ಕರ್ನಾಟಕ

karnataka

ವಿಧಾನಸಭೆಯಲ್ಲಿ ಕರ್ನಾಟಕ ಸ್ಟಾಂಪ್​ (ಎರಡನೇ ತಿದ್ದುಪಡಿ) ವಿಧೇಯಕ ಅಂಗೀಕಾರ

By

Published : Feb 17, 2022, 3:29 PM IST

ಕಾಂಗ್ರೆಸ್ ಶಾಸಕರ ಪ್ರತಿಭಟನೆ ನಡುವೆ ವಿಧಾನಸಭೆಯಲ್ಲಿ ಇಂದು ಕರ್ನಾಟಕ ಸ್ಟಾಂಪ್​ (ಎರಡನೇ ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿತು.

Assembly
ವಿಧಾನಸಭೆ

ಬೆಂಗಳೂರು:ಕಾಂಗ್ರೆಸ್ ಶಾಸಕರ ಧರಣಿ, ಘೋಷಣೆಯ ನಡುವೆ ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ್ದ, 2022ನೇ ಸಾಲಿನ ಕರ್ನಾಟಕ ಸ್ಟಾಂಪ್​​​ (ಎರಡನೇ ತಿದ್ದುಪಡಿ) ವಿಧೇಯಕ ಇಂದು ಅಂಗೀಕಾರಗೊಂಡಿತು.

ಈ ವಿಧೇಯಕವು ಸ್ಟಾಂಪ್​​ ಸುಂಕದ ಗರಿಷ್ಠ ಮಿತಿಯನ್ನು ನಿಗದಿಪಡಿಲು ಕರ್ನಾಟಕ ಸ್ಟಾಂಪ್​​ ಅಧಿನಿಯಮ 1957ಕ್ಕೆ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಿದೆ.

ಇದನ್ನೂ ಓದಿ:ಉಭಯ ಸದನದಲ್ಲಿ ಕರ್ನಾಟಕ ಸ್ಟಾಂಪ್, ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕಗಳ ಮಂಡನೆ

ಮಾತೃ ಕಂಪನಿಯೊಂದಿಗೆ ಪೂರಕ ಕಂಪನಿಗಳ ವಿಲೀನತೆ ಸೇರಿದಂತೆ ಕಂಪನಿಗಳ ವಿಲೀನ, ಅಂಥ ಕಂಪನಿಗೆ ಪರಿಹಾರ ಒದಗಿಸುವ ಸಲುವಾಗಿ ಕಂಪನಿಯ ಪುನರ್ ರಚನೆ ಅಥವಾ ವಿಭಜನೆಯ ಸಂಬಂಧದಲ್ಲಿ ಕಂಪನಿಗಳ ಅಧಿನಿಯಮ 2013 ಅಡಿ ಉಚ್ಛನ್ಯಾಯಾಲಯವು ಅಥವಾ ಯುಕ್ತ ನ್ಯಾಯಾಧೀಕರಣಗಳು, ಯುಕ್ತ ಪ್ರಾಧಿಕಾರಗಳು ಆದೇಶವನ್ನು ಮಾಡಿದ್ದರೆ, ಅದಕ್ಕೆ ಪಾವತಿಸಬೇಕಾದ ಸ್ಟಾಂಪ್​​​ ಸುಂಕದ ಗರಿಷ್ಠ ಮಿತಿ ನಿಗದಿಪಡಿಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಸದನಕ್ಕೆ ಸಚಿವರು ಮನವರಿಕೆ ಮಾಡಿಕೊಟ್ಟರು.

ABOUT THE AUTHOR

...view details