ಕರ್ನಾಟಕ

karnataka

KPSC Recruitment: ಜ್ಯೂನಿಯರ್​ ಪ್ರೋಗ್ರಾಮರ್​ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

By

Published : Jul 28, 2023, 12:31 PM IST

KPSC Job Alert: ಈ ಹುದ್ದೆಗಳನ್ನು ಹೊರಗುತ್ತಿಗೆ ಅವಧಿ ಮೇರೆಗೆ ಆಯ್ಕೆ ಮಾಡಲಾಗುತ್ತಿದೆ.

junior programmer and other job recruitment form KPSC
junior programmer and other job recruitment form KPSC

ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ್ಯೂನಿಯರ್​ ಪ್ರೋಗ್ರಾಮರ್​, ಡಾಟಾಬೇಸ್​ ಆಡ್ಮಿನ್​ ನೆಟ್ವರ್ಕ್​ ಆಡ್ಮಿನ್​ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹಾರ್ಡ್​ವೇರ್​​ ಟೆಕ್ನಿಷಿಯನ್​ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ.

ಹುದ್ದೆಗಳ ವಿವರ: ಜೂನಿಯರ್​ ಪ್ರೋಗ್ರಾಮರ್​-1, ಡಾಟಾ ಬೇಸ್​ ಆಡ್ಮಿನ್​-1, ನೆಟ್​ವರ್ಕ್​ ಆಡ್ಮಿನ್​-1, ಹಾರ್ಡ್​ವೇರ್​ ಟೆಕ್ನಿಷಿಯನ್​-1 ಸೇರಿದಂತೆ ಒಟ್ಟು 4 ಹುದ್ದೆಗಳು.

ವಿದ್ಯಾರ್ಹತೆ: ಕಂಪ್ಯೂಟರ್​ ಸೈನ್ಸ್​​ ಅಥವಾ ಮಾಹಿತಿ ತಂತ್ರಜ್ಞಾನ​, ಇ &​ ಸಿನಲ್ಲಿ ಇಂಜಿನಿಯರಿಂಗ್​ ಪದವಿ ಅಥವಾ ಎಂಎಸ್ಸಿಯಲ್ಲಿ ಸಿಎಸ್​​, ಐಟಿ, ಐಎಸ್ ಐಚ್ಚಿಕ ವಿಷಯಗಳಲ್ಲಿ​​ ಪದವಿ.

ಕೆಪಿಎಸ್​ಸಿ ಅಧಿಸೂಚನೆ

ಆಯ್ಕೆ ಹೇಗೆ?: ಅಭ್ಯರ್ಥಿಗಳನ್ನು ಕಿರು ಪರೀಕ್ಷೆ ನಡೆಸಿದ ಬಳಿಕ ಶಾರ್ಟ್​ಲಿಸ್ಟ್ ಮಾಡಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಎನ್​ಐಸಿ ಸಂಸ್ಥೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಇರಲಿದೆ. ಅಭ್ಯರ್ಥಿಗಳನ್ನು 3 ವರ್ಷದ ಅವಧಿಗೆ ಗುತ್ತಿಗೆ ಆಧಾರದಡಿ ಆಯ್ಕೆ ಮಾಡಲಾಗುತ್ತದೆ. 1 ವರ್ಷದ ನಂತರ ಕಾರ್ಯದಕ್ಷತೆ ಪರಿಶೀಲಿಸಿ ನಂತರದ ಅವಧಿಯ ಬಗ್ಗೆ ನಿರ್ಧರಿಸಲಾಗುತ್ತದೆ. ಮೊದಲ ಮೂರು ತಿಂಗಳು ಪ್ರೊಬೇಷನರಿ ಅವಧಿ ಇರಲಿದೆ. ಕೆಪಿಎಸ್​ಸಿ ನಿಯಮದ ಅನುಸಾರ ವೇತನ ಮತ್ತು ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ನಿಗದಿತ ವಿದ್ಯಾರ್ಹತೆ ಮತ್ತು ಅಗತ್ಯ ಸೇವಾನುಭವದ ದಾಖಲೆ, ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ ಕುರಿತ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 7 ದಿನಗಳೊಳಗಾಗಿ ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: ಸುರಳ್ಕರ್​ ವಿಕಾಸ್​ ಕಿಶೋರ್​, ಭಾ.ಆ.ಸೇ, ಕಾರ್ಯದರ್ಶಿಗಳು, ಕರ್ನಾಟಕ ಲೋಕ ಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001. ಜುಲೈ 24ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 31 ಡೆಯ ದಿನಾಂಕ.

ಇದನ್ನೂ ಓದಿ: SSC Recruitment: ಜೆಇ ಹುದ್ದೆಗಳಿಗೆ ಅರ್ಜಿ ಆಹ್ವಾನ; ಆಗಸ್ಟ್​​ 16 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ABOUT THE AUTHOR

...view details