ಕರ್ನಾಟಕ

karnataka

ಬಿಎಸ್​ವೈ ಭೇಟಿಯಾದ ಕೇಂದ್ರ ಸಚಿವ ಜೋಶಿ; ಕುತೂಹಲ ಕೆರಳಿಸಿದ ಉಭಯ ನಾಯಕರ ಭೇಟಿ!

By

Published : Feb 15, 2022, 5:25 AM IST

ಕಳೆದ ದಿನ ಸಂಜೆ ವೇಳೆ ಮಾಜಿ ಸಿಎಂ ಯಡಿಯೂರಪ್ಪರನ್ನು ಕೇಂದ್ರ ಸಚಿವ ಭೇಟಿಯಾಗಿದ್ದು, ಉಭಯ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

Former cm Yediyurappa, Former cm Yediyurappa meets to central minister Joshi, Yediyurappa meets to central minister pralhad Joshi, Bengaluru news, Bengaluru political news, Former cm Yediyurappa meets to central minister pralhad Joshi, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಯಡಿಯೂರಪ್ಪ ಭೇಟಿಯಾದ ಕೇಂದ್ರ ಸಚಿವ ಜೋಷಿ, ಬಿಎಸ್​ವೈ ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ, ಮಾಜಿ ಸಿಎಂ ಯಡಿಯೂರಪ್ಪ ಸುದ್ದಿ,
ಬಿಎಸ್​ವೈ ಭೇಟಿಯಾದ ಕೇಂದ್ರ ಸಚಿವ ಜೋಷಿ

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಮಾಜಿ ಸಿಎಂ ಬಿಎಸ್​ವೈ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಸಂಜೆ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಜೋಷಿ ಮಾಜಿ ಸಿಎಂ ಯಡಿಯೂರಪ್ಪ ಜೊತೆ ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಹೈ ಕಮಾಂಡ್ ಸಂದೇಶ ಮೂಲಕ ಯಡಿಯೂರಪ್ಪರನ್ನು ಜೋಷಿ ಭೇಟಿಯಾದ್ರಾ ಎಂಬ ಪ್ರಶ್ನೆ ಮೂಡಿದೆ.

ಓದಿ:ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಡಿಕೆಶಿಗೆ ಜಮೀರ್ ಅಹ್ಮದ್ ತಿರುಗೇಟು

ಮೊಮ್ಮಗಳ ಅಕಾಲಿಕ ನಿಧನ ಹಿನ್ನೆಲೆ ಸಾಂತ್ವಾನ ಹೇಳಲು ಜೋಷಿ ಬಿಎಸ್ ವೈರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ನಾಯಕತ್ವ ಬದಲಾವಣೆ, ಸಚಿವ ಸಂಪುಟ, ನಿಗಮ ಮಂಡಳಿ ನೇಮಕ ವಿಚಾರಗಳು ಚರ್ಚೆಯಲ್ಲಿದೆ. ಈ ವೇಳೆ ಜೋಶಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಈಗಾಗಲೇ ನಿಗಮ ಮಂಡಳಿ ಮತ್ತು ಸಂಪುಟ ವಿಸ್ತರಣೆಗೆ ತನ್ನದೆಯಾದ ಷರತ್ತು ಮೂಲಕ ಬಿಎಸ್​ವೈ ಬಿಗಿ ಪಟ್ಟು ಹಿಡಿದಿದ್ದರು. ಹೀಗಾಗಿ ಹೈಕಮಾಂಡ್ ಸಂದೇಶದ ಮೂಲಕ ಪ್ರಹ್ಲಾದ್ ಜೋಶಿ ಯಡಿಯೂರಪ್ಪರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಕಳೆದ ಎರಡು ಮೂರು ದಿನದ ಹಿಂದಷ್ಟೇ ದೆಹಲಿ ಪ್ರವಾಸದಿಂದ ಸಿಎಂ ವಾಪಾಸು ಆಗಿದ್ದರು. ಹೀಗಾಗಿ ಜೋಶಿ ಭೇಟಿ ಇದೀಗ ತೀವ್ರ ಕುತೂಹಲ ಕೆರಳಿಸಿದೆ.

ABOUT THE AUTHOR

...view details