ಕರ್ನಾಟಕ

karnataka

ರಾಜ್ಯದ 10 ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹುದ್ದೆಗೆ ಮೀಸಲಾತಿ ನಿಗದಿ

By

Published : Aug 24, 2022, 7:55 PM IST

ರಾಜ್ಯದ 10 ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಹುದ್ದೆಗಳ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.

Etv Bharatcorporation-mayor-deputy-mayor-reservation-list
Etv Bharatರಾಜ್ಯದ 10 ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹುದ್ದೆಗೆ ಮೀಸಲಾತಿ ನಿಗದಿ

ಬೆಂಗಳೂರು : ರಾಜ್ಯದ ಬೆಳಗಾವಿ, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕಲಬುರಗಿ, ದಾವಣಗೆರೆ ಸೇರಿದಂತೆ ಹತ್ತು ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಇಂದು ಅಧಿಸೂಚನೆ ಹೊರಡಿಸಿದೆ.

ಬಳ್ಳಾರಿ ಮತ್ತು ದಾವಣಗೆರೆಯ ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಮತ್ತು ಉಪಮೇಯರ್ ಎರಡೂ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸಿರುವುದು ವಿಶೇಷವಾಗಿದೆ. ಹತ್ತು ಮಹಾನಗರ ಪಾಲಿಕೆಗಳಲ್ಲಿ 4 ಮಹಾನಗರ ಪಾಲಿಕೆಗಳ (ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ತುಮಕೂರು) ಮೇಯರ್ ಸ್ಥಾನಗಳನ್ನು ಸಹ ಮಹಿಳೆಯರಿಗೆ ಮೀಸಲಿಡಲಾಗಿದೆ. ಅದರಂತೆ 6 ಮಹಾನಗರ ಪಾಲಿಕೆಗಳ ಉಪ ಮೇಯರ್ ಸ್ಥಾನ (ಬಳ್ಳಾರಿ, ಬೆಳಗಾವಿ, ದಾವಣಗೆರೆ, ಮಂಗಳೂರು, ಮೈಸೂರು, ಶಿವಮೊಗ್ಗ) ಕೂಡ ಮಹಿಳೆಯರಿಗೆ ಮೀಸಲಾಗಿದೆ.

ಆದೇಶ ಪ್ರತಿ

ಮಹಾನಗರ ಪಾಲಿಕೆ ಮೀಸಲಾತಿ ವಿವರ ಹೀಗಿದೆ:

  1. ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಬಿಸಿಎ ಮಹಿಳೆ, ಉಪ ಮೆಯರ್ - ಸಾಮಾನ್ಯ ಮಹಿಳೆ
  2. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಸಾಮಾನ್ಯ, ಉಪ ಮೇಯರ್ - ಎಸ್​​ಟಿ ಮಹಿಳೆ
  3. ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಸಾಮಾನ್ಯ ಮಹಿಳೆ, ಉಪ ಮೇಯರ್ - ಬಿಸಿಎ ಮಹಿಳೆ
  4. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಸಾಮಾನ್ಯ ಮಹಿಳೆ, ಉಪ ಮೇಯರ್ - ಸಾಮಾನ್ಯ ವರ್ಗ
  5. ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಎಸ್​​ಸಿ, ಉಪ ಮೇಯರ್ - ಸಾಮಾನ್ಯ
  6. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಸಾಮಾನ್ಯ, ಉಪ ಮೇಯರ್ - ಸಾಮಾನ್ಯ ಮಹಿಳೆ
  7. ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಸಾಮಾನ್ಯ, ಉಪ ಮೇಯರ್ - ಬಿಸಿಎ ಮಹಿಳೆ
  8. ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಬಿಸಿಎ, ಉಪ ಮೇಯರ್ - ಸಾಮಾನ್ಯ ಮಹಿಳೆ
  9. ತುಮಕೂರು ಮಾಹಾನಗರ ಪಾಲಿಕೆ ಮೇಯರ್ ಸ್ಥಾನ - ಎಸ್​ಸಿ ಮಹಿಳೆ , ಉಪ ಮೇಯರ್ - ಬಿಸಿಎ
  10. ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಸ್ಥಾನ - ಎಸ್ ಟಿ , ಉಪ ಮೇಯರ್ - ಬಿಸಿಬಿ

ಇದನ್ನೂ ಓದಿ:ಅತ್ಯಾಧುನಿಕ ಮೊಬೈಲ್ ಜಾಮರ್ ಬಗ್ಗೆ ಗೃಹ ಸಚಿವರಿಗೆ ಬಿಇಎಲ್​ನಿಂದ ಪ್ರಾತ್ಯಕ್ಷಿಕೆ

ABOUT THE AUTHOR

...view details