ಕರ್ನಾಟಕ

karnataka

14 ತಿಂಗಳ ಕಾಲ ಶಾಸಕರು ಹಾಗೂ ಮೈತ್ರಿ ನಾಯಕರ ಗುಲಾಮನಾಗಿದ್ದೆ: ಕುಮಾರಸ್ವಾಮಿ

By

Published : Aug 7, 2019, 1:39 PM IST

Updated : Aug 7, 2019, 2:16 PM IST

ಹೆಚ್.ಡಿ.ಕುಮಾರಸ್ವಾಮಿ

ದೋಸ್ತಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ನಾನು 14 ತಿಂಗಳ ಕಾಲ ಶಾಸಕರು ಹಾಗೂ ಮೈತ್ರಿ ನಾಯಕರ ಪಕ್ಷದ ಗುಲಾಮನಾಗಿದ್ದೆ ಎಂದು ಹೇಳಿದ್ದಾರೆ.

ಬೆಂಗಳೂರು:ಜೆಡಿಎಸ್​ ಮತ್ತು ಕಾಂಗ್ರೆಸ್​ ಪಕ್ಷದ ದೋಸ್ತಿ ಸರ್ಕಾರ 14 ತಿಂಗಳ ಕಾಲ ಅಧಿಕಾರ ನಡೆಸಿ, ಕೆಲ ಶಾಸಕರ ರಾಜೀನಾಮೆಯಿಂದ ವಿಶ್ವಾಸಮತ ಕಳೆದುಕೊಂಡು ಅಧಿಕಾರದಿಂದ ಕೆಳಗಿಳಿದಿದೆ.

ದೋಸ್ತಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ನಾನು 14 ತಿಂಗಳ ಕಾಲ ಶಾಸಕರು ಹಾಗೂ ಮೈತ್ರಿ ನಾಯಕರ​ ಗುಲಾಮನಾಗಿದ್ದೆ ಎಂದು ಹೇಳಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ನಿಗಮದ ಅಧ್ಯಕ್ಷರು ಸೇರಿದಂತೆ ಎಲ್ಲಾ ಶಾಸಕರಿಗೆ ಸ್ವಾತಂತ್ರ್ಯ ನೀಡಿದ್ದೆ. ಆದರೂ ಎಲ್ಲರು ಏತಕ್ಕೆ ನನ್ನನ್ನ ತೆಗಳುತಿದ್ದಾರೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದಿದ್ದಾಗ ಕಾಂಗ್ರೆಸ್​, ಜೆಡಿಎಸ್​ ಪಕ್ಷಕ್ಕೆ ಬೆಂಬಲ ಸೂಚಿಸಿತು. ಆದರೆ ಇದು ಕೆಲ ಕಾಂಗ್ರೆಸ್ ನಾಯಕರು ಮತ್ತು ಸ್ಥಳೀಯ ನಾಯಕರಿಗೆ ಇಷ್ಟವಿರಲಿಲ್ಲ. ಸರ್ಕಾರ ರಚನೆಯಾದ ಮೊದಲ ದಿನದಿಂದ ಕಾಂಗ್ರೆಸ್ ನಾಯಕರು ಹೇಗೆ ಮಾತನಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ.

ಕೆಲ ಶಾಸಕರು ಅನುಮತಿ ಪಡೆಯದೆ ಬಂದಿದ್ದರೂ ನಾನು ಅವರೊಂದಿಗೆ ಕುಳಿತು ಮಾತನಾಡಿದ್ದೇನೆ. ಅವರ ಕ್ಷೇತ್ರದ ಸಮಸ್ಯೆ ಆಲಿಸಿದ್ದೇನೆ. ಅವರ ಕ್ಷೇತ್ರಕ್ಕೆ ಬೇಕಾದ ಅನುದಾನ ಒದಗಿಸಿದ್ದೇನೆ. 14 ತಿಂಗಳ ಅವದಿಯಲ್ಲಿ​ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 19 ಸಾವಿರ ಕೋಟಿ ಅನುದಾನ ಒದಗಿಸಿದ್ದೇನೆ. ಕಳೆದ ಕಾಂಗ್ರೆಸ್​ ಸರ್ಕಾರ ಸಾಧಿಲಾಗದಿದ್ದನ್ನ ನಾನು 14 ತಿಂಗಳಲ್ಲಿ ಸಾಧಿಸಿದ್ದೇನೆ ಎಂದಿದ್ದಾರೆ.

ನನ್ನ ಪಕ್ಷದ ನಾಯಕರಿಗೂಕಾಂಗ್ರೆಸ್​ ಜೊತೆ ಕೈ ಜೋಡಿಸೋದು ಇಷ್ಟವಿರಲಿಲ್ಲ. ಆದರೂ ನಾವು ಸರ್ಕಾರ ರಚನೆ ಮಾಡಬೇಕಾಯ್ತು. ಇಲ್ಲಿಯವರೆಗೆ ಯಾರೊಬ್ಬರೂ ಕೂಡ ನಾನು ಮಾಡಿದ ಕೆಲಸವನ್ನ ಗುರ್ತಿಸುತ್ತಿಲ್ಲ. ​ಇದು ನನಗೆ ತುಂಬಾ ನೋವುಂಟು ಮಾಡಿದೆ ಎಂದಿದ್ದಾರೆ.

ನನ್ನ ಕಾರ್ಯಕರ್ತರ ವಿರೋಧದ ನಡುವೆಯೂ ದೋಸ್ತಿ ಮಾಡಿಕೊಂಡು 14 ತಿಂಗಳು ಸರ್ಕಾರ ನಡೆಸಿದ್ದೇವೆ. ಕಾಂಗ್ರೆಸ್​ ಹೈಕಮಾಂಡ್ ನಮಗೆ ಉತ್ತಮ ಸಹಕಾರ ನೀಡುತ್ತಾ ಬಂದಿದೆ. ಭವಿಷ್ಯದಲ್ಲಿ ಏನಾಗುತ್ತೆ ಅಂತ ಕಾದು ನೋಡೋಣ ಎಂದಿದ್ದಾರೆ.

Intro:Body:3453543Conclusion:
Last Updated :Aug 7, 2019, 2:16 PM IST

ABOUT THE AUTHOR

...view details