರಾಟ ‌ಮಾಡಿದ ಸಾಕ್ಷಿ ಸಿಸಿಬಿಗೆ ಲಭ್ಯವಾಗಿದೆ‌. ಇನ್ನು ಸಂಜನಾ ಕೂಡ ಪೆಡ್ಲರ್​ಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಉದ್ಯಮಿಗಳಿಗೆ ಹಾಗೂ ತನ್ನದೇ ಗ್ಯಾಂಗ್ ಸದಸ್ಯರಿಗೆ 3 ಲಕ್ಷದ ಡ್ರಗ್ ಮಾರಾಟ (ಬಂಧನದ ಒಂದು ತಿಂಗಳು‌ ಮುಂಚೆ ಮಾರಾಟ) ಮಾಡಿರುವ ವಿಚಾರ ಬಯಲಾಗಿದೆ.

ಈ ಎಲ್ಲಾ ಮಾಹಿತಿಗಳನ್ನು ಸಿಸಿಬಿ ಕೇಸ್ ಡೈರಿಯಲ್ಲಿ ಉಲ್ಲೇಖ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಕೆಲವೇ ದಿನದಲ್ಲಿ ಸಲ್ಲಿಕೆ ಮಾಡಲಿದ್ದಾರೆ.

ABOUT THE AUTHOR

...view details