ಕರ್ನಾಟಕ

karnataka

ನಿಖಿಲ್‌ ಪುತ್ರ ಆವ್ಯಾನ್ ದೇವ್ ಹುಟ್ಟುಹಬ್ಬ: ಮರಿ ಮೊಮ್ಮಗನನ್ನು ಆಶೀರ್ವದಿಸಿದ ದೇವೇಗೌಡ್ರು

By

Published : Sep 25, 2022, 7:54 AM IST

ಶನಿವಾರ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ನಿವಾಸದಲ್ಲಿ ಅವರ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಅವರ ಪುತ್ರ ಆವ್ಯಾನ್ ದೇವ್ ಜನ್ಮದಿನವನ್ನು ಕೇಕ್‌ ಕತ್ತರಿಸಿ ಸರಳವಾಗಿ ಆಚರಿಸಲಾಯಿತು.

HD Deve Gowda participated in his grandson Avyan birthday
ನಿಖಿಲ್‌ ಕುಮಾರಸ್ವಾಮಿ ಪುತ್ರ ಆವ್ಯಾನ್ ಹುಟ್ಟುಹಬ್ಬ

ಬೆಂಗಳೂರು:ಜಾತ್ಯತೀತ ಜನತಾ ದಳದ ಯುವ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಅವರು ತಮ್ಮ ಪುತ್ರ ಆವ್ಯಾನ್ ದೇವ್ ಮೊದಲ ಹುಟ್ಟುಹಬ್ಬವನ್ನು ಶನಿವಾರ ಸರಳವಾಗಿ ಆಚರಿಸಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಅವರು ಮರಿ ಮೊಮ್ಮಗನನ್ನು ಆಶೀರ್ವದಿಸಿದರು.

ಮೊಮ್ಮಗನ ಜನ್ಮದಿನದ ಸಂಭ್ರಮದಲ್ಲಿ ಹೆಚ್‌ಡಿಕೆ ದಂಪತಿ

ಬೆಳಗ್ಗೆ ನಿಖಿಲ್‌ ಕುಮಾಸ್ವಾಮಿ ಕುಟುಂಬ ಸಮೇತ ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಹಾಗೂ ಅಭಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ತಮ್ಮ ಮಗನ ಹೆಸರಿನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬಳಿಕ, ಅಲ್ಲಿಯೇ ಅಭಿಮಾನಿಗಳು ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಕೇಕ್‌ ಕತ್ತರಿಸಿ ಆವ್ಯಾನ್ ದೇವ್​ಗೆ ಶುಭ ಹಾರೈಸಿದರು.

ಮರಿ ಮೊಮ್ಮಗನನ್ನು ಆಶೀರ್ವದಿಸಿದ ಮಾಜಿ ಪ್ರಧಾನಿ

ನಿನ್ನೆ ಸಂಜೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಕೇಕ್‌ ಕತ್ತರಿಸಿ ಆವ್ಯಾನ್ ದೇವ್ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೆಚ್.ಡಿ. ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ಮರಿ ಮೊಮ್ಮಗನನ್ನು ಆಶೀರ್ವದಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ನಿವಾಸದಲ್ಲಿಯೂ ಕೇಕ್‌ ಕತ್ತರಿಸಿ ಮೊಮ್ಮಗನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿ ಪುತ್ರ ಆವ್ಯಾನ್ ಜನ್ಮದಿನ: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ

ABOUT THE AUTHOR

...view details