ಕರ್ನಾಟಕ

karnataka

ಮತದಾರರ ಮಾಹಿತಿ ಕಳ್ಳತನ ಆರೋಪ: ಸಮಗ್ರ ತನಿಖೆಗೆ ಸಿಎಂ ಸೂಚನೆ

By

Published : Nov 17, 2022, 1:46 PM IST

Updated : Nov 17, 2022, 10:51 PM IST

cm-basavaraj-bommai-reaction-on-congress-allegations
ಕಾಂಗ್ರೆಸ್​ನದ್ದು ಆಧಾರ ರಹಿತ ಆರೋಪ, ಅವರೆಲ್ಲ ವಿಚಾರಗಳಲ್ಲಿ ದಿವಾಳಿ: ಸಿಎಂ ಬೊಮ್ಮಾಯಿ

ಮತದಾರರ ಸಮೀಕ್ಷೆ ಹೆಸರಿನಲ್ಲಿ ಖಾಸಗಿತನಕ್ಕೆ ಕನ್ನ ಆರೋಪದಲ್ಲಿ ಕಾಂಗ್ರೆಸ್ ನಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ. ಸಂಬಂಧ ಇಲ್ಲದಿರುವುದನ್ನು ಕೇಳುತ್ತಿದ್ದಾರೆ. ಅದೇ ಮಾನದಂಡವಾದರೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಈವರೆಗೆ ಮೂರು ಬಾರಿ ರಾಜೀನಾಮೆ ನೀಡಬೇಕಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು:ಮತದಾರರ ಪಟ್ಟಿ ಅಕ್ರ‌ಮ ಸಂಬಂಧ ಕಾಂಗ್ರೆಸ್ ಆರೋಪ ನಿರಾಧಾರವಾಗಿದೆ. ಕಾಂಗ್ರೆಸ್​​ನವರು ತಮ್ಮ ವಿಚಾರಗಳಲ್ಲಿ ದಿವಾಳಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಮತದಾರರ ಸಮೀಕ್ಷೆ ಹೆಸರಿನಲ್ಲಿ ಖಾಸಗಿತನಕ್ಕೆ ಕನ್ನ ಹಾಕಲಾಗಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ವಹಿಸಿರುತ್ತಾರೆ. ಅವರು ಸಮೀಕ್ಷಾ ಕೆಲಸವನ್ನು ಎನ್​​ಜಿಓಗಳಿಗೆ ನೀಡಿರುತ್ತಾರೆ. ಇದೇನು ಮೊದಲ ಬಾರಿ ನೀಡಿರುವುದಲ್ಲ. 2018ರಲ್ಲಿ ಇದ್ದ ಸರ್ಕಾರದ ಕಾಲದಲ್ಲಿಯೂ ನೀಡಿದ್ದರು. ಎನ್​​ಜಿಓ ಬಿಎಲ್​ಡಿ ದುರ್ಬಳಕೆ ಮಾಡಿದ್ದಾರೆ. ಆದ್ದರಿಂದ ಚುನಾವಣಾ ಆಯೋಗ ನೀಡಿರುವ ಆದೇಶದಿಂದ ಮೊದಲುಗೊಂಡು ಇಡೀ ಪ್ರಕರಣದ ಸಮಗ್ರ ತನಿಖೆಗೆ ಸೂಚನೆ ನೀಡುತ್ತೇನೆ. ನಿಜಾಂಶ ಹೊರಗೆ ಬರಲಿ ಎಂದರು.

ಇದನ್ನೂ ಓದಿ:ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿ ನೀಡಿ ಮತದಾರರ ಮಾಹಿತಿ ಕಳ್ಳತನ: ಸಿದ್ದರಾಮಯ್ಯ

ಅಲ್ಲದೆ ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ. ಚಿಲುಮೆ ಸಂಸ್ಥೆ ನಮಗೆ ಗೊತ್ತಿಲ್ಲ. ರವಿಕುಮಾರ್ ಎಂಬಾತ ಗೊತ್ತು. ಆತನ ಹೆಸರು ರವಿ ಅಂತ ಎಂಬುದು ಗೊತ್ತಿದೆ ಅಷ್ಟೆ. ಸಚಿವ ಅಶ್ವತ್ಥ ನಾರಾಯಣಗೆ ಇರುವವರೆಲ್ಲ ಸಿಂಪಥೈಸರ್. ಅಶ್ವತ್ಥ ನಾರಾಯಣ ಅವರು ನಾಡಿಗೆ ಬೇಕು. ಹೀಗಾಗಿ ಕಾಂಗ್ರೆಸ್​ಗೆ ಭಯ ಆಗುತ್ತಿದೆ. ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ. ಸಂಬಂಧ ಇಲ್ಲದಿರುವುದನ್ನು ಕೇಳುತ್ತಿದ್ದಾರೆ. ಅದೇ ಮಾನದಂಡವಾದರೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಈವರೆಗೆ ಮೂರು ಬಾರಿ ರಾಜೀನಾಮೆ ನೀಡಬೇಕಿತ್ತು. ಇದೊಂದು ಆಧಾರ ರಹಿತ ಆರೋಪ ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುತ್ತಿದೆ: ಸುರ್ಜೇವಾಲಾ

Last Updated :Nov 17, 2022, 10:51 PM IST

ABOUT THE AUTHOR

...view details