ಕರ್ನಾಟಕ

karnataka

ಬೆಂಗಳೂರು ನಗರದಲ್ಲಿ ಡೆಲ್ಟಾ ವೈರಸ್‌ನ ವಂಶವಾಹಿ ತಳಿ ಪತ್ತೆ..

By

Published : Sep 10, 2021, 4:40 PM IST

new variants of delta virus
ಬೆಂಗಳೂರು ನಗರದಲ್ಲಿ ಡೆಲ್ಟಾ ವೈರಸ್‌ನ ವಂಶವಾಹಿ ತಳಿ ಪತ್ತೆ

ಸರಿ ಸುಮಾರು 400 ಸ್ಯಾಂಪಲ್‌ಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿದ ವೇಳೆ ಈ ಮೂರು ಹೊಸ ತಳಿಗಳು ಪತ್ತೆಯಾಗಿವೆ. ಈ‌ ಹೊಸ ತಳಿಗಳು ಮೂರನೇ ಅಲೆಗೆ ಕಾರಣವಾಗಬಹುದಾ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಆ ಬಗ್ಗೆ ತಜ್ಞರು ಏನೂ ಹೇಳಿಲ್ಲ..

ಬೆಂಗಳೂರು :ಈಗಾಗಲೇ ಕಳೆದೆರಡು‌ ವರ್ಷಗಳಿಂದ‌ ಕೊರೊನಾ‌ ಸೋಂಕಿನಿಂದ‌ ಜನರು ಮಾನಸಿಕ‌ವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೆ ಕೊರೊನಾ‌ ಅಲೆಗಳ ಜೊತೆಗೆ ಬ್ಲ್ಯಾಕ್ ಫಂಗಸ್ ಡೆಲ್ಟಾ ವೈರಸ್‌ ನಂತಹ ಹೊಸ‌ ರೋಗಳು ಹುಟ್ಟಿಕೊಂಡು ಜನರ ನಿದ್ದೆ ಕೆಡಿಸಿವೆ.

ಇದೀಗ ಮತ್ತೆ ರಾಜಧಾನಿಯಲ್ಲಿ ಡೆಲ್ಟಾ ವೈರಸ್‌ನ ವಂಶವಾಹಿಯ ತಳಿಗಳು ಪತ್ತೆಯಾಗಿವೆ. ಡೆಲ್ಟಾ ವಂಶೀಯ ತಳಿಗಳ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜಿನೋಮಿಕ್ ಸಿಕ್ವೆನ್ಸಿಂಗ್ ವೇಳೆ ಈ ಹೊಸ ತಳಿಗಳು ಪತ್ತೆಯಾಗಿವೆ. ಇನ್ನು, ಬೆಂಗಳೂರಿನ ಇಬ್ಬರಲ್ಲಿ ಹೊಸ ಡೆಲ್ಟಾದ ವಂಶವಾಹಿ ಕಪ್ಪಾ ತಳಿ ಪತ್ತೆಯಾಗಿದೆ. AY.3, AY.4, AY.6 ಎಂಬ ಮೂರು ಹೊಸ ಡೆಲ್ಟಾ ವಂಶೀಯ ತಳಿಗಳು ಪತ್ತೆಯಾಗಿವೆ.

ಡೆಲ್ಟಾ ವೈರಸ್‌ನ ವಂಶವಾಹಿ ತಳಿ ಪತ್ತೆ

ಸರಿ ಸುಮಾರು 400 ಸ್ಯಾಂಪಲ್‌ಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿದ ವೇಳೆ ಈ ಮೂರು ಹೊಸ ತಳಿಗಳು ಪತ್ತೆಯಾಗಿವೆ. ಈ‌ ಹೊಸ ತಳಿಗಳು ಮೂರನೇ ಅಲೆಗೆ ಕಾರಣವಾಗಬಹುದಾ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಆ ಬಗ್ಗೆ ತಜ್ಞರು ಏನೂ ಹೇಳಿಲ್ಲ.

ಆದರೆ, AY.6 ರೂಪಾಂತರಿ 38 ಮಂದಿಯಲ್ಲಿ ಕಾಣಿಸಿದೆ. ಡೆಲ್ಟಾ ವೈರಸ್ ರೂಂಪಾತರಿ ಆಗದಿದ್ದರೆ ನಾವು ಸೇಫ್ ಎಂದು ಡಾ‌. ಸಿ ಎನ್ ಮಂಜುನಾಥ್ ಹೇಳಿದ್ದಾರೆ. ಆದರೆ, ಡೆಲ್ಟಾ ಹೊಸ ತಳಿ ಪತ್ತೆಯಾದರೆ 3ನೇ ಅಲೆಗೆ ಆಪತ್ತು ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ತಜ್ಞ ವೈದ್ಯರ ಎಚ್ಚರಿಕೆಯ ಮಧ್ಯೆಯೇ ಡೆಲ್ಟಾ ವಂಶವಾಹಿ ಹೊಸ ತಳಿ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

ಯಾವ ತಳಿ, ಎಷ್ಟು ಪತ್ತೆ? :

  • B.1.617.1 ಕಪ್ಪಾ - ಇಬ್ಬರಲ್ಲಿ ಪತ್ತೆ
  • AY.3 - 3 ಜನರಲ್ಲಿ ಪತ್ತೆ
  • AY.4 - 4 ಜನರಲ್ಲಿ ಪತ್ತೆ
  • AY.6 - 38 ಜನರಲ್ಲಿ ಪತ್ತೆ
  • ಇತರ ತಳಿಗಳು - 16 ಜನರಲ್ಲಿ ಪತ್ತೆ‌‌

ಓದಿ:ಕೊಡಗು, ದ.ಕನ್ನಡ, ಉಡುಪಿ, ಹಾಸನದಲ್ಲಿ ವೀಕೆಂಡ್ ಕರ್ಫ್ಯೂ ರದ್ದು

ABOUT THE AUTHOR

...view details