ಕರ್ನಾಟಕ

karnataka

ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ : ಬೆಂಗಳೂರಲ್ಲಿ ಆ ದಿನ ಮನೆಗೆ ಬಂದಿದ್ದವರ ಮೇಲೆ ಗುಮಾನಿ

By

Published : Dec 25, 2022, 9:45 PM IST

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ- ಆತ್ಮಹತ್ಯೆಗೂ ಮುನ್ನ ದೇವಸ್ಥಾನಕ್ಕೆ ಹೋಗಿ ಬಂದಿದ್ದ ಕುಟುಂಬಸ್ಥರು - ಪ್ರಕರಣ ಸಂಬಂಧ ಪೊಲೀಸರಿಗೆ ದೂರು - ಅಪಾರ್ಟ್​ಮೆಂಟ್​ ಬಳಿ ಅಪರಿಚಿತರ ಗಲಾಟೆ

bengaluru-mahalaxmi-layout-suicide-case
ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ : ದಿನ ಆ ಮನೆಗೆ ಬಂದಿದ್ಯಾರು ?

ಬೆಂಗಳೂರು :ಸಿಲಿಕಾನ್​ ಸಿಟಿಯಲ್ಲಿ ಮನಕಲಕುವ ಪ್ರಕರಣವನ್ನು ನಡೆದಿದ್ದು, ಈ ಕೇಸ್​ ಕುರಿತು ತನಿಖೆ ಮುಂದುವರಿದಿದೆ.ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯಲ್ಲಿ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.

ಕಳೆದ ನಾಲ್ಕು ದಿನಗಳ ಹಿಂದೆ ಯಶೋಧ(70), ಸುಮನ್(32), ನರೇಶ್ (36) ಎಂಬವರು ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಾಥಮಿಕವಾಗಿ ಕೆಲ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದರು. ಇದಕ್ಕೆ ಪೂರಕವಾಗಿ ಅವರ ಮನೆಯಲ್ಲಿ ತಲಾ 30 ನಿದ್ರೆ ಮಾತ್ರೆಗಳ ಖಾಲಿ ಡಬ್ಬಿಗಳು ಪತ್ತೆಯಾಗಿದ್ದವು. ಇನ್ನು ಆರ್ಥಿಕ ಸಮಸ್ಯೆ, ಇಷ್ಟು ವಯಸ್ಸಾದ್ರು ತನ್ನಿಬ್ಬರು ಮಕ್ಕಳಿಗೆ ಮದುವೆ ಆಗದೇ ಇರುವುದು, ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.

ಎಲ್ಲರೊಂದಿಗೆ ಅನ್ಯೋನವಾಗಿದ್ದ ಕುಟುಂಬ.. ಆದರೆ ಏರಿಯಾದಲ್ಲಿ ಎಲ್ಲರೊಂದಿಗೆ ತುಂಬಾ ಚೆನ್ನಾಗಿದ್ದ ಈ ಕುಟುಂಬದ ಮೂವರು, ಕಳೆದ ಶನಿವಾರ ದೇವಸ್ಥಾನಕ್ಕೆ ಹೋಗಿ ಬಂದಿದ್ದರು. ಅಂದು ರಾತ್ರಿ ಮನೆಯ ಒಳಗೆ ಹೋದವರು ಮತ್ತೆ ಎಲ್ಲೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಅದೇ ದಿನ ರಾತ್ರಿ ಅಪಾರ್ಟ್ಮೆಂಟ್ ಬಳಿ ಐದರಿಂದ ಎಂಟು ಜ‌ನ ಅಪರಿಚಿತರು ಬಂದು ಗಲಾಟೆ ಮಾಡಿದ್ದರಂತೆ. ಅಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದಾರೆ ಎಂದು ಇಲ್ಲಿನ ಸೆಕ್ಯುರಿಟಿ ಗಾರ್ಡ್​ ಹೇಳಿದ್ದರು ಎಂದು ತಿಳಿದುಬಂದಿದೆ.

ಹಾಗಾದರೆ ಅಂದು ಅಲ್ಲಿಗೆ ಬಂದ ಅಪರಿಚಿತರು ಯಾರು..? ಯಾವ ಕಾರಣಕ್ಕಾಗಿ ಅಲ್ಲಿಗೆ ಬಂದಿದ್ದರು. ದೇವಸ್ಥಾನಕ್ಕೆ ಹೋಗಿ ಖುಷಿಯಿಂದ ಮನೆಗೆ ಬಂದಿದ್ದ ಮೂವರು ಅದೇ ದಿನ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ ಎಂಬ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಮೃತ ಯಶೋಧಮ್ಮ ಅವರ ಪುತ್ರಿ ಅಪರ್ಣ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೂವರ ಆತ್ಮಹತ್ಯೆಗೆ ಅಸಲಿ ಕಾರಣ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಆಗಿದ್ದೇನು ?: ತಾಯಿ ಯಶೋಧ ಅವರ ಜೊತೆಯಲ್ಲೇ ವಾಸವಿದ್ದ ಮಕ್ಕಳಾದ ಸುಮನ್ ಗುಪ್ತಾ ಹಾಗೂ ನರೇಶ್ ಗುಪ್ತಾ ಇಬ್ಬರೂ ಸಹ ಮದುವೆಯಾಗಿರಲಿಲ್ಲ. ಮತ್ತೋರ್ವ ಪುತ್ರಿ ಅಪರ್ಣಾ ಗುಪ್ತಾಗೆ ವಿವಾಹವಾಗಿದ್ದು, ರಾಜಾಜಿನಗರದಲ್ಲಿ ನೆಲೆಸಿದ್ದರು. ನರೇಶ್ ಗುಪ್ತಾ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿದ್ದರು.

ಕಳೆದ ನಾಲ್ಕು ತಿಂಗಳಿನಿಂದ ಯಶೋಧ ಕುಟುಂಬ ಮಹಾಲಕ್ಷ್ಮಿ ಲೇಔಟ್​ನಲ್ಲಿರುವ ಅಪಾರ್ಟ್ಮೆಂಟಿನಲ್ಲಿ ವಾಸವಿತ್ತು. ಶನಿವಾರ ಅಪರ್ಣಾಗೆ ಕರೆ ಮಾಡಿ ಇಡೀ ಮನೆಯವರು ಮಾತನಾಡಿದ್ದಾರೆ. ಆದರೆ ಅದಾದ ಬಳಿಕ ಯಾವುದೇ ಕರೆಗೆ ಉತ್ತರಿಸಿಲ್ಲ. ಇದರಿಂದ ಗಾಬರಿಗೊಂಡ ಅಪರ್ಣಾ, ಇವರ ಮನೆಗೆ ಬಂದು ನೋಡಿದಾಗ ಮೂವರು ಸಹ ಶವವಾಗಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ :ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ: ಸಾಲವೇ ಕುಟುಂಬಕ್ಕೆ ಶೂಲವಾಯ್ತಾ?

ABOUT THE AUTHOR

...view details