ಕರ್ನಾಟಕ

karnataka

ಕೆಪಿಎಸ್​ಸಿ ಪರೀಕ್ಷೆ ಅಕ್ರಮ: 12 ಅಭ್ಯರ್ಥಿಗಳನ್ನು ಡಿಬಾರ್ ಮಾಡಿದ ಲೋಕಸೇವಾ ಆಯೋಗ

By

Published : Feb 9, 2021, 3:37 PM IST

ದ್ವಿತೀಯ ದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಭದಲ್ಲಿ ಅಕ್ರಮ ಎಸಗಿದ 12 ಅಭ್ಯರ್ಥಿಗಳನ್ನು 3 ವರ್ಷಗಳ ಕಾಲ ಡಿಬಾರ್ ಮಾಡಿ ಲೋಕಸೇವಾ ಆಯೋಗ ಆದೇಶ ಹೊರಡಿಸಿದೆ.

KPSC
ಕೆಪಿಎಸ್​ಸಿ

ಬೆಂಗಳೂರು: ದ್ವಿತೀಯ ದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಸಂಬಂಧ 12 ಅಭ್ಯರ್ಥಿಗಳನ್ನು 3 ವರ್ಷಗಳ ಕಾಲ ಡಿಬಾರ್ ಮಾಡಿ ಲೋಕಸೇವಾ ಆಯೋಗ ಆದೇಶ ಹೊರಡಿಸಿದೆ.

ರಾಜ್ಯಪತ್ರದ ಮೂಲಕ ಲೋಕಸೇವಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. ಅಕ್ರಮ‌ ಎಸಗಿದ 9 ಅಭ್ಯರ್ಥಿಗಳು ಕೆಪಿಎಸ್​ಸಿ ನಡೆಸುವ ಪರೀಕ್ಷೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿಸಲಾಗಿದೆ. 6 ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ. ಇನ್ನು ಮೂವರು ಅಭ್ಯರ್ಥಿಗಳನ್ನು ಮೂರು ವರ್ಷ ಅವಧಿಗೆ ಕೆಪಿಎಸ್​ಸಿ ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದೆ.

ಅಭ್ಯರ್ಥಿಗಳ ಅಮಾನತು ಮಾಡಿ ಆದೇಶ

2019ರ ಜೂನ್ 19 ರಂದು ನಡೆದಿದ್ದ ಪರೀಕ್ಷೆಯಲ್ಲಿ ಈ ಅಭ್ಯರ್ಥಿಗಳು ಅಕ್ರಮ ಎಸಗಿದ್ದರು. ಅಂಬ್ರೇಶ್, ಶಂಕರ್ ಗೌಡ, ಸಿದ್ದರಾಮ, ಪ್ರಿಯಾಂಕ ಕದಂ, ನಿಖಿತಾ ಖಲಾಲ್ ಸೇರಿದಂತೆ 12 ಅಭ್ಯರ್ಥಿಗಳಿಗೆ ಶಿಕ್ಷೆ ವಿಧಿಲಾಗಿದೆ‌. ಜೊತೆಗೆ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ಅಭ್ಯರ್ಥಿಗಳಿಗೆ 1 ಸಾವಿರ ರೂ. ದಂಡ ವಿಧಿಸಲಾಗಿದೆ.

ಅಭ್ಯರ್ಥಿಗಳ ಅಮಾನತು ಮಾಡಿ ಆದೇಶ

ಪರೀಕ್ಷೆಗೆ ಕೆಲವರು ಪಾನಮತ್ತರಾಗಿ ಬಂದು ಸಿಕ್ಕಿಬಿದ್ದಿದ್ದರು. ಕೆಲವರು ನಕಲಿ ಪ್ರವೇಶ ಪತ್ರ ತಂದಿದ್ದರು. ಕೆಲವರು ಬ್ಲೂಟೂತ್ ಮೂಲಕ ಕಾಪಿ ಮಾಡಿ ಸಿಕ್ಕಿ ಬಿದ್ದಿದ್ದರು. ಕೆಲವು ಓಎಂಆರ್ ಉತ್ತರ ಪ್ರತಿಗಳನ್ನು ಪರಿವೀಕ್ಷರಿಗೆ ಹಿಂತಿರುಗಿಸದೇ ತಮ್ಮ ಜೊತೆ ಕೊಂಡೊಯ್ದಿದ್ದರು.

ಅಭ್ಯರ್ಥಿಗಳ ಅಮಾನತು ಮಾಡಿ ಆದೇಶ

12 ಅಭ್ಯರ್ಥಿಗಳು ಪರೀಕ್ಷಾ ನಿಯಮ ಉಲ್ಲಂಘಿಸಿ ನೇಮಕಾತಿ ಉದ್ದೇಶಕ್ಕೆ ಅನುಚಿತ ಮಾರ್ಗವನ್ನು ಅನುಸರಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಅಭ್ಯರ್ಥಿಗಳು ಕಾರಣ ಕೇಳುವ ಪೊಲೀಸ್​ಗೆ ನೀಡಿರುವ ಲಿಖಿತ ಸಮಜಾಯಿಷಿಗಳನ್ನು ಪರಿಶೀಲಿಸಿ, ಸತ್ಯಾಸತ್ಯತೆಯನ್ನು ಅರಿಯಲು ವಿಚಾರಣಾಧಿಕಾರಿ ಹಾಗೂ ದಂಡನಾಧಿಕಾರಿಗಳನ್ನು ನಿಯೋಜಿಸಿದ್ದು, ಅವರು 4.11.2020 ರಂದು ವರದಿಯನ್ನು ಸಲ್ಲಿಸಿರುತ್ತಾರೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಇದೀಗ ಆಯೋಗ ಡಿಬಾರ್ ಆದೇಶ ಹೊರಡಿಸಿದೆ‌.

ABOUT THE AUTHOR

...view details